Site icon Vistara News

Traffic fine rebate : ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರಿಗೆ ಶುಭ ಸುದ್ದಿ, ಮತ್ತೆ ಬಂದಿದೆ 50% ರಿಯಾಯಿತಿ!

Traffic fine 50% rebate

ಬೆಂಗಳೂರು: ನೀವು ಇತ್ತೀಚೆಗೆ ಟ್ರಾಫಿಕ್‌ ರೂಲ್ಸ್‌ (Traffic rules) ಬ್ರೇಕ್‌ ಮಾಡಿದ್ದೀರಾ? ಸಿಗ್ನಲ್‌ ಜಂಪ್‌ ಆಗಿದೆಯಾ? ಹೆಲ್ಮೆಟ್‌ ಇಲ್ಲದೆ ಓಡಾಡಿದ್ದೀರಾ? ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸಿದ್ದೀರಾ? ಏನೋ ತಪ್ಪು ಮಾಡಿದ್ದಕ್ಕೆ ಪೊಲೀಸರು ಹಿಡಿದು ಫೈನ್‌ ಹಾಕಿದ್ದಾರಾ? ಹೀಗೊಮ್ಮೆ ನಿಮಗೆ ಫೈನ್‌ ಬಿದ್ದಿದ್ದರೆ ಬಿದ್ದ ದಂಡದ ಅರ್ಧದಷ್ಟು ಕಟ್ಟಿ ಕ್ಲಿಯರ್‌ ಮಾಡಿಸಿಕೊಳ್ಳುವ ಮತ್ತೊಂದು ಅವಕಾಶವನ್ನು (Traffic Fine Rebate) ಸರ್ಕಾರ ನೀಡಿದೆ.

ರಾಜ್ಯಾದ್ಯಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ವಾಹನ ಸವಾರರಿಗೆ ಸರ್ಕಾರ ದಂಡ ಪಾವತಿ ಮಾಡಲು ಈ ಹಿಂದೆ ಎರಡು ಬಾರಿ ರಿಯಾಯಿತಿ ನೀಡಿತ್ತು. ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ವೀರಪ್ಪ ಗೌಡ (Justice Veerappa gowda) ಅವರ ಸಲಹೆಯ ಮೇರೆಗೆ ಸರ್ಕಾರ ಮಾಡಿದ್ದ ಈ ಕ್ರಮದಿಂದ ಬಹುತೇಕ ಜನರು ತಮ್ಮ ಹಳೆ ಬಾಕಿಗಳನ್ನು ತೀರಿಸಿ ನಿರಾಳರಾಗಿದ್ದರು. ರಾಜ್ಯದ ಬೊಕ್ಕಸಕ್ಕೆ 120 ಕೋಟಿ ರೂ. ಜಮಾ ಆಗಿತ್ತು. ಇಷ್ಟಾದರೂ ಇನ್ನೂ ಲಕ್ಷಾಂತರ ಕೇಸ್ ಗಳು ಹಾಗೂ ಕೋಟ್ಯಂತರ ರೂ. ದಂಡ ಬಾಕಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ರಿಯಾಯಿತಿಯನ್ನು ಪ್ರಕಟಿಸಿದೆ.

ಜುಲೈ 5ರಿಂದಲೇ ಜಾರಿ ಈ ಬಾರಿ 66 ದಿನಗಳ ಕಾಲಾವಕಾಶ

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ದಾಖಲಾಗಿದ್ದ ಕೇಸ್ ಗಳ ಇತ್ಯಾರ್ಥಕ್ಕೆ ಸರ್ಕಾರ ಈ ಹಿಂದೆ ದಂಡ ಪಾವತಿಗೆ 50% ರಿಯಾಯಿತಿ ನೀಡಿ ಅವಕಾಶ ಮಾಡಿಕೊಟ್ಟಿತ್ತು. ಎರಡು ಬಾರಿ ದಂಡ ಪಾವತಿಗೆ ಅವಕಾಶ ನೀಡಿದ್ದು ಆ ಸಂದರ್ಭದಲ್ಲಿ 1.8 ಕೋಟಿ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 41 ಲಕ್ಷ 20 ಸಾವಿರ ಪ್ರಕರಣಗಳು ಮಾತ್ರ ಇತ್ಯರ್ಥವಾಗಿದ್ದವು. ಸರ್ಕಾರದ ಬೊಕ್ಕಸಕ್ಕೆ 120 ಕೋಟಿ 76 ಲಕ್ಷ 46 ಸಾವಿರ ರೂಪಾಯಿ ಜಮಾ ಆಗಿತ್ತು. ದಂಡ ಪ್ರಮಾಣ ಅರ್ಧಕ್ಕಿಳಿದಾಗ ಜನರು ಅದರ ಪಾವತಿಗೆ ತೋರಿದ ಉತ್ಸಾಹ ಕಂಡ ಸರ್ಕಾರ ಮತ್ತೆ ದಂಡ ಪಾವತಿ ಮಾಡಲು 50% ರಿಯಾಯಿತಿ ನೀಡಿದೆ.

ಈ ಬಾರಿ ಜುಲೈ ಐದರಿಂದ ಜಾರಿಗೆ ಬರುವಂತೆ ಎರಡು ತಿಂಗಳ ಕಾಲಾವಧಿ ನೀಡಲಾಗಿದೆ. ಅಂದರೆ ಸೆಪ್ಟೆಂಬರ್ 9 ರ ವರೆಗೆ ಸುಮಾರು 66 ದಿನಗಳ ಕಾಲ ಪಾವತಿ ಮಾಡಬಹುದು. . ರಿಯಾಯಿತಿ ನೀಡಿರುವುದರಿಂದ ಈ ಬಾರಿಯಾದರೂ ವಾಹನ ಸವಾರರು ಸರ್ಕಾರ ನೀಡಿರುವ 50% ರಿಯಾಯಿತಿ ಅವಕಾಶವನ್ನು ಬಳಸಿಕೊಂಡು ಟ್ರಾಫಿಕ್ ಪೈನ್ ಪಾವತಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Traffic Fine: ಸಂಚಾರ ನಿಯಯ ಉಲ್ಲಂಘನೆ; ಕೊನೇ ದಿನ 31.26 ಕೋಟಿ ರೂ. ದಂಡ ವಸೂಲಿ, ಒಟ್ಟು ಸಂಗ್ರಹ ಎಷ್ಟು?

ಯಾವುದಕ್ಕೆ ಈ ರಿಯಾಯಿತಿ ಅನ್ವಯ?

ಇದರಲ್ಲಿ ಕೇವಲ ಸಿಗ್ನಲ್ ಜಂಪ್, ವಿತೌಟ್ ಹೆಲ್ಮೆಟ್, ಡ್ರಿಂಕ್ ಅಂಡ್ ಡ್ರೈವ್, ನೋ ಪಾರ್ಕಿಂಗ್, ಒನ್ ವೇ ಸೇರಿದಂತೆ ದಂಡ ಪಾವತಿಸಿದರೆ ಇತ್ಯರ್ಥವಾಗುವ ಕೇಸ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಎರಡು ತಿಂಗಳ ಕಾಲವಕಾಶ ನೀಡಿದೆ. ಈ ಹಿಂದೆ ನೀಡಿದ್ದ ಅವಕಾಶ 2023 ರ ಫೆಬ್ರವರಿ 11 ರ ಅವಧಿ ಒಳಗೆ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಪ್ರಕರಣಗಳಿಗೆ ಮಾತ್ರ ಈ ಬಾರಿಯ ರಿಯಾಯಿತಿ ಅನ್ವಯವಾಗಲಿದೆ.

Exit mobile version