Site icon Vistara News

Dharwad News: ಧಾರವಾಡದ ಹೋಟೆಲ್‌ನಲ್ಲಿ ಪುಂಡರ ದಾಂಧಲೆ, ಹಲ್ಲೆ: ಮೂವರು ಸಿಬ್ಬಂದಿಗೆ ಗಾಯ

Dharwad hotel staff attacked

Dharwad hotel staff attacked

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯ ಬಳಿ ಇರುವ ಹೋಟೆಲ್‌ಗೆ ಪುಂಡರು ನುಗ್ಗಿ ದಾಂಧಲೆ ನಡೆಸಿ, ಹಲ್ಲೆ ಮಾಡಿದ್ದರಿಂದ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅರೆ ನಗ್ನರಾಗಿ ಬಂದಿದ್ದ ಇಬ್ಬರು ಯುವಕರನ್ನು ತಡೆದು ಬುದ್ಧಿ ಹೇಳಿದ್ದಕ್ಕೆ ಮಾಲೀಕರು ಸೇರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

‌ಅಖಿಲೇಶ್ ಯಾದವ್, ದೀಪಾ ಯಾದವ್, ದೀಪಕ್ ಯಾದವ್ ಗಾಯಗೊಂಡವರು. ಧಾರವಾಡದ ವಿಕೆ ಪ್ಯಾಲೇಸ್‌ಗೆ ಮೊದಲಿಗೆ ಅರೆನಗ್ನರಾಗಿ ಇಬ್ಬರು ಯುವಕರು ಬಂದಿದ್ದಾರೆ. ಈ ರೀತಿ ಹೋಟೆಲ್‌ಗೆ ಬರಬೇಡಿ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ಹೋಟೆಲ್ ಮಾಲೀಕರು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರು, ತಮ್ಮ ಗುಂಪಿನವರನ್ನು ಕರೆದುಕೊಂಡು ಬಂದು ದಾಂಧಲೆ ನಡೆಸಿದ್ದಾರೆ.

ಇನ್ನೂ ಓದಿ | Road Accident: ಗೂಡ್ಸ್ ವಾಹನ-ಕಾರು ಡಿಕ್ಕಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರಿಂದ ಹೋಟೆಲ್ ಸಿಬ್ಬಂದಿ, ಮಾಲೀಕರು ಸೇರಿ ಮೂವರು ಗಾಯಗೊಂಡಿದ್ದಾರೆ. ಪುಂಡರು ದಾಂಧಲೆ ನಡೆಸಿದ ದೃಶ್ಯಾವಳಿ ಹೋಟೆಲ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version