Site icon Vistara News

Child falls from Balcony: ಆಟವಾಡುತ್ತಾ ಬಾಲ್ಕನಿಯಿಂದ ಕೆಳಗೆ ಬಿದ್ದ 3 ವರ್ಷದ ಮಗು; ತಲೆಗೆ ಗಂಭೀರ ಗಾಯ

Child falls from Balcony

#image_title

ಬೆಂಗಳೂರು: ಮೂರು ವರ್ಷದ ಮಗುವೊಂದು ಆಟವಾಡುತ್ತಾ ಆಟವಾಡುತ್ತಾ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ನಗರದ ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ (child falls from Balcony) ಈ ಘಟನೆ ನಡೆದಿದೆ.

ಶಿವಪ್ಪ ದಂಪತಿಯ ಪುತ್ರ ರಾಹುಲ್ (3) ಗಾಯಾಳು. ಮನೆಯ ಬಾಲ್ಕನಿಯಲ್ಲಿ ಬಾಲಕ ಚೇರ್ ಹಾಕಿಕೊಂಡು ಅದರ ಮೇಲೆ ಬೆಡ್ ಶೀಟ್‌ ಹಾಕಿದ್ದಾನೆ. ನಂತರ ಅದರ ಮೇಲೆ ಹತ್ತಲು ಹೋಗಿ ಕೆಳಗೆ ಬಿದ್ದಿದ್ದಾನೆ. ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ ಇಲ್ಲಿದೆ

ತಂದೆ ತಾಯಿ ಮನೆಯ ಒಳಗಿದ್ದರೆ ಬಾಲಕ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಈ ವೇಳೆ ಆತ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಮಗು ಬಿದ್ದ ಭಯಾನಕ ದೃಶ್ಯ

ಅಪಾರ್ಟ್‌ಮೆಂಟ್‌ನ ಗ್ರೌಂಡ್‌ಫ್ಲೋರ್‌ನಲ್ಲಿ ವೃದ್ಧೆಯೊಬ್ಬರು ಬುಟ್ಟಿ ನೇಯುತ್ತಾ ಕುಳಿತ್ತಿದ್ದಾಗ, ಎರಡನೇ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದೆ. ಇದ್ಯಾವುದು ಕ್ಷಣಕಾಲ ವೃದ್ಧೆಯ ಅರಿವಿಗೆ ಬಂದಿಲ್ಲ. ಆದರೆ ಮಗು ಬಿದ್ದ ರಭಸದ ಶಬ್ಧ ಕೇಳಿ ಮೊದಲನೇ ಮಹಡಿಯಲ್ಲಿದ್ದ ಯುವತಿಯೊಬ್ಬರು ಚೀರುತ್ತಾ ಓಡಿ ಬಂದಿದ್ದಾರೆ. ಯಾರಾದರೂ ಬನ್ನಿ ಎಂದು ಕೂಗಿ ಕೊಂಡಿದ್ದು, ಕೆಳಗೆ ಬಿದ್ದ ಮಗುವನ್ನು ಓಡಿ ಹೋಗಿ ಎತ್ತಿಕೊಂಡಿದ್ದಾರೆ.

ಇದನ್ನೂ ಓದಿ: BMTC Fire tragedy: ಕ್ಷಣಾರ್ಧದಲ್ಲಿ ಹೊತ್ತಿ ಉರಿವ ಬಸ್‌ಗಳು; ಬೆಂಗಳೂರಿನಲ್ಲಿ ಬಿಎಂಟಿಸಿ ಓಡಾಟ ಎಷ್ಟು ಸೇಫ್‌?

ಮಹಿಳೆಯರ ಚೀರಾಟ ಕೇಳಿ ಓಡಿ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ನಿವಾಸಿಗಳು, ಬಳಿಕ ಮಗುವಿನ ಪೋಷಕರು ಓಡಿ ಬಂದಿದ್ದು, ಪ್ರಜ್ಞೆ ತಪ್ಪಿದ್ದ ಮಗುವನ್ನು ಮಾತನಾಡಲು ಪ್ರಯತ್ನಿಸಿದ್ದಾರೆ. ಇತ್ತ ಮಹಡಿಯಿಂದ ಮಗು ಬಿದ್ದಿರುವ ಸುದ್ದಿ ಕೇಳಿ ಅಕ್ಕಪಕ್ಕದ ನಿವಾಸಿಗಳು ಎಲ್ಲರೂ ದಂಗಾಗಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version