Site icon Vistara News

World Tourism Day 2022 | ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ವರ್ಷದ ಧ್ಯೇಯವೇನು?

World Tourism Day 2022

ಬೆಂಗಳೂರು: ಇಂದು (ಸೆ.೨೭) ವಿಶ್ವ ಪ್ರವಾಸೋದ್ಯಮ ದಿನ(World Tourism Day 2022). ನಮ್ಮ ದೇಶ ಪ್ರವಾಸಿ ತಾಣಗಳ ತವರು ಎಂದೇ ಹೇಳಬಹುದು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಕಣ್ಣಿಗೆ ಮುದ, ಹಬ್ಬ ನೀಡುವ ಪ್ರಾಕೃತಿಕ ತಾಣಗಳು ಸೇರಿ ಪ್ರವಾಸಿಗರ ಮನತಣಿಸುವಷ್ಟು ವಿಭಿನ್ನವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿದೆ. ಕೊರೊನಾ ಮುಗಿದ ಮೇಲೆ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ.

೨೦೨೨ರಲ್ಲಿ ರೀ ಥಿಂಕಿಂಗ್ ಟೂರಿಸಂ (ಪ್ರವಾಸೋದ್ಯಮದ ಬಗ್ಗೆ ಮತ್ತೆ ವಿಚಾರ ಮಾಡುವುದು) ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ತಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮಕ್ಕೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದು, ನಮ್ಮ ಪರಿಸರವನ್ನು ಉಳಿಸಿ ಬೆಳೆಸೋಣ, ಎಲೆಮರೆ ಕಾಯಿಯಂತೆ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ | ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು 1980ರಿಂದ ಪ್ರತಿ ವರ್ಷ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತಿದೆ. ಹಲವಾರು ಪ್ರವಾಸಿ ಕೇಂದ್ರಗಳು, ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ಈ ದಿನವನ್ನು ಆಚರಿಸುವಲ್ಲಿ ವಿಶೇಷ ಆಸಕ್ತಿ ಹೊಂದಿವೆ. 

ಪ್ರವಾಸ ಮಾಡುವುದರಿಂದ ನಮ್ಮ ಜೀವನದ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಅರ್ಥಿಕ ಪರಿಣಾಮವನ್ನು ಬೀರುತ್ತದೆ. ಪ್ರವಾಸೋದ್ಯಮ ದಿನ ಆಚರಿಸುವ ಮುಖ್ಯ ಉದ್ದೇಶ ಏನೆಂದರೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನದ ಆಯೋಜಕ ದೇಶ ಇಂಡೋನೇಷ್ಯಾ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯಿಂದ ಇಂದು ಇಂಡೋನೇಷ್ಯಾದ ಬಾಲಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತದೆ.

ಇದನ್ನೂ ಓದಿ | ಕೋವಿಡ್ ಬಳಿಕ ಹೆಚ್ಚಿದೆ ದೈವ ಭಕ್ತಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರಿ ಡಿಮ್ಯಾಂಡ್‌

Exit mobile version