ಮಂಡ್ಯ: ಕೆರೆಯಲ್ಲಿ ಮುಳುಗಿ ತಾಯಿ ಮಗ ಸೇರಿದಂತೆ ಮೂವರು ಸಾವಿಗೀಡಾದ ದಾರುಣ ಘಟನೆ ವಳಗೆರೆಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ವಳಗೆರಹಳ್ಳಿ ಗ್ರಾಮದ ಶೈಲಜಾ(40), ಮಗ ತೇಜಸ್(10)ಹಾಗೂ ಪಕ್ಕದ ಮನೆಯ ಯೋಗೇಶ್ ಗೌಡ(12) ಮೃತ ದುರ್ದೈವಿಗಳು.
ಮದ್ದೂರಮ್ಮನ ಕೆರೆಯ ಹಿನ್ನೀರಿನಲ್ಲಿ ಇವರ ಶವಗಳು ದೊರೆತಿವೆ. ಮೂವರೂ ಹಸು ಮೇಯಿಸಲು ಹೋಗಿದ್ದು, ವಾಪಸ್ಸಾಗುವಾಗ ಕೆರೆಯ ಆಳದ ಗುಂಡಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಸಂಜೆ ಮನೆಗೆ ಬಾರದ್ದರಿಂದ ಅನುಮಾನಗೊಂಡು ಹುಡುಕಿದಾಗ ಘಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಮೂವರ ಶವ ಹೊರ ತೆಗೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿಲ್ಲಿಸದ್ದರಿಂದ ಜಿಗಿದ ವಿದ್ಯಾರ್ಥಿನಿ ಸಾವು, ವಿದ್ಯಾರ್ಥಿಗಳ ಪ್ರತಿಭಟನೆ
ಬಳ್ಳಾರಿ: ಹೂವಿನಹಡಗಲಿಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಎಂಜಿನಿಯರಿಂಗ್ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬುಧವಾರ ಬಸ್‌ನಲ್ಲಿ ಹೋಗುತ್ತಿದ್ದಾಗ ತನ್ನ ಕಾಲೇಜು ಸ್ಟಾಪ್ ಬಂದರೂ ಬಸ್ ಅನ್ನು ನಿಲ್ಲಿಸದೇ ಇದ್ದಿದ್ದರಿಂದ ಕೆಳಗೆ ಜಿಗಿದು (Road Accident) ಗಂಭೀರವಾಗಿ ಗಾಯಗೊಂಡಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾಳೆ.
ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ ಇದಾಗಿದೆ. ಹೂವಿನಹಡಗಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾ ಮೃತ ವಿದ್ಯಾರ್ಥಿನಿ. ಈಕೆ ಇ & ಸಿ ವಿಭಾಗದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾಳೆ.
ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾ ಎಂದಿನಂತೆ ಬುಧವಾರವೂ ಕಾಲೇಜಿಗೆ ಬಸ್‌ನಲ್ಲಿ ಹೊರಟಿದ್ದಾಳೆ. ಈ ವೇಳೆ ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ ಅನ್ನು ಹತ್ತಿದ್ದಾಳೆ. ಆದರೆ, ಕಾಲೇಜು ಬಳಿಯ ಬಸ್ ಸ್ಟಾಪ್ ಬಂದರೂ ಬಸ್ ಅನ್ನು ನಿಲ್ಲಿಸಲಿಲ್ಲ. ಇದರಿಂದ ಆಕೆ ಕಾಲೇಜಿಗೆ ಹೋಗಲೇಬೇಕೆಂದು ಬಸ್ ಚಲಿಸುತ್ತಿದ್ದಾಗಲೇ ಕೆಳಕ್ಕೆ ಜಿಗಿದಿದ್ದಾಳೆ.
ಹೀಗೆ ಬಸ್‌ನಿಂದ ಕೆಳಗೆ ಜಿಗಿದಿದ್ದರಿಂದ ನಿಯಂತ್ರಣ ಸಿಗದೆ ಆಕೆ ನೆಲಕ್ಕೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಘಟನೆ ನಂತರ ಸಾರಿಗೆ ಬಸ್ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನ ಮಾಡಿದ್ದಾರೆ.
ಇದನ್ನೂ ಓದಿ: