Site icon Vistara News

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

youths rescued in Kaveri river

ಮೈಸೂರು: ಜಿಲ್ಲೆಯ ತಲಕಾಡಿನ ಕಾವೇರಿ ನದಿ (Kaveri River) ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗುತ್ತಿದ್ದು, ಅವರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ (Video Viral) ಆಗಿದೆ.

ಮಂಡ್ಯ ಜಿಲ್ಲೆಯ ಕೆಸ್ತೂರು ಗ್ರಾಮದ 7 ಜನ ಯುವಕರು ತಲಕಾಡಿಗೆ ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಅವರಲ್ಲಿ ಮೂರು ಮಂದಿ ನದಿಯಲ್ಲಿ ಈಜಲು ಹೋಗಿದ್ದಾರೆನ್ನಲಾಗಿದೆ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಆಗ ಎಲ್ಲರೂ ಕಾಪಾಡುವಂತೆ ಕಿರುಚಿಕೊಂಡಿದ್ದಾರೆ. ಅವರು ಎಷ್ಟೇ ಪ್ರಯತ್ನ ಪಟ್ಟರೂ ಈಜಿ ದಡ ಸೇರಲು ಆಗಲಿಲ್ಲ.

ಹೀಗಾಗಿ ಎಲ್ಲರೂ ಮುಳುಗುವ ಹಂತದಲ್ಲಿದ್ದರು. ಈ ವೇಳೆ ಅಲ್ಲೇ ತೆಪ್ಪ ನಡೆಸುತ್ತಿದ್ದ ಕಿಟ್ಟಿ ಎಂಬುವವರು ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಅವರು ರಕ್ಷಣೆ ಮಾಡುವುದು ಸ್ವಲ್ಪ ವಿಳಂಬವಾಗಿದ್ದರೂ ಈ ಮೂವರು ಯುವಕರು ನೀರು ಪಾಲಾಗುತ್ತಿದ್ದರು.

ಇದನ್ನೂ ಓದಿ: Contaminated Water: ಕೊಪ್ಪಳ ಆಯ್ತು ಬೆಂಗಳೂರಲ್ಲೀಗ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ವಿಡಿಯೊ ವೈರಲ್‌

ಈ ಮೂವರು ಯುವಕರನ್ನು ರಕ್ಷಣೆ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೊ ಮಾಡಿಕೊಂಡಿದ್ದು, ಅದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈಗ ತೆಪ್ಪ ಓಡಿಸುವ ಯುವಕ ಕಿಟ್ಟಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

ಚಾಮರಾಜನಗರ: ವನ್ಯಜೀವಿಧಾಮದಲ್ಲಿ ಸಫಾರಿ ಹೋಗುವಾಗ ಎಚ್ಚರಿಕೆ ವಹಿಸಲೇಬೇಕು. ಈ ವೇಳೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲೇಬೇಕು. ಹೊರಡುವ ಮುನ್ನವೇ ಎಷ್ಟು ಸಮಯ ತಗಲುತ್ತದೆ? ಎಷ್ಟು ದೂರ ಇದೆ ಎಂಬುದನ್ನು ತಿಳಿದುಕೊಂಡಿರುವುದು ಉತ್ತಮ. ಕಾರಣ ಒಮ್ಮೆ ಹೋಗುತ್ತಿದ್ದಾಗ ನೈಸರ್ಗಿಕ ಕ್ರಿಯೆಗೆ ಅವಸರವಾಗಿದೆ, ತುರ್ತಾಗಿ ನಿಲ್ಲಿಸಿ ಎಂದು ಮನವಿ ಮಾಡಿ ನಿಲ್ಲಿಸಿ ಹೋದಿರೋ ಜೋಕೆ! ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರಾಗುತ್ತೀರಿ! ಇಲ್ಲಾಗಿರುವುದೂ ಅದೇ ಕಥೆ. ಮೂತ್ರ ವಿಸರ್ಜನೆಗೆಂದು ಕಾಡಿಗೆ ಇಳಿದಿದ್ದ ಒಬ್ಬ ಆನೆ ದಾಳಿಗೆ (Elephant Attack) ತುತ್ತಾಗುವವನಿದ್ದ. ಕೊನೆಗೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ ಸಫಾರಿ ಹೋಗಲಾಗುತ್ತಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ವನ್ಯ ಮೃಗಗಳು ಎಲ್ಲರ ಕಣ್ಮನ ಸೆಳೆಯುತ್ತಿತ್ತು. ಎಲ್ಲರೂ ತಮ್ಮ ತಮ್ಮ ಕ್ಯಾಮೆರಾ ಮೂಲಕವೋ, ಮೊಬೈಲ್‌ ಮೂಲಕವೋ ಫೋಟೊ ತೆಗೆದುಕೊಳ್ಳುವುದು, ವಿಡಿಯೊ ಮಾಡಿಕೊಳ್ಳುವುದನ್ನು ಮಾಡುತ್ತಿದ್ದರು. ಈ ವೇಳೆ ಕಾಡಿನೊಳಗೆ ಹೋಗಿದ್ದ ಒಬ್ಬ ವ್ಯಕ್ತಿ ಓಡೋಡಿ ಬರುತ್ತಿರುವ ದೃಶ್ಯವೊಂದು ಸೆರೆಯಾಗಿದೆ. ಕಾರಣ ಆತನನ್ನು ಆನೆಯೊಂದು ಅಟ್ಟಿಸಿಕೊಂಡು ಬರುತ್ತಿತ್ತು!

ಎದ್ದೆನೋ ಬಿದ್ದೆನೋ ಎಂದು ಓಡಿದ ವ್ಯಕ್ತಿ!

ಮೂತ್ರ ವಿಸರ್ಜನೆಗೆಂದು ಹೋಗಿದ್ದ ವ್ಯಕ್ತಿಯು ತನ್ನ ಪಾಡಿಗೆ ತಾನು ನಿಸರ್ಗದಲ್ಲಿ ನಿಂತು ನೈಸರ್ಗಿಕ ಕ್ರಿಯೆಯನ್ನು ಮಾಡುತ್ತಿದ್ದನಾದರೂ ತನ್ನ ಬೌಂಡರಿಗೆ ಬಂದು ಹೀಗೆ ಮಾಡುತ್ತಿದ್ದು ಬಹುಶಃ ಅಲ್ಲಿರುವ ಆನೆಗಳ ದಂಡಿನಲ್ಲಿ ಒಂದು ಆನೆಗೆ ಸರಿ ಕಾಣಲಿಲ್ಲ. ಹೀಗಾಗಿ ಏಕಾಏಕಿ ತನ್ನ ಸೊಂಡಿಲನ್ನು ಎತ್ತಿ ದಾಳಿಗೆ ಮುಂದಾಗಿದೆ. ಇದನ್ನು ಕಂಡ ಆ ವ್ಯಕ್ತಿಯು ಹೌಹಾರಿದ್ದು, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಾಡಿನಲ್ಲಿ ಓಡೋಡಿಕೊಂಡು ತನ್ನ ವಾಹನದತ್ತ ಬರಲು ಪ್ರಯತ್ನಿಸಿದ್ದಾನೆ.

ಆನೆ ದಾಳಿಯಿಂದ ವ್ಯಕ್ತಿ ಪಾರಾದ ವಿಡಿಯೊ ಇಲ್ಲಿದೆ

ಆದರೆ, ಈ ವೇಳೆ ಆತ ತನ್ನ ಪ್ಯಾಂಟನ್ನೂ ಸಹ ಸರಿಯಾಗಿ ಹಾಕಿಕೊಳ್ಳದೇ ಇದ್ದಿದ್ದರಿಂದ ಓಡಲು ಸಹ ತೊಡಕಾಗಿದೆ. ಈ ನಡುವೆಯೂ ತನ್ನ ಎರಡೂ ಕೈಗಳಿಂದ ಪ್ಯಾಂಟನ್ನು ಹಿಡಿದುಕೊಂಡು ಬೆಲ್ಟ್‌ ಅನ್ನು ಸರಿಪಡಿಸುತ್ತಾ ಹಾಗೂಹೀಗೂ ರಸ್ತೆವರೆಗೆ ಓಡಿ ಬಂದಿದ್ದಾನೆ. ಆನೆ ಸಹ ಆತನನ್ನು ಅಟ್ಟಿಸಿಕೊಂಡು ಬರುತ್ತಲೇ ಇತ್ತು. ಒಂದು ಹಂತದಲ್ಲಿ ಭಯದಿಂದ ನಿತ್ರಾಣಗೊಂಡ ಆತ ಕೆಳಗೆ ಬಿದ್ದಿದ್ದಾನೆ. ಆದರೂ ಸಾವರಿಸಿಕೊಂಡು ಎದ್ದು, ಬಿದ್ದು ಓಡಿ ತನ್ನ ವಾಹನವನ್ನು ಸೇರಿಕೊಂಡಿದ್ದಾನೆ.

ಇದನ್ನೂ ಓದಿ: ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್‌ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ

ಈ ಎಲ್ಲ ದೃಶ್ಯಾವಳಿಗಳೂ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವೇಳೆ ಎಲ್ಲರೂ ಸಹ ಆ ಆನೆಯು ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು ಎಂದು ಅಂದುಕೊಂಡಿದ್ದಾರೆ. ಹೇಗಾದರೂ ಸರಿ, ಆತ ಪಾರಾಗಿ ಬರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿದ್ದಾರೆ. ಕೊನೆಗೂ ಆತ ಪಾರಾಗಿದ್ದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಈಗ ವೈರಲ್‌ ಆಗಿದೆ.

Exit mobile version