Site icon Vistara News

Road Accident: ಟಿಟಿ ವಾಹನ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

TT vehicle and bike

ಹಾಸನ: ಟಿಟಿ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಕಲ್ಲಹಳ್ಳಿ ಅರಣ್ಯದ ಬಳಿ ನಡೆದಿದೆ.

ಶರತ್ (20) ಮೃತ ಯುವಕ, ವೀರೇಶ್‌ (20) ಗಾಯಾಳು. ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಬೇಲೂರಿನಿಂದ ಹಳೇಬೀಡು ಕಡೆಗೆ ಬರುತ್ತಿದ್ದ ಸುರಪುರ ಗ್ರಾಮದ ಶರತ್ ಮತ್ತು ವೀರೇಶ್ ಇದ್ದ ಬೈಕ್‌, ಹಳೇಬೀಡಿನಿಂದ ಬೇಲೂರು ಕಡೆಗೆ ಬರುತ್ತಿದ್ದ ಟಿಟಿ ವಾಹನ ಮುಖಮುಖಿ ಡಿಕ್ಕಿಯಾಗಿವೆ. ಹೀಗಾಗಿ ಸ್ಥಳದಲ್ಲೇ ಶರತ್ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ವೀರೇಶ್‌ನನ್ನು ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟಿಟಿ ವಾಹನ ಚಾಲಕನನ್ನು ಹಳೇಬೀಡು ಪೊಲೀಸರು ವಶಕ್ಕೆ ಪಡೆದ್ದಾರೆ.

ಇದನ್ನೂ ಓದಿ | Contaminated Water: ಚಿತ್ರದುರ್ಗ ಕಲುಷಿತ ನೀರು ದುರಂತದಲ್ಲಿ ಸಾವಿನ ಸಂಖ್ಯೆ 3ಕ್ಕೇರಿಕೆ; ತನಿಖೆಗೆ ಸಿಎಂ ಆದೇಶ

ಫಾರೆಸ್ಟ್ ವಾಚರ್ ನೇಣಿಗೆ ಶರಣು

ಹಾಸನ: ಅರಣ್ಯ ವೀಕ್ಷಕರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ‌ ನಡೆದಿದೆ. ಸುರೇಶ್ (50) ಆತ್ಮಹತ್ಯೆ ಮಾಡಿಕೊಂಡವರು. ಅರಣ್ಯ‌ ಇಲಾಖೆಯ ಹಾನುಬಾಳು ವೃತ್ತ ವ್ಯಾಪ್ತಿಯಲ್ಲಿ ಫಾರೆಸ್ಟ್‌ ವಾಚರ್‌ ಆಗಿ ಕೆಲಸ ಮಾಡುತ್ತಿದ್ದ ಸುರೇಶ್, ತಾಲೂಕು ಅರಣ್ಯ ಇಲಾಖೆ ಕಚೇರಿಯ ಸಮೀಪವೇ ಮನೆ ಮಾಡಿಕೊಂಡು ವಾಸವಿದ್ದರು. ಕೌಟುಂಬಿಕ ಕಲಹದಿಂದ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ; ಚಾಲಕ, ಕ್ಲೀನರ್ ಪಾರು

ವಿಜಯನಗರ: ಹೊಸಪೇಟೆ ತಾಲೂಕಿನ ರಾ.ಹೆ-67ರ ವಡ್ಡರಹಳ್ಳಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಪಲ್ಟಿಯಾಗಿದೆ. ಬಳ್ಳಾರಿಯಿಂದ ಕೊಪ್ಪಳದ ಕಡೆ ಹೊರಟಿದ್ದ ಗೂಡ್ಸ್ ಲಾರಿ ಅಪಘಾತಕ್ಕೀಡಾಗದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ | Road accident : ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಬಸ್‌; 35 ವಿದ್ಯಾರ್ಥಿಗಳಿಗೆ ಶಾಕ್‌, ಇಬ್ಬರು ಗಂಭೀರ

ಕಳೆದ ಹದಿನೈದು ದಿನಗಳ ಹಿಂದೆಯಷ್ಟೆ ಈ ಸೇತುವೆ ಬಳಿ ಲಾರಿ-ಆಟೋ ನಡುವೆ ಅಪಘಾತ ಸಂಭವಿಸಿ, ಒಂಬತ್ತು ಜನ ಬಲಿಯಾಗಿದ್ದರು. ಬುಧವಾರ ಸಂಜೆ ಇದೇ ಸ್ಥಳದಲ್ಲಿ ಗೂಡ್ಸ್ ಲಾರಿ ಪಲ್ಟಿಯಾಗಿದೆ. ಚಿಕ್ಕ ರಸ್ತೆ ಇರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Exit mobile version