ಬೆಂಗಳೂರು: ನಗರದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ (Murder Case) ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ (ಜನವರಿ 29) ರಾತ್ರಿ ನಡೆದಿದೆ.
ಬಾಲಕಿ ಕುಟುಂಬದ ಪರಿಚಯಸ್ಥನೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಗಂಡನನ್ನು ಬಿಟ್ಟು ಆರೋಪಿ ಜತೆ ಬಾಲಕಿ ತಾಯಿ ವಾಸವಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಮಗುವನ್ನು ನೋಡಿಕೊಳ್ಳುತ್ತಿದ್ದ ಆರೋಪಿ, ಗಾಂಜಾ ನಶೆಯಲ್ಲಿ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಐ
ಬೆಂಗಳೂರು: ಇ-ಖಾತೆ ಮಾಡಿಕೊಡಲು ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕಂದಾಯ ಅಧಿಕಾರಿಯೊಬ್ಬರು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರ್‌ಐ ವಸಂತ್ ಕುಮಾರ್ ಬಂಧಿತ ಅಧಿಕಾರಿ. ಸಂಜಯ್ ನಗರ ವಾರ್ಡ್ ನಂಬರ್ 19ರಲ್ಲಿ ಆರ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಸಂತ್ ಕುಮಾರ್, ಇ-ಖಾತೆ ಮಾಡಿಕೊಡಲು ಸುಬ್ರಮಣಿ ಎಂಬುವವರಿಗೆ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ | Suicide Case : ನಿರ್ಮಾಣ ಹಂತದ ಸ್ವಂತ ಮನೆಯಲ್ಲೇ ಮಾಲೀಕ ಆತ್ಮಹತ್ಯೆ, ದೃಷ್ಟಿ ಬೊಂಬೆ ಕಟ್ಟದ್ದೇ ಕಾರಣ ಎಂದರು ಜನ!