Site icon Vistara News

Tiger attack: ಕೊಡಗಿನಲ್ಲಿ ಹುಲಿ ದಾಳಿ, ಬಾಲಕ ಬಲಿ

Tiger attack

ಮಡಿಕೇರಿ: ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು, 12 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಪಲ್ಲೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪಲ್ಲೇರಿಯ ಚೇತನ್(12) ಮೃತ ಬಾಲಕ. ಪೂಣಚ್ಚ ಎಂಬವರ ಮನೆಯ ಕೆಲಸ ಮಾಡಲು ಬಂದಿದ್ದ ಮೂಲತಃ ಪಂಚವಳ್ಳಿಯ ಬಾಲಕ ಚೇತನ್. ಈತ ತೋಟದ ಒಳಗೆ ಆಟ ಆಡುತ್ತಿದ್ದಾಗ ಚೇತನ್ ಮೇಲೆ ಹುಲಿ ದಾಳಿ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಬಾಲಕನ ಮೃತ ದೇಹ ರವಾನಿಸಲಾಗಿದೆ.

ಕೊಡಗಿನಲ್ಲಿ ಕಾಫಿ ತೋಟಗಳಿಗೆ ಆನೆ ಕಾಟ ಸಾಮಾನ್ಯವಾಗಿದ್ದು, ರೈತರು ರೋಸಿ ಹೋಗಿದ್ದಾರೆ. ಅದರೊಂದಿಗೆ ಈಗ ಹುಲಿ ದಾಳಿಯೂ ಸೇರಿಕೊಂಡಿದ್ದು, ಈಗಾಗಲೇ ಕೆಲವರು ಬಲಿಯಾಗಿದ್ದಾರೆ.

ಇದನ್ನೂ ಓದಿ: Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು

Exit mobile version