1) ರಾಜ್ಯದ ಮೂಲೆ ಮೂಲೆಯಲ್ಲಿ ವೇದಿಕ್ ಆಯುರ್ ವಂಚನಾ ಜಾಲ; ಸೂಕ್ತ ತನಿಖೆ ಭರವಸೆ ನೀಡಿದ ಸಿಎಂ
ವಿಸ್ತಾರ ನ್ಯೂಸ್ ಬಯಲಿಗೆಳೆದ ರಾಜ್ಯದ ಅತಿದೊಡ್ಡ ಬಹುಕೋಟಿ ವಂಚನೆ ಪ್ರಕರಣವಾದ (Fraud Case) ವೇದಿಕ್ ಆಯುರ್ ಕ್ಯೂರ್ ಹೆಲ್ತ್ ದೋಖಾದ ಜಾಲಗಳು ಇಡೀ ರಾಜ್ಯಾದ್ಯಂತ ಹರಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಸ್ತಾರ ನ್ಯೂಸ್ ಶನಿವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ 5 ಗಂಟೆವರೆಗೆ ನಿರಂತರ ಈ ಹಗರಣವನ್ನು ಬಯಲಿಗೆಳೆಯು ಮಹಾ ಅಭಿಯಾನವನ್ನು ನಡೆಸಿದ್ದು, ಜಾಲದ ಬೇರುಗಳನ್ನು ಹೊರಗೆಳೆದಿದೆ. ಇದೀಗ ರಾಜ್ಯ ಸರ್ಕಾರ (Karnataka Government) ಈ ಹಗರಣದ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2) ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ರಾಜ್ಯಾದ್ಯಂತ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಕ್ರಮ, ರಾಜಕೀಯ ಕಾರ್ಯಕ್ರಮಕ್ಕೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳ ಬಳಕೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ, ಕಾನೂನು-ಸುವ್ಯವಸ್ಥೆ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಶನಿವಾರ ಪ್ರತಿಭಟನೆ (BJP Protest) ನಡೆಸಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3) ಮಣಿಪುರ ಬೆನ್ನಲ್ಲೇ ಬಂಗಾಳದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಬೆತ್ತಲೆ ಮೆರವಣಿಗೆ
ಕೋಲ್ಕೊತಾ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರನ್ನು ಅಮಾನುಷವಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಮಣಿಪುರ ಪೊಲೀಸರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಮಹಿಳಾ ಆಯೋಗದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಮಣಿಪುರದ ರೀತಿಯಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಹಿಳೆಯರನ್ನು (West Bengal Horror) ಅರೆಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4) Power point with HPK : ನಾನು ಯಾರನ್ನೂ ಅವಲಂಬಿಸಿಲ್ಲ, I am Independent; ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟ ನುಡಿ
ನನ್ನ ಖಾತೆಯನ್ನು ನಿಭಾಯಿಸುವಲ್ಲಿ, ಆಡಳಿತದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ನಾನು ಯಾರನ್ನು ಅವಲಂಬಿಸಿಲ್ಲ. ಈ ವೇದಿಕೆಯಲ್ಲಿ ನಿಮ್ಮ ಮುಂದೆ ಒಂದು ವಿಚಾರವನ್ನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಐ ಯಾಮ್ ನಾಟ್ ಡಿಪೆಂಡೆಂಟ್ ಆನ್ ಎನಿಬಡಿ. ಹಿಂದೆಯೂ ಅಷ್ಟೆ, ಈಗಲೂ ಅಷ್ಟೆ, ಮುಂದೆಯೂ ಅಷ್ಟೆ- ಹೀಗೆಂದು ಗಟ್ಟಿ ಧ್ವನಿಯಲ್ಲಿ ಮಾತನಾಡಿದರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar). ಪೂರ್ಣ ಸಂದರ್ಶನಕ್ಕೆ ಇಲ್ಲಿ ಕ್ಲಿಕ್ ಮಾಡಿ.
5) ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರು!
ಕೆಲವು ತಿಂಗಳ ಹಿಂದೆ ದಿಲ್ಲಿಯ ಹಾಸ್ಟೆಲ್ ಒಂದರಲ್ಲಿ ಅಲ್ಲಿನ ವಿದ್ಯಾರ್ಥಿನಿಯೊಬ್ಬಳು ಸ್ನಾನದ ಮನೆಯಲ್ಲಿ ಮೊಬೈಲ್ ಇಟ್ಟು ಚಿತ್ರೀಕರಿಸಿ ಅದನ್ನು ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂತಹುದೇ ಒಂದು ಘಟನೆ ಉಡುಪಿಯ ಕಾಲೇಜೊಂದರಲ್ಲಿ (Harrassment in Udupi college) ಕೂಡಾ ನಡೆದಿದೆ. ಆದರೆ, ಇಲ್ಲಿ ವಿದ್ಯಾರ್ಥಿನಿಯರು (Girl students videographed in ladies toilet) ಕಳುಹಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ (videos viral in social Media) ಭಯಾನಕ ವಿದ್ಯಮಾನವೂ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
6) Mamata Banerjee : ಪುಲ್ವಾಮ ದಾಳಿ ಬಿಜೆಪಿ ಸೃಷ್ಟಿ ಎಂದ ಮಮತಾ ಬ್ಯಾನರ್ಜಿಗೆ ತಪರಾಕಿ
2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ನಾಟಕೀಯ ಘಟನೆ ಮತ್ತು ಬಿಜೆಪಿ ಸೃಷ್ಟಿ ಎಂದು ಹೇಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee ) ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು ಹುತಾತ್ಮ ಯೋಧರಿಗೆ ಹಾಗೂ ದೇಶದ ಜನತೆಗೆ ಮಮತಾ ಅಪಮಾನ ಮಾಡಿದ್ದಾರೆ ಎಂದು ಹೇಳಿದೆ. ಮಮತಾ ಬ್ಯಾನರ್ಜಿ ಪಾಕಿಸ್ತಾನದ ಪರ ಇದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಪಶ್ಚಿಮ ಬಂಗಾಳದ ಬಿಜೆಪಿಯ ಸಂದ ಸುಕಾಂತಾ ಮುಜುಮ್ದಾರ್ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7) ಅಮೆರಿಕದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ
ಆದಿಚುಂಚನಗಿರಿ ಮಠದಿಂದ (Sri Adichunchanagiri Mutt) ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ ಶಿಪ್‌ನಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ (Kalabhairaveshwara temple) ಮಾಡಲಾಗುತ್ತಿದೆ. ದೇಗುಲ ಕಾಮಗಾರಿ ಪರಿಶೀಲನೆಗಾಗಿ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅಮೆರಿಕಾ ಪ್ರವಾಸವನ್ನು ಕೈಗೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8) Kiccha Sudeep: ಕಿಚ್ಚ- ಕುಮಾರ್ ಜಟಾಪಟಿಗೆ ನಾಳೆ ಕ್ಲೈಮ್ಯಾಕ್ಸ್; ರವಿಚಂದ್ರನ್ ಪ್ರಕಟಿಸಲಿದ್ದಾರೆ ಉತ್ತರ
ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಮ್ ಎನ್ ಕುಮಾರ್ (N Kumar)ನಡುವೆ ಕಾಲ್‌ಶೀಟ್ (Call Sheet Issue) ಸಂಬಂಧಿಸಿದಂತೆ ಉಂಟಾದ ವಿವಾದ ಕುರಿತು ಜುಲೈ 21ರಂದು ಹಿರಿಯ ನಟ ರವಿಚಂದ್ರನ್ (Ravichandran) ಅವರ ಮನೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ಜುಲೈ 21ರ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ. ಸುದೀಪ್, ಕುಮಾರ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ಸುದೀಪ್ ಹಾಗೂ ಎಮ್ ಎನ್ ಕುಮಾರ್ ಅವರೂ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ. ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ನಾಳೆ (ಜು.23)ರಂದು ರವಿಚಂದ್ರನ್ ಈ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9) ಬ್ಯಾಟಿಂಗ್ನಲ್ಲೂ ನೂತನ ದಾಖಲೆ ಬರೆದ ಅಶ್ವಿನ್; ದಿಗ್ಗಜ ಆಟಗಾರನ ರೆಕಾರ್ಡ್ ಪತನ
ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ನಲ್ಲಿ ಬೌಲಿಂಗ್ ಮೂಲಕ ದಾಖಲೆ ಬರೆದಿದ್ದ ಆರ್. ಅಶ್ವಿನ್(Ravichandran Ashwin) ಅವರು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಈ ಮೂಲಕ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್(vvs laxman) ಅವರ ದೀರ್ಘ ಕಾಲದ ದಾಖಲೆಯೊಂದನ್ನು ಮುರಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10) ರಸ್ತೆ ಬದಿ ಕವರ್‌ನಲ್ಲಿದ್ದ ಶಿಶುವನ್ನು ಕಾಪಾಡಿದ ಬೀದಿ ನಾಯಿ!
ಲೆಬನಾನ್: ಎಷ್ಟೋ ಜನರು ನವಜಾತ ಶಿಶುಗಳನ್ನು ಬೇಡವೆಂದು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವುದು ಅಥವಾ ರಸ್ತೆ ಬದಿಯಲ್ಲಿ ಎಸೆದು ಹೋಗುವುದನ್ನು ನಾವು ನೋಡಿದ್ದೇವೆ ಅಥವಾ ಅಂತಹ ಘಟನೆ ಬಗ್ಗೆ ಕೇಳಿದ್ದೇವೆ. ಇದೇ ರೀತಿಯ ಘಟನೆ ಇತ್ತೀಚೆಗೆ ಲೆಬನಾನ್ ದೇಶದಲ್ಲಿಯೂ ನಡೆದಿದೆ. ಆದರೆ ಬೀದಿ ನಾಯಿಯೊಂದರಿಂದಾಗಿ ಆ ಶಿಶು ಪ್ರಾಣ (Viral News) ರಕ್ಷಣೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.