Site icon Vistara News

Tiger attack : ಮೈಸೂರಲ್ಲಿ ಹುಲಿ ದಾಳಿ; ಮರದಡಿ ಕುಳಿತಿದ್ದ ಬಾಲಕ ಬಲಿ

Charan nayak dead in tiger attack in Mysuru

ಮೈಸೂರು: ಮೈಸೂರಲ್ಲಿ (Mysore news) ಮತ್ತೆ ನರಹಂತಕ ವ್ಯಾಘ್ರ ಹುಲಿ ದಾಳಿ ಮುಂದುವರಿದಿದ್ದು, 7 ವರ್ಷದ ಬಾಲಕನೊಬ್ಬ (Tiger attack) ಬಲಿಯಾಗಿದ್ದಾನೆ. ಚರಣ್ ನಾಯಕ್‌ (7) ಮೃತ ಬಾಲಕ.

ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹಾಡಹಗಲಿನಲ್ಲೇ ಬಾಲಕನನ್ನು ಎಳೆದುಹೋಗಿ ತಿಂದು ಕೊಂದು ಹಾಕಿದೆ. ಕೃಷ್ಣಾಕರ ಎಂಬುವವರ ಪುತ್ರ ಚರಣ್‌ ನಾಯಕ್‌ ಪೋಷಕರೊಂದಿಗೆ ಜಮೀನಿಗೆ ತೆರಳಿದ್ದ. ಜಮೀನಿನಲ್ಲಿ ಆಟ ಆಡುತ್ತಾ ಸುಸ್ತಾದ ಚರಣ್‌ ಮರದ ಕೆಳಗೆ ಕುಳಿತಿದ್ದ.

ಮರದಡಿ ಕುಳಿತಿದ್ದ ಬಾಲಕನ ಮೇಲೆ ಒಮ್ಮೆಲೆ ಎರಗಿದ ಹುಲಿಯು ದಾಳಿ ಮಾಡಿ. ಜಮೀನಿನಿಂದ ದೂರ ಎಳೆದೊಯ್ದ ಹುಲಿಯು ತಿಂದು ಕೊಂದು ಹಾಕಿದೆ. ಚರಣ್‌ ನಾಯಕ್‌ ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ. ಇನ್ನು ಕೆಲಸದ ನಡುವೆ ಪೋಷಕರು ಮಗ ಕಾಣದಿದ್ದಾಗ ಹುಡುಕಾಡಿದ್ದಾರೆ. ಜಮೀನಿನ ಕೂಗಳತೆ ದೂರದಲ್ಲಿ ಹುಲಿ ಕೊಂದು ಹಾಕಿದ್ದು ಕಂಡಿದ್ದಾರೆ. ಇತ್ತ ಮಗನ ಸಾವಿನ ಸುದ್ದಿ ತಿಳಿದಾಕ್ಷಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಗೈರು ಹಾಜರಾತಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ಹುಲಿಗೆ ಸೆರೆಗೆ ಆದೇಶ

ಎಚ್.ಡಿ.ಕೋಟೆ ತಾಲೂಕಿನಲ್ಲಿ ಬಾಲಕನನ್ನು ಹುಲಿಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ಎರಡು ಆನೆಗಳ ಬಳಕೆ ಮಾಡಲಾಗುತ್ತಿದ್ದು, ದುಬಾರೆ ಕ್ಯಾಂಪ್‌ನಿಂದ ಸುಗ್ರೀವ ಹಾಗೂ ಪ್ರಶಾಂತ್ ಹೆಸರಿನ ಆನೆಯನ್ನು ಕರೆಸುತ್ತಿದ್ದಾರೆ.

ಸದ್ಯ ಸ್ಥಳದಿಂದ ಬಾಲಕನ‌ ಮೃತದೇಹ ತೆಗೆಯಲು ಕುಟುಂಬಸ್ಥರು ನಿರಾಕರಿಸುತ್ತಿದ್ದಾರೆ. ಸೂಕ್ತ ಪರಿಹಾರದ ಜತೆಗೆ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಇನ್ನುಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version