ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣೆ ಆಯೋಗ ಪರಿಶೀಲನೆ ನಡೆಸಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 4,989 ನಾಮಪತ್ರಗಳು ಕ್ರಮಬದ್ಧವಾಗಿದ್ದು, 5 ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಬಾಕಿ ಉಳಿದಿದೆ.
ಕ್ರಮಬದ್ಧವಾಗಿರುವ ನಾಮಪತ್ರಗಳ ವಿವರ
ಬಿಜೆಪಿ : 219
ಕಾಂಗ್ರೆಸ್ : 218
ಜೆಡಿಎಸ್ : 207
ಎಎಪಿ : 207
ಬಿಎಸ್‌ಪಿ : 135
ಸಿಪಿಎಂ : 4
ಪಕ್ಷೇತರರು : 1334
ನೋಂದಾಯಿತ, ಮಾನ್ಯತೆ ರಹಿತ ಪಕ್ಷಗಳಿಂದ ಸಲ್ಲಿಕೆಯಾದ ನಾಮಪತ್ರ : 720
ಒಟ್ಟಾರೆ ವಿಧಾನಸಭಾ ಚುನಾವಣೆ ಕಣದಲ್ಲಿ 3044 ಅಭ್ಯರ್ಥಿಗಳಿದ್ದು, ಸವದತ್ತಿ, ಔರಾದ್, ಹಾವೇರಿ (ಎಸ್ಸಿ), ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಬಾಕಿ ಇದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.
ಶಿವಾಜಿನಗರದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಡೆ ಹಿಡಿದ ಚುನಾವಣಾ ಅಧಿಕಾರಿ
ಬೆಂಗಳೂರು: ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಚಂದ್ರ ನಾಮಪತ್ರ ಪರಿಶೀಲನೆಯನ್ನು ಚುನಾವಣಾ ಅಧಿಕಾರಿ ತಡೆ ಹಿಡಿದಿದ್ದಾರೆ. ಶನಿವಾರ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಅಭ್ಯರ್ಥಿಗೆ ಸೂಚನೆ ನೀಡಲಾಗಿದೆ.
ಜಾತಿ ಕಲಂನಲ್ಲಿ ಚಂದ್ರು ಅವರು ಎಸ್‌ಸಿ ನಮೂದಿಸಿದ್ದಾರೆ. ಆದರೆ, ಜಾತಿ ಸರ್ಟಿಫಿಕೇಟ್‌ನಲ್ಲಿ ʼಗೌಡರ್ʼ ಅಂತ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಚಂದ್ರು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಲಿದ್ದು, ಬಳಿಕ ನಾಮಪತ್ರ ಪರಿಶೀಲನೆಯಾಗಲಿದೆ.
ಇದನ್ನೂ ಓದಿ | Amit Shah: ಚುನಾವಣೆಯಲ್ಲಿ ಗೆಲ್ಲಲೇಬೇಕು; ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಫುಲ್ ಕ್ಲಾಸ್
ರಾಯಚೂರಿನಲ್ಲಿ 2 ನಾಮಪತ್ರ ತಿರಸ್ಕಾರ
ರಾಯಚೂರು: ರಾಯಚೂರಿನಲ್ಲಿ ನಾಮಪತ್ರ ಪರಿಶೀಲನೆಯಲ್ಲಿ ಗೊಂದಲ ಉಂಟಾಗಿದ್ದು, ಶುಕ್ರವಾರ ತಡರಾತ್ರಿವರೆಗೆ ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ನಡೆಯಿತು. ಇಬ್ಬರೂ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರದಲ್ಲಿ ಗೊಂದಲ ಉಂಟಾಗಿದ್ದು, ಕಲಂ ಭರ್ತಿ ಮತ್ತು ಅಭ್ಯರ್ಥಿ ಸಹಿಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆ 2 ನಾಮಪತ್ರಗಳನ್ನು ತಿರಸ್ಕೃತವಾಗಿವೆ.
ರಾಯಚೂರು ನಗರ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕಚೇರಿ ಹೊರಗಡೆ ಅಭ್ಯರ್ಥಿಗಳ ಬೆಂಬಲಿಗರು ಜಮಾವಣೆಯಾಗಿದ್ದ, ನಾಮಪತ್ರಗಳ ಅಂಗೀಕಾರಕ್ಕೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗೆ ಹೋಗದೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತಿದ್ದರು.