ಕೊಡಗು: ಇಲ್ಲಿನ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೊಸಕೋಟೆ ಸಮೀಪದ ಹಿಲ್ ಸೈಡ್ ಎಸ್ಟೇಟ್‌ನಲ್ಲಿ ಬೃಹತ್ ಮರವೊಂದು ಉರುಳಿ ಕಾರ್ಮಿಕ ಸ್ಥಳದಲ್ಲೇ (Tree Fell) ಮೃತಪಟ್ಟಿದ್ದಾನೆ. ಏಕಾಏಕಿ ಮರ ಪೂರ್ತಿಯಾಗಿ ಮೈಮೇಲೆ ಬಿದ್ದ ರಭಸಕ್ಕೆ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಕ್ಕಟಕಾಡು ನಿವಾಸಿ ಪ್ರಕಾಶ್ (52) ಮೃತ ದುರ್ದೈವಿಯಾಗಿದ್ದು, ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಇದೇ ವೇಳೆ ಮತ್ತೊಬ್ಬ ಕಾರ್ಮಿಕ ರಘು ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ | Rain News | ಮಳೆ ಅನಾಹುತಕ್ಕೆ ಮುಂದುವರಿದ ಸಾವು-ನೋವು: ಮನೆ ಕುಸಿದು ಕೂಲಿ ಕಾರ್ಮಿಕ ಸಾವು