Site icon Vistara News

Bengaluru Bandh: ಸೋಮವಾರ ಖಾಸಗಿ ವಾಹನ ಬಂದ್‌; ವಿದ್ಯಾರ್ಥಿಗಳು, ನೌಕರರಿಗೆ ಬಿಸಿ; ಪರ್ಯಾಯ ವ್ಯವಸ್ಥೆ ಏನು?

Private vehicles

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ಭಾನುವಾರ ಮಧ್ಯರಾತ್ರಿಯಿಂದಲೇ ಬಸ್‌, ಶಾಲಾ ವಾಹನ, ಆಟೋ, ಕ್ಯಾಬ್‌ಗಳ ಸೇವೆ ಸ್ಥಗಿತವಾಗಲಿದೆ. ಈ ನಡುವೆ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ. ರಾಜಧಾನಿಯಲ್ಲಿ ಶಾಲೆ, ಏರ್‌ಪೋರ್ಟ್, ಪ್ರಮುಖ ಆಸ್ಪತ್ರೆಗಳಿರುವ ಕಡೆ ಹೆಚ್ಚು ಟ್ರಿಪ್ ಬಸ್ ಓಡಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಬಂದ್‌ ಬಗ್ಗೆ ಶಾಂತಿ ನಗರದಲ್ಲಿದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಶಾಲೆ, ಏರ್‌ಪೋರ್ಟ್, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಹೆಚ್ಚು ಟ್ರಿಪ್ ಬಸ್ ಓಡಿಸಲು ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸಹ ನಿಗಾ ಇಡುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ನಾಳೆ ಬಸ್‌ಗಳು ಹೆಚ್ಚುವರಿ 4 ಸಾವಿರ ಟ್ರಿಪ್ ಓಡುತ್ತವೆ. ಏರ್‌ಪೋರ್ಟ್‌ ಹೆಚ್ಚುವರಿ 100 ಬಸ್ ಹಾಕಿದ್ದೇವೆ. ಬೇಡಿಕೆ ಹೆಚ್ಚಿರುವ ಕಡೆ ಬಸ್‌ಗಳು ಹೆಚ್ಚಾಗಿ ಓಡುತ್ತೆ. 1 ಕೋಟಿಗೂ ಹೆಚ್ಚು ಮಂದಿ ನಮ್ಮ ಬಿಎಂಟಿಸಿಯಲ್ಲಿ ಪ್ರತಿ ನಿತ್ಯ ಪ್ರಯಾಣ ಮಾಡುತ್ತಾರೆ. ಅವರು ಎಷ್ಟು ಸಂಘ ಆದರೂ ಇಟ್ಟುಕೊಳ್ಳಲಿ, ಮುಷ್ಕರ ಮಾಡಿಯೇ ಮಾಡುತ್ತೇವೆ ಎಂಬುವವರ ಬಗ್ಗೆ ಏನು ಹೇಳಲಿ ಎಂದರು.

ಇದನ್ನೂ ಓದಿ | Weather Report : ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್‌

ಖಾಸಗಿ ಸಾರಿಗೆಯವರ ಬಂದ್‌ಗೆ ನಮ್ಮಿಂದ ಯಾವ ಅಡ್ಡಿಯೂ ಇಲ್ಲ, ಸಾರಿಗೆ ಹೆಚ್ಚುವರಿ ಆಯುಕ್ತರ ಮೇಲೆ ಸಹ ಅವರು ಆರೋಪ ಮಾಡಿದ್ದಾರೆ. ಅದನ್ನು ಪರಿಶೀಲಿಸಿ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಅವರ ವೈಯಕ್ತಿಕ ಸಂಭಾಷಣೆ ವಿಚಾರ ನಾನು ಏನು ಹೇಳಲಿ ಎಂದು ತಿಳಿಸಿದರು.

ಈ ಹಿಂದೆ ಎರಡು ಬಾರಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಜತೆ ಸಭೆ ಮಾಡಿದ್ದೆವು. ಸಿಎಂ ಬಳಿಗೆ ಸಹ ಎಲ್ಲರನ್ನೂ ಕರೆದುಕೊಂಡು ಹೋಗಿದ್ದೆ. ಸಭೆಗೆ ಕೆಲವರು ಬಂದಿದ್ದರು, ಕೆಲವರು ಬಂದಿರಲಿಲ್ಲ. ಮುಷ್ಕರ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ಇದೆ ಎಂದು ಹೇಳಿದ್ದಾರೆ.

ಖಾಸಗಿ ಸಾರಿಗೆ ಒಕ್ಕೂಟಸ ಬೇಡಿಕೆ ಅನುಸಾರ ಅನುಪಾಲನಾ ವರದಿ ಸಹ ಮಾಡಿದ್ದೇವೆ. ಅವರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 5 ಸಾವಿರ ಕೋಟಿ ರೂ. ಹೆಚ್ಚುವರಿ ಹಣ ಬೇಕಾಗುತ್ತದೆ. ಅವರಿಗೆ ಸಮಸ್ಯೆ ಆಗುತ್ತೆ ಎಂದು ತೆರಿಗೆ ಹೆಚ್ಚಳ ನಿರ್ಧಾರವನ್ನು ತಡೆ ಹಿಡಿದಿದ್ದೇವೆ. ಶಕ್ತಿ ಯೋಜನೆ ಪರಿಣಾಮ ಹಾಗೂ ಲೈಫ್ ಟೈಮ್ ಟ್ಯಾಕ್ಸ್‌ನಿಂದ ಖಾಸಗಿ ವಾಹನ ಚಾಲಕರಿಗೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೇಲಿನ ವಿಷಯಕ್ಕೆ ಸಂಬಂಧಿಸಿದದಂತೆ, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ ಅನುಸೂಚಿಗಳಿಂದ 5601 57.450 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಖಾಸಗಿ ಆಟೋ, ಟ್ಯಾಕ್ಸಿ ಮತ್ತು ವಾಹನಗಳ ಚಾಲಕರ ಒಕ್ಕೂಟವು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸಂಸ್ಥೆಯು, ಬೆಂಗಳೂರಿನ ಶಾಲಾ/ಕಾಲೇಜು ಮಕ್ಕಳು ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನಗರದ ಪ್ರಮುಖ ಬಸ್‌ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್‌, ಬನ್ನೇರುಘಟ್ಟ/ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ. ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ ಒಳ ವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ 500 ಅನುಸೂಚಿಗಳಿಂದ ಸುಮಾರು 4000 ಹೆಚ್ಚುವರಿ ಸುತ್ತುವಳಿಗಳನ್ನು ಕಾರ್ಯಾಚರಿಸಲು ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ.

ಮುಂದುವರೆದು, ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲಿ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳನ್ನು ಹಾಗೂ ಸಾರಥಿ ಗಸ್ತು ಪಡೆಗಳನ್ನು ನಿಯೋಜಿಸಿ, ಸಂಸ್ಥೆಯ ಸಾರಿಗೆಗಳ ಮೇಲ್ವಿಚಾರಣೆ ಮಾಡಿಸಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬಂದ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆಗೆ ಕ್ರಮ ವಹಿಸಲಾಗುವುದು.

ಹೆಚ್ಚುವರಿ 4000 ಬಸ್ ಟ್ರಿಪ್‌

ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ 5601 ಅನುಸೂಚಿಗಳಿಂದ(ಷೆಡ್ಯೂಲ್) 57,450 ಟ್ರಿಪ್‌(ಸುತ್ತುವಳಿ) ಕಾರ್ಯಾಚರಣೆ ಮಾಡಲಾಗುತ್ತಿದೆ. ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಖಾಸಗಿ ಆಟೋ, ಟ್ಯಾಕ್ಸಿ ಮತ್ತು ವಾಹನಗಳ ಸೇವೆ ಇರುವುದಿಲ್ಲ. ಹೀಗಾಗಿ ಬೆಂಗಳೂರಿನ ಶಾಲಾ, ಕಾಲೇಜು ಮಕ್ಕಳು ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನಗರದ ಪ್ರಮುಖ ಬಸ್‌ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್‌, ಬನ್ನೇರುಘಟ್ಟ, ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ. ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ ಒಳ ವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ 500 ಅನುಸೂಚಿಗಳಿಂದ ಸುಮಾರು 4000 ಹೆಚ್ಚುವರಿ ಸುತ್ತುವಳಿಗಳನ್ನು ಕಾರ್ಯಾಚರಿಸಲು ಯೋಜನೆಯನ್ನು ರೂಪಿಸಲಾಗಿದೆ.

ಮುಂದುವರಿದು ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲಿ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಯನ್ನು ಹಾಗೂ ಸಾರಥಿ ಗಸ್ತು ಪಡೆಗಳನ್ನು ನಿಯೋಜಿಸಿ, ಸಂಸ್ಥೆಯ ಸಾರಿಗೆಗಳ ಮೇಲ್ವಿಚಾರಣೆ ಮಾಡಿಸಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬಂದ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆಗೆ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಸೋಮವಾರ ರಸ್ತೆಗಿಳಿಯಲ್ಲ ಸ್ಕೂಲ್‌ ಬಸ್‌, ವ್ಯಾನ್‌;‌ ಮಕ್ಕಳಿಗೆ ಶಾಲೆ ಇದ್ಯಾ, ಇಲ್ವಾ?

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟವು ಸೆ.11ರಂದು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ಬಂದ್‌ ಬಿಸಿ ಶಾಲಾ ಕಾಲೇಜುಗಳಿಗೂ ತಟ್ಟಲಿದೆ. ಮಕ್ಕಳ ಓಡಾಟಕ್ಕೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.

ಸೆಪ್ಟೆಂಬರ್‌ 10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ಸಾರಿಗೆ ಸೇವೆಗಳು ಬಂದ್ ಆಗಲಿವೆ. ಖಾಸಗಿ ಬಸ್‌ಗಳು, ಮಿನಿ ಲಗೇಜ್ ವಾಹನಗಳು, ಸ್ಕೂಲ್‌ ಬಸ್‌, ವ್ಯಾನ್‌, ಆಟೋ ಸೇರಿದಂತೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌, ಕಂಪೆನಿ ಕ್ಯಾಬ್‌ಗಳ ಓಡಾಟ ಇರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ.

ಬೆಂಗಳೂರು ಬಂದ್‌ ಬಿಸಿ ಶಾಲಾ ಮಕ್ಕಳ ಓಡಾಟಕ್ಕೂ ತಟ್ಟಲಿದೆ. ಸ್ಕೂಲ್‌ ಬಸ್‌, ವ್ಯಾನ್‌, ಆಟೋ ಯಾವುದು ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕಾದರೆ ನಿಮ್ಮ ಸ್ವಂತ ವಾಹನ ಅಥವಾ ಬಿಎಂಟಿಸಿ ಬಸ್‌ ಗಟ್ಟಿ.

ರಜೆ ಘೋಷಿಸಿದ ಖಾಸಗಿ ಶಾಲೆಗಳು

ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಕರೆ ನೀಡುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಶಾಲೆ ಸೇರಿದಂತೆ ಹಲವು ಶಾಲೆಗಳು ಮಕ್ಕಳಿಗೆ ರಜೆ ನೀಡಿವೆ. ಈ ಬಗ್ಗೆ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸೂಚನೆ ನೀಡಿದೆ. ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ರಜೆ ಘೋಷಣೆ ಎಂದು ಉಲ್ಲೇಖಿಸಿದೆ. ಸದ್ಯ ಇತರೆ ಶಾಲೆಗಳು ರಜೆ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ. ಎಂದಿನಂತೆ ಬಹುತೇಕ ಕಡೆಗಳಲ್ಲಿ ಶಾಲೆ ನಡೆಯಲಿದೆ.

ಚಾಲಕರ ಅಷ್ಟ ದಿಗ್ಬಂಧನ!

ಸೆ.11ರಂದು ಪ್ರಮುಖ ಜಂಕ್ಷನ್, ಹೆದ್ದಾರಿಯಲ್ಲಿ ವಾಹನಗಳ ತಡೆಗೆ ಚಾಲಕರು ಯೋಜನೆ ರೂಪಿಸಿದ್ದಾರೆ. ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿ, ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಸರ್ಕಾರವು ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡದಿರಲು ತೀರ್ಮಾನಿಸಿದ್ದಾರೆ.

ಮೆರವಣಿಗೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆದಿದ್ದು, ನೆಲಮಂಗಲ , ವೈಟ್ ಫೀಲ್ಡ್, ಕೆಂಗೇರಿ, ಕೆ.ಆರ್ ಪುರಂ, ಹೆಬ್ಬಾಳದಿಂದ ರ‍್ಯಾಲಿ ಬಂದು ಫ್ರೀಡಂ ಪಾರ್ಕ್‌ ಸೇರಲಿದ್ದಾರೆ. ಪೊಲೀಸರು ರ‍್ಯಾಲಿ ಹತ್ತಿಕ್ಕುವ ಪ್ರಯತ್ನ ಮಾಡಿದರೆ, ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಲು ಒಕ್ಕೂಟ ಪ್ಲ್ಯಾನ್‌ ಮಾಡಿದೆ.

ಇದನ್ನೂ ಓದಿ | Shuchi Scheme: ಶುಚಿ ಯೋಜನೆಯಲ್ಲಿ ಹೊಸ ಪ್ರಯೋಗ; ನ್ಯಾಪ್ಕಿನ್‌ಗೆ ಪರ್ಯಾಯವಾಗಿ ಮೆನ್‌ಸ್ಟ್ರುಯಲ್ ಕಪ್

ಟ್ರಾಫಿಕ್‌ ಕಿರಿಕಿರಿ

ಒಂದು ಕಡೆ ಖಾಸಗಿ ವಾಹನಗಳು ಸಿಗದೆ ಪ್ರಯಾಣಿಕರ ಪರದಾಟ ಅನುಭವಿಸಿದರೆ ಮತ್ತೊಂದು ಕಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಖಾಸಗಿ ವಾಹನ ಚಾಲಕರ ರ‍್ಯಾಲಿಯಿಂದಾಗಿ ಮೆಜಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version