ಬೆಂಗಳೂರು: ರಾಜ್ಯದಲ್ಲಿ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ (puc supplementary exam) ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆಗಸ್ಟ್ 12 ರಿಂದ ಪರೀಕ್ಷೆ ಶುರುವಾಗಲಿದ್ದು, ಆಗಸ್ಟ್ 25ಕ್ಕೆ ಮುಗಿಯಲಿದೆ. ಬೆಳಗ್ಗೆ 10.15 ರಿಂದ 1.30ರವರೆಗೆ ಪರೀಕ್ಷಾ ಅವಧಿಯನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ಅವಕಾಶ ಕಲ್ಪಿಸಲಾಗಿದೆ.
ವೇಳಾಪಟ್ಟಿ ಹೀಗಿದೆ
12-8-2022 | ಕನ್ನಡ, ಅರೇಬಿಕ್ |
13-8-2022 | ಭೂಗೋಳ ಶಾಸ್ತ್ರ, ಮನಃಶಾಸ್ತ್ರ,ಭೌತಶಾಸ್ತ್ರ |
16-8-2022 | ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
17-8-2022 | ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ |
18-8-2022 | ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ |
19-8-2022 | ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ |
20-8-2022 | ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ |
22-8-2022 | ಇಂಗ್ಲಿಷ್ |
23-8-2022 | ಅರ್ಥಶಾಸ್ತ್ರ, ಜೀವಶಾಸ್ತ್ರ |
24-8-2022 | ಇತಿಹಾಸ, ಸಂಖ್ಯಾಶಾಸ್ತ್ರ |
25-8-2022 | ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
ಇದನ್ನೂ ಓದಿ | ಪಿಯುಸಿಯಲ್ಲೂ ಮಹೇಶ್ ಅಮೋಘ ಸಾಧನೆ, ಜೋಪಡಿಯ ಹುಡುಗನಿಗೆ ಎಂಜಿನಿಯರ್ ಆಗುವ ಕನಸು