ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಬೀಚ್‌ನಲ್ಲಿ ಅಲೆಗಳ ತೀವ್ರತೆ ಅರಿಯದೆ ಸಮುದ್ರಕ್ಕಿಳಿದ ಪ್ರವಾಸಿಗ ನೀರುಪಾಲಾಗಿದ್ದಾನೆ. ಗದಗ ಮೂಲದ ಮೆವಂಡಿ ಗ್ರಾಮದ ಫೀರ್ ನದಾಫ್ ಸಮುದ್ರಪಾಲಾದ (Drowns in Sea) ಯುವಕ.
ಪ್ರವಾಸದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಪ್ರವಾಸಿಗ ಆಗಮಿಸಿದ್ದ. ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಹಿನ್ನೆಲೆಯಲ್ಲಿ ಫೀರ್ ನದಾಫ್‌ಗಾಗಿ ಬೈಂದೂರು ಅಗ್ನಿಶಾಮಕ ದಳ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಇದುವರೆಗೆ ಸಮುದ್ರ ಪಾಲಾದ ವ್ಯಕ್ತಿಯ ಸುಳಿವು ಲಭ್ಯವಾಗಿಲ್ಲ.
ಕೆಲವು ದಿನಗಳ ಹಿಂದೆ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ಕುರಿತು ವಿಸ್ತಾರ ನ್ಯೂಸ್ ವರದಿ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಸುದ್ದಿ ಬಿತ್ತರವಾಗಿ ಒಂದು ವಾರ ಆಗುವುದರೊಳಗೆ ಒಬ್ಬರು ಸಮುದ್ರ ಪಾಲಾಗಿದ್ದಾರೆ. ಸ್ಥಳಕ್ಕೆ ಗಂಗೊಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Road Accident : ಬೈಕ್‌ಗೆ ಡಿಕ್ಕಿ ಹೊಡೆದ ಟ್ರಾಕ್ಟರ್; ಪ್ರಾಣ ಬಿಟ್ಟ ಸವಾರ
ಬಾರಿ ಅಲೆಗಳು ಬರುತ್ತಿದ್ದರೂ ಫೀರ್ ನದಾಫ್ ಸಮುದ್ರಕ್ಕೆ ಇಳಿದಿದ್ದಾನೆ. ಸಮುದ್ರದಲ್ಲಿ ಪ್ರವಾಸಿಗ ಕೊಚ್ಚಿ ಹೋಗುತ್ತಿರುವ ವಿಡಿಯೊ ಲಭ್ಯವಾಗಿದೆ. ಆದರೆ, ಇದುವರೆಗೂ ಫೀರ್ ನದಾಫ್ ಮೃತದೇಹ ಪತ್ತೆಯಾಗಿಲ್ಲ.
ಧಾರವಾಡದ ಚರಂಡಿಯಲ್ಲಿ ನವಜಾತ ಶಿಶು ಪತ್ತೆ
ಧಾರವಾಡ: ನಗರದ ಮೌನೇಶ್ವರ ಗುಡಿ ಓಣಿಯ ರಸ್ತೆಯ ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಮಗು ಅಳುವುದನ್ನು ಕೇಳಿದ ಅಲ್ಲಿನ ಮಕ್ಕಳು, ನಂತರ ಸ್ಥಳೀಯರಿಗೆ ಮಾಹಿತಿ ನೀಡಿದಾರೆ. ಹೀಗಾಗಿ ಸ್ಥಳೀಯರು ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Murder Case : ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ; ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ
ವಿದ್ಯುತ್ ಸ್ಪರ್ಶಿಸಿ ಕುರಿ ಸಾವು
ಗದಗ: ಟಿಸಿ ಕಂಬದಿಂದ ವಿದ್ಯುತ್ ಸ್ಪರ್ಶಿಸಿ ಕುರಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಶೇಖಪ್ಪ ಸೋಮಣ್ಣ ಬಿಂಗಿ ಎಂಬುವವರ ಕುರಿ ಮೃತಪಟ್ಟಿದೆ. ಸ್ಥಳಕ್ಕೆ ಹೆಸ್ಕಾಂ ಹಾಗೂ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳ ಬಳಿ ಕುರಿಗಾಹಿಗಳು ಒತ್ತಾಯಿಸಿದ್ದಾರೆ.