Site icon Vistara News

Terrorists punished : ಪಾಕಿಸ್ತಾನಿ ಸಹಿತ ಮೂವರು ಉಗ್ರರನ್ನು ದೋಷಿಗಳೆಂದ ಕೋರ್ಟ್‌; ಶಿಕ್ಷೆ ಪ್ರಮಾಣ ಫೆ. 27ಕ್ಕೆ ಪ್ರಕಟ

Terrorism

ಬೆಂಗಳೂರು: ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಒಬ್ಬ ಪಾಕ್‌ ಪ್ರಜೆಯೂ ಸೇರಿದಂತೆ ಮೂವರು ಉಗ್ರರನ್ನು ಕೋರ್ಟ್‌ ದೋಷಿಗಳೆಂದು (Terrorists punished) ಸಾರಿದೆ. ಅವರಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಬೇಕು ಎನ್ನುವುದನ್ನು ಫೆಬ್ರವರಿ ೨೭ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ.

ಸಿಸಿಬಿಯ ಸಂಘಟಿತ ಅಪರಾಧ ದಳದ ಪೊಲೀಸರು ೨೦೧೨ರಲ್ಲಿ ಬೆಂಗಳೂರಿನಲ್ಲಿ ಮೂವರು ಉಗ್ರರನ್ನು ಬಂಧಿಸಿದ್ದರು. ಸೈಯದ್ ಅಬ್ದುಲ್ ರೆಹಮಾನ್, ಮೊಹ್ಮದ್ ಫಯಾದ್, ಅಫ್ಸರ್‌ ಪಾಷಾನನ್ನು ಆವತ್ತು ಬಂಧಿಸಲಾಗಿತ್ತು. ಇವರ ಪೈಕಿ ಮೊಹ್ಮದ್‌ ಫಯಾದ್‌ ಪಾಕಿಸ್ತಾನಿ ಪ್ರಜೆಯಾಗಿದ್ದ. ಇವರನ್ನು ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು ಬಳಿಕ ಚಾರ್ಜ್‌ಶೀಟ್‌ ಸಲ್ಲಿಸಿದ್ದು ಬಳಿಕ ಕೋರ್ಟ್‌ನಲ್ಲಿ ವಿಚಾರಣೆ ಆರಂಭಗೊಂಡಿತ್ತು.

ಮೊಹ್ಮದ್ ಫಯಾದ್‌ ಮತ್ತು ಇಬ್ಬರು ಸೇರಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ವಿವರ ನೀಡಲಾಗಿತ್ತು. ಫಯಾದ್‌ ಭಾರತದಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಯುವಕರನ್ನು ಸಂಘಟಿಸುತ್ತಿದ್ದ ಎಂದು ದೂರಲಾಗಿತ್ತು. ದಾಳಿ ನಡೆಸಿದ್ದ ಪೊಲೀಸರು ಆರೋಪಿಗಳಿಂದ ಸ್ಫೋಟಕ ಸೇರಿದಂತೆ ಮದ್ದುಗುಂಡುಗಳನ್ನ ವಶಪಡಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ದೋಷಿಗಳೆಂದು ಘೋಷಿಸಿದೆ. ಪೆ. 27ರಂದು ಶಿಕ್ಷೆ ಪ್ರಕಟಿಸಲಾಗುವುದು ಎಂದು ಪ್ರಕಟಿಸಿದೆ. ಈ ಆರೋಪಿಗಳು ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದರು.

ಇದನ್ನೂ ಓದಿ ; Karachi Attack: ಉಗ್ರ ಪೋಷಣೆಗೆ ಬೆಲೆ ತೆತ್ತ ಪಾಕ್‌, ಬಾಂಬ್‌ ದಾಳಿ ಮಾಡಿದ್ದು ತಾಲಿಬಾನ್‌ ಅಲ್ಲ, ಸ್ಥಳೀಯ ಟಿಟಿಪಿ ಉಗ್ರರು

Exit mobile version