Site icon Vistara News

Tomato Flu | ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮಕ್ಕಳಿಗೆ ಸೋಂಕು ಬಾರದಂತೆ ತಡೆಯಲು ಇಲ್ಲಿದೆ ಮಾಹಿತಿ

ಬೆಂಗಳೂರು: ಮಕ್ಕಳಲ್ಲಿ ಕಂಡುಬರುವ ಟೊಮ್ಯಾಟೊ ಫ್ಲೂ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಈಗಾಗಲೇ ಇರುವ ಕಾಯಿಲೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಅಪರೂಪದ ವೈರಸ್ ರೋಗವಾಗಿರುವ ಟೊಮ್ಯಾಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಆರ್ಯಂಕಾರು, ಆಂಚಲ್ ಹಾಗೂ ನೆಡುವತೂರ್‌ನಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಕಂಡುಬರುವ ಈ ರೋಗ, ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ಮೊದಲಾದ ಲಕ್ಷಣಗಳನ್ನು ಹೊಂದಿದೆ. ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳೂ ಕಂಡುಬರುತ್ತವೆ.

ಕೇರಳದಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗಿರುವುದರಿಂದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ, ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲಿಖಿತ ನಿರ್ದೇಶನ ನೀಡಲಾಗಿದೆ. ಟೊಮ್ಯಾಟೊ ಜ್ವರಕ್ಕೂ ಕೊರೊನಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಕೇರಳದಲ್ಲಿ ಈಗಾಗಲೇ ಇರುವ ಸಾಂಕ್ರಾಮಿಕ ಕಾಯಿಲೆ ಆಗಿದೆ. ಆದ್ದರಿಂದ ಯಾವುದೇ ಆತಂಕ ಬೇಡ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಇಡೀ ದೇಶದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕೇರಳದಲ್ಲಿ ಮಾತ್ರ ಕಾಣಿಸಿಕೊಂಡಿದೆ. ಗಡಿಭಾಗದ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಕಟ್ಟೆಚ್ಚರ ವಹಿಸಲು ಅದೇಶ ಮಾಡಿದೆ. ಮಕ್ಕಳಿಗೆ ಜ್ವರ ಕಾಣಿಸಿಕೊಂಡರೆ ಟೊಮ್ಯಾಟೊ ಪ್ಲೂ ಚಕ್ ಮಾಡಿ ಎಂದು ಹೇಳಿದ್ದೇನೆ. ಟೊಮ್ಯಾಟೊ ಪ್ಲೂ ಹಾಗೂ ಕೊವಿಡ್‌ಗೂ ಸಂಬಂಧ ಇಲ್ಲ. ಇದು ಹೊಸದಾಗಿ ಕಂಡು ಬಂದಿರುವಂತಹದಲ್ಲ. ಐದು ವರ್ಷದ ಒಳಗಿನ ಮಕ್ಕಳಿಗೆ ಕಾಣಿಸಿಕೊಳ್ಳುತ್ತಾ ಇದೆ. ಆ ರೀತಿ ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡೋದಕ್ಕೂ ಸೂಚನೆ ನೀಡಿದ್ದೆನೆ ಎಂದು ಅರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಟೊಮಾಟೊ ಸೊಂಕು ಎಂದರೆನು?

ಇದು ಅಪರೂಪದ ವೈರಲ್‌ ಸೊಂಕು. ಮೈಮೇಲೆ ಕೆಂಪು ಕೆಂಪಾದ ಗುಳ್ಳೆಗಳು ಹುಟ್ಟಿಕೊಳುವುದರಿಂದ ಇದಕ್ಕೆ ಟೊಮಾಟೊ ಪ್ಲೊ ಎಂದು ಕರೆಯುತ್ತಾರೆ. ಹೆಚ್ಚಾಗಿ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ಕಂಡುಬರುತ್ತದೆ.

ಟೊಮಾಟೊ ಪ್ಲೂ ಸೊಂಕಿನ ಲಕ್ಷಣ ಏನು?
ವಾಂತಿಬೇದಿ, ಹೊಟ್ಟೆನೋವು, ಗಂಟುನೋವು, ಮೈ-ಕೈ ನೋವು, ಕೀಲು ಊತ, ಸುಸ್ತು, ಹೊಟ್ಟೆ ನೋವು, ವಾಕರಿಕೆ, ಅತಿಸಾರ, ಕೆಮ್ಮು, ಸೀನುವಿಕೆ, ಕೈಗಳ ಬಣ್ಣ ಬದಲಾವಣೆ, ದದ್ದು, ಚರ್ಮದ ಕಿರಿಕಿರಿ, ಮತ್ತು ನಿರ್ಜಲಿಕರಣ ಕಂಡುಬರುತ್ತದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಕೆಂಪು ಗುಳ್ಳೆಗಳು ಸಾಮಾನ್ಯವಾಗಿ ಹುಟ್ಟುತ್ತವೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತುರುಕೆ ಮಾಡಿಕೊಂಡಷ್ಟು ಇದು ಹೆಚ್ಚಗುತ್ತಾ ಹೋಗುತ್ತದೆ.

ಮುನ್ನೆಚರಿಕೆ ಕ್ರಮಗಳು:

ಇದನ್ನೂ ಓದಿ:  ZOMATO ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ರೂ. ನೀಡಿದ ಸಿಇಒ – 

Exit mobile version