Site icon Vistara News

Drowned in Canal: ಕಾಲುವೆ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಹಿತ ಮೂವರ ಸಾವು

Three people died after drowned in canal water at Lakkavalli

Three people died after drowned in canal water at Lakkavalli

ಚಿಕ್ಕಮಗಳೂರು: ಒಂದು ಕಡೆ ರಾಜ್ಯಾದ್ಯಂತ ಸುರಿದ ಮಳೆ ಎಂಟು ಮಂದಿಯನ್ನು ಬಲಿ ಪಡೆದು ಕೇಕೆ ಹಾಕುತ್ತಿದ್ದರೆ ಇತ್ತ ಮೂವರು ನೀರಿನಲ್ಲಿ ಮುಳುಗಿ ಪ್ರಾಣ (Drowned in canal) ಕಳೆದುಕೊಂಡಿದ್ದಾರೆ. ಕಾಲುವೆ ನೀರಿನಲ್ಲಿ ಆಟವಾಡಲು ಹೋದ ಮೂವರು ಮೃತಪಟ್ಟಿದ್ದಾರೆ.

ತರೀಕೆರೆ ತಾಲೂಕಿನ ಭದ್ರಾ ಡ್ಯಾಂ (Bhadra dam) ಪಕ್ಕದ ಕಾಲುವೆಯಲ್ಲಿ ಘಟನೆ ನಡೆದಿದ್ದು, ರವಿ (31), ಅನನ್ಯ (17), ಶಾಮವೇಣಿ (16) ಮೃತ ದುರ್ದೈವಿಗಳು. ನೀರಿನಲ್ಲಿ ಆಟವಾಡುವಾಗ ಆಯ ತಪ್ಪಿ ಬಿದ್ದು ಮೂವರ ಸಾವು ಸಂಭವಿಸಿದೆ. ನೀರಿಗೆ ಬಿದ್ದ ಒಬ್ಬರ ರಕ್ಷಣೆಗೆ ಇನ್ನೊಬ್ಬರು ಹೋಗಿ ಒಟ್ಟು ಮೂವರೂ ಮೃತಪಟ್ಟರು.

ರವಿ ಅವರು ತರೀಕೆರೆಯ ಲಕ್ಕವಳ್ಳಿ ನಿವಾಸಿ. ಅವರ ಮನೆಗೆ ಅವರ ಅಕ್ಕನ ಮಕ್ಕಳಾದ ಅನನ್ಯ ಮತ್ತು ಶಾಮವೇಣಿ ಬಂದಿದ್ದರು. ಈ ಮಕ್ಕಳು ಮತ್ತು ಮಾವ ರವಿ ಲಕ್ಕವಳ್ಳಿಯ ಭದ್ರಾ ಡ್ಯಾಂ ಪಕ್ಕದ ಕಾಲುವೆ ನೋಡಲು ಬಂದಿದ್ದರು. ಈ ವೇಳೆ ಒಬ್ಬಳು ನೀರಿಗಿಳಿದ ವೇಳೆ ಆಯತಪ್ಪಿ ಬಿದ್ದರು. ಆಗ ಇನ್ನೊಬ್ಬಳು ರಕ್ಷಣೆಗೆ ಹೋಗಿದ್ದಾಳೆ. ಅವರನ್ನು ರಕ್ಷಿಸಲೆಂದು ರವಿ ನೀರಿಗೆ ಧುಮುಕಿದ್ದಾರೆ.

ಕೂಡಲೇ ಊರಿನವರಿಗೆ ವಿಷಯ ತಿಳಿದು ಧಾವಿಸಿ ರಕ್ಷಣೆಗೆ ಮುಂದಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರವಿಯ ಮೃತದೇಹ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಲಕ್ಕವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಅನನ್ಯ ಮೂಲತಃ ಶಿವಮೊಗ್ಗದವರಾದರೆ ಶಾಮವೇಣಿ ಅವರು ನಂಜನಗೂಡಿನವರು. ಮೂರೂ ಮನೆಗಳವರ ಆಕ್ರಂದನ ಮುಗಿಲು ಮುಟ್ಟಿದೆ.

ರಾಮನಗರದಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ರಾಮನಗರ: ಜಿಲ್ಲೆಯ ರಾಮನಗರ ‌ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ರೌಡಿಯೊಬ್ಬನನ್ನು ಬರ್ಬರವಾಗಿ ಕೊಂದು ಎಸೆಯಲಾಗಿದೆ.
ಬೆಂಗಳೂರನ ಯಲಹಂಕ ನಿವಾಸಿ ಸಂತೋಷ್ (35) ಎಂಬಾತನ ಶವವನ್ನು ಕೆರೆಯ ಬಳಿ ಎಸೆಯಲಾಗಿದೆ. ಆತನನ್ನು ಅಲ್ಲಿಯೇ ತಂದು ಕೊಲೆ ಮಾಡಲಾಯಿತೋ ಅಥವಾ ಕೊಂದು ತಂದು ಅಲ್ಲಿ ಎಸೆಯಲಾಯಿತೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

ಸಂತೋಷ್‌ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಹಿಂದಿನ ಕೊಲೆ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ಅಸುರಕ್ಷಿತ ಅಂಡರ್‌ಪಾಸ್‌ ಬಂದ್‌; ಮಳೆಗಾಲ ಮುಗಿಯುವವರೆಗೆ ಕ್ರಮ

Exit mobile version