Site icon Vistara News

Traffic Fine Rebate: ಮತ್ತೊಮ್ಮೆ 50% ಟ್ರಾಫಿಕ್‌ ಫೈನ್‌ ಡಿಸ್ಕೌಂಟ್ ಘೋಷಿಸಿದ ಸರ್ಕಾರ; ಮಾರ್ಚ್‌ 18ರವರೆಗೆ ಕಾಲಾವಕಾಶ

Government announces 50% traffic fine discount once again, Time till March 15

Government announces 50% traffic fine discount once again, Time till March 15

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 50ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿಗೆ (Traffic Fine Rebate) ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸಾವಿರಾರು ಪ್ರಕರಣಗಳು ಇತ್ಯರ್ಥವಾಗಿ 120 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ಸಾರಿಗೆ ಇಲಾಖೆ ಮತ್ತೊಮ್ಮೆ ಫೈನ್‌ ಆಫರ್‌ಗೆ ಅವಕಾಶ ಕಲ್ಪಿಸಿದೆ. ಮಾರ್ಚ್‌ 4ರಿಂದ ಆರಂಭವಾಗಿ 15 ದಿನಗಳ ಕಾಲ (ಮಾ.15 ರವರೆಗೆ) ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಪ್ರತಿ

ಈ ಮೊದಲು ಬೆಂಗಳೂರು ಸಂಚಾರಿ ಪೊಲೀಸರು ರಿಯಾಯಿತಿ ಘೋಷಿಸಿದ ಬಳಿಕ ಒಟ್ಟಾರೆ 120 ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿತ್ತು. ದಂಡದ ಜತೆಗೆ ಈ 50% ಆಫರ್‌ ಹೆಚ್ಚು ಜನಪ್ರಿಯಗೊಂಡಿತ್ತು. ಈ ಆಫರನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.

ನಾ ಮುಂದು ತಾ ಮುಂದು ಎಂದು ಬಂದಿದ್ದ ಸವಾರರು

ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಮುಗಿಬಿದ್ದಿದ್ದರು. ದೂರದಲ್ಲಿ ಟ್ರಾಫಿಕ್‌ ಪೊಲೀಸರ ಕಂಡರೆ ಅಲ್ಲೇ ಯೂಟರ್ನ್‌ ಪಡೆದುಕೊಂಡು ಅಥವಾ ದಾರಿಯನ್ನು ಬದಲಾಯಿಸುತ್ತಿದ್ದವರೆಲ್ಲರೂ ಆಫರ್‌ ಘೋಷಣೆಯಾದ ಆ 10 ದಿನಗಳು ಪೊಲೀಸರನ್ನೇ ಹುಡುಕಿಕೊಂಡು ಬರುವಂತಾಗಿತ್ತು.

ಇನ್ನು ಈ ಆಫರ್‌ನಲ್ಲಿ ಕೆಲವರು ಸರದಿ ಸಾಲಿನಲ್ಲಿ ನಿಂತರೆ, ಹಲವರು ಆನ್‌ಲೈನ್‌ ಹಾಗೂ ರಸ್ತೆಯಲ್ಲಿ ಟ್ರಾಫಿಕ್‌ ಪೊಲೀಸರು ಕಂಡೊಂಡನೆ ಹಣ ಕಟ್ಟಿದ್ದರು. ಇನ್ನು ಕೊನೆಯ ಹಂತದಲ್ಲಿ ಕೆಲವರು ನೆಟ್‌ವರ್ಕ್‌ ಒತ್ತಡದಿಂದ ಹಣ ಪಾವತಿ ಮಾಡಲಾಗದೆ ನಿರಾಸೆ ಅನುಭವಿಸಿದರು. ಅವರಿಗೆಲ್ಲ ಇದೀಗ ಈ ಡಿಸ್ಕೌಂಟ್‌ ವಿಸ್ತರಣೆ ನಿರಾಳತೆ ನೀಡಲಿದೆ.

ಇದನ್ನೂ ಓದಿ: D.V.Shailendra Kumar No more: ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನಿಧನ

ಕರ್ನಾಟಕ ರಾಜ್ಯ ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ಅವರ ನೇತೃತ್ವದಲ್ಲಿ ಕಳೆದ ಫೆ.14ರಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಎರಡನೇ ಬಾರಿಯ ಈ ಡಿಸ್ಕೌಂಟ್‌ ಆಫರ್‌ನಲ್ಲೂ ಕೋಟಿ ಕೋಟಿ ದಂಡ ಪಾವತಿ ಆಗುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಈ ಹಿಂದೆ 10 ದಿನಗಳ ಕಾಲಾವಕಾಶ ನೀಡಿದಾಗ, ವಾಹನ ಸವಾರರಿಂದ 41,20,626 ಕೇಸ್‌ಗಳಲ್ಲಿ ಒಟ್ಟು 120,76,46,161 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version