Site icon Vistara News

Gold Smuggling: ಬ್ಲೌಸ್, ಗುಪ್ತಾಂಗ, ಡ್ರೈಫ್ರೂಟ್ಸ್‌ನಲ್ಲಿ ಚಿನ್ನ ಸಾಗಣೆ; ಮೂವರು ಮಹಿಳೆಯರ ಬಂಧನ

gold smuggling

ದೇವನಹಳ್ಳಿ: ವಿದೇಶದಿಂದ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದ‌ ಮೂವರು ಖತರ್ನಾಕ್ ಮಹಿಳೆಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಚಿನ್ನ ಸಾಗಿಸುತ್ತಿದ್ದಾಗ (Gold Smuggling) ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 67. 57 ಲಕ್ಷ ರೂ. ಮೌಲ್ಯದ 1. 13 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಕೌಲಾಲಂಪುರ ಮತ್ತು ಕುವೈತ್‌ನಿಂದ ಬಂದ ಮೂವರು ಮಹಿಳೆಯರು, ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಕಳ್ಳ ಸಾಗಣೆ ಮಾಡಲು ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಸಾಗಿಸುತ್ತಿದ್ದರು.

ಒಬ್ಬ ಮಹಿಳೆ ಬ್ಲೌಸ್ ಒಳಗಡೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಳು, ಮತ್ತೊಬ್ಬ ಮಹಿಳೆ ಕ್ಯಾಪ್ಸೂಲ್‌ಗಳಲ್ಲಿ ಚಿನ್ನವನ್ನಿಟ್ಟು ಗುಪ್ತಾಂಗದಲ್ಲಿ ಅಡಗಿಸಿಕೊಂಡಿದ್ದಳು. ಅದೇ ರೀತಿ ಇನ್ನೊಬ್ಬ ಮಹಿಳೆ ಚಿಕ್ಕ‌‌ ಚಿಕ್ಕ ತುಂಡುಗಳಾಗಿ ಗೋಲ್ಡ್ ಬಿಸ್ಕೆಟ್ ಕಟ್ ಮಾಡಿ‌ ಡ್ರೈಫ್ರೂಟ್ಸ್‌ನಲ್ಲಿ ಬೆರೆಸಿಕೊಂಡು ಸಾಗಿಸುತ್ತಿದ್ದಳು. ಇದನ್ನು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ನಂತರ ಎಲ್ಲವನ್ನೂ ಇಂಚಿಂಚೂ ಚೆಕ್ ಮಾಡಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Murder Case: ಮಾಲೂರಿನಲ್ಲಿ ಗ್ರಾಪಂ ಸದಸ್ಯನ ಬರ್ಬರ ಕೊಲೆ

1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ‌ ಬಿದ್ದ ಕೃಷಿ ಅಧಿಕಾರಿ

ಮಂಗಳೂರು: 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಕೃಷಿ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ‌ ಬಿದ್ದಿರುವ ಘಟನೆ ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದಿದೆ.

ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ ಅವರು 50 ಲಕ್ಷ ಸಸಿ ವಿತರಣೆ ಬಿಲ್ ಪಾಸ್ ಮಾಡಲು ದೂರುದಾರ ಪರಮೇಶ್‌ಗೆ ಶೇ. 18 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ 1 ಲಕ್ಷ ರು. ಸ್ವೀಕರಿಸುವಾಗ ಮಂಗಳೂರು ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಸಾಲದ ಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

ಹುಬ್ಬಳ್ಳಿ: ಸಾಲದ ಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ ಪೂಜಾರ (59) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಕೆನರಾ ಬ್ಯಾಂಕ್‌ನಲ್ಲಿ 3 ಲಕ್ಷ ಹಾಗೂ ಬೇರೆಡೆ 2 ಲಕ್ಷ ಸಾಲ ಮಾಡಿದ್ದರು. ಜತೆಗೆ ಟ್ರ್ಯಾಕ್ಟರ್ ಸಾಲ 4.50 ಲಕ್ಷ ರೂ. ಮಾಡಿದ್ದರು ಎನ್ನಲಾಗಿದೆ. ಮಳೆ ಬಾರದೆ ಬೆಳೆ ಹಾಳಾಗಿದ್ದರಿಂದ ಮನನೊಂದು ರೈತ ನೇಣಿಗೆ ಶರಣಾಗಿದ್ದಾರೆ.

Exit mobile version