ಬೆಂಗಳೂರು: ಟಿಪ್ಪು ಸುಲ್ತಾನನನ್ನು( Tipu Sultan) ಹತ್ಯೆ ಮಾಡಿದವರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡ ಕುರಿತು ಮಾತನಾಡಬಾರದು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೀಡಿರುವ ಸೂಚನೆಯನ್ನು ಕಂದಾಯ ಸಚಿವ ಆರ್. ಅಶೋಕ್ ವಿಶ್ಲೇಷಿಸಿದ್ದಾರೆ. ಸ್ವಾಮೀಜಿ ಹೇಳಿದ್ದು ಕೇವಲ ಸಿನಿಮಾ ವಿಚಾರಕ್ಕೆ ಎಂದಿದ್ದಾರೆ.
ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಉರಿಗೌಡ, ನಂಜೇಗೌಡ ಚಿತ್ರದ ಬಗ್ಗೆ ಸ್ವಾಮಿಜಿಗಳು ಮಾತಾಡಿದ್ದಾರೆ. ಮುನಿರತ್ನ ಜೊತೆ ಏನು ಮಾತಾಡಿದ್ದಾರೆ ಎನ್ನೋದು ಗೊತ್ತಿಲ್ಲ. ಉರಿಗೌಡ ನಂಜೇಗೌಡ ಎನ್ನುವುದು ಕಾಲ್ಪನಿಕ ಅಲ್ಲ,
ಪುಸ್ತಕ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಆದರೆ ಸ್ವಾಮಿಜಿಗಳು ಸಿನಿಮಾ ಬಗ್ಗೆ ಮಾತ್ರ ಮಾತಾಡಿದ್ದಾರೆ ಎಂದರು.
ಉರಿಗೌಡ, ನಂಜೇಗೌಡ ಸಿನಿಮಾ ಮಾಡಬೇಕಾ ಬೇಡವಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಈ ವಿಚಾರದಲ್ಲಿ
ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ನನ್ನ ಅಭಿಪ್ರಾಯ ಒಂದೆ. ಮುನಿರತ್ನ ಒಬ್ಬ ಸಿನಿಮಾ ನಿರ್ಪಾಪಕ ಆಗಿ ಮಾತಾಡಿದ್ದಾರೆ. ನಾವು ಮುನಿರತ್ನ ಅವರನ್ನು ಕರೆದು ಮಾತಾಡ್ತೇವೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಆಗಿದೆ ಆದರೆ ಚಿತ್ರದ ಬಗ್ಗೆ ಸ್ವಾಮಿಜಿಗಳು ಮಾತಾಡಿದ್ದಾರೆ ಎಂದು ಪುನರುಚ್ಛರಿಸಿದ್ದಾರೆ.
ಇದನ್ನೂ ಓದಿ: Tipu sultan: ನನಗೆ ಮಾಜಿ ಪ್ರಧಾನಿ ದೇವೇಗೌಡ ಗೊತ್ತಿದೆ; ಉರಿಗೌಡ, ನಂಜೇಗೌಡ ಯಾರೆಂದು ಗೊತ್ತೇ ಇಲ್ಲ: ಡಾ.ಕೆ. ಸುಧಾಕರ್
ಉರಿಗೌಡ ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದ ಸಚಿವ ಮುನಿರತ್ನ ಅವರನ್ನು ಸ್ವಾಮೀಜಿ ಸೋಮವಾರ ಆಹ್ವಾನಿಸಿ ಮಾತನಾಡಿದ್ದರು. ಚಿತ್ರ ನಿರ್ಮಾಣ ಮಾಡಬಾರದು, ಇಬ್ಬರದ್ದೂ ಕಾಲ್ಪನಿಕ ವ್ಯಕ್ತಿತ್ವ ಎಂದಿದ್ದರು. ಹಾಗೊಂದು ವೇಳೆ ಶಾಸನ, ದಾಖಲೆ ಇದ್ದರೆ ತಂದುಕೊಟ್ಟರೆ ಮಠದ ವತಿಯಿಂದಲೇ ಪರಿಶೀಲಿಸಲಾಗುತ್ತದೆ. ಉರಿಗೌಡ, ನಂಜೇಗೌಡ ಕುರಿತು