Site icon Vistara News

Assembly Session: ವಿಧಾನಸಭೆಯಲ್ಲಿ ಯತ್ನಾಳ್‌-ಡಿಕೆಶಿ ಗುದ್ದಾಟ: ಸಂಧಾನ ಸಭೆಯನ್ನೂ ಬಹಿಷ್ಕರಿಸಿದ ಬಿಜೆಪಿ

Basangouda Patil Yatnal asked DK Shivakumar

ಬೆಂಗಳೂರು: ವಿಧಾನಸಭೆ (Assembly Session) ಕಲಾಪ ಮಂಗಳವಾರ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇದರಿಂದ ಕೋಪಗೊಂಡ ಡಿಸಿಎಂ ಡಿ.ಕೆ. ಶಿವಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಉದ್ದೇಶಿಸಿ, ಏಯ್‌ ಕೂತ್ಕೊಳ್ಳಯ್ಯ ಸಾಕು ಎಂದು ಏಕವಚನದಲ್ಲೇ ಹೇಳಿದರು.

ನಿನ್ನ ನಾಲಿಗೆ ಮೇಲೆ ಹಿಡಿತವಿರಬೇಕು. ನನ್ನಂತವನು ಆಗಿದ್ರೆ 24 ಗಂಟೆಯಲ್ಲಿ ನಿನ್ನನ್ನು ಪಕ್ಷದಿಂದ ಅಮಾನತ್ತು ಮಾಡ್ತಿದ್ದೆ. ಹಿಂದೆ‌ ನೀನು ಚೀಫ್ ಮಿನಿಸ್ಟರ್ ಹುದ್ದೆಗೆ 2000 ಕೋಟಿ ಡೀಲ್ ಅಂದವನು ಎಂದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್‌, ನೀವು ಭ್ರಷ್ಟಾಚಾರದ ಬಂಡೆ ಎಂದರು. ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಏನ್ ಮಾಡ್ರಾರೆ ನೋಡೇ ಬಿಡೋಣ. ಅಧಿಕಾರ ಶಾಶ್ವತ ಅಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಮಾತನಾಡಿ, ನೀವು ಸೋತಿದ್ದೀರೋದಕ್ಕೆ ಅಲ್ಲಿ ಹೋಗಿ ಕೂತಿರೋದು ಎಂದು ಹೇಳಿದರು.

ಏಕ ವಚನದಲ್ಲೇ ವಾಗ್ದಾಳಿ ನಡೆಸಿರುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೈರತಿ ಸುರೇಶ್‌ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟುಹಿಡಿದರು. ಈ ಸಮಯದಲ್ಲಿ ಗದ್ದಲ ವಿಪರೀತವಾಗಿ 10 ನಿಮಿಷ ಮುಂದೂಡಲಾಯಿತು. ನಂತರ ಸ್ಪೀಕರ್‌ ಕಚೇರಿಯಲ್ಲಿ ಸಂಧಾನಸಭೆ ಕರೆಯಲಾಗಿತ್ತಾದರೂ ಬಿಜೆಪಿ ಸದಸ್ಯರು ಬಹಿಷ್ಕರಿಸಿದರು.

ಇದನ್ನೂ ಓದಿ: BJP Karnataka: ಗೊಂದಲ ಇಲ್ಲ ಎಂದ ಬಿ.ಎಸ್‌. ಯಡಿಯೂರಪ್ಪ; ಸದನದಲ್ಲಿ ಅಶ್ವತ್ಥನಾರಾಯಣ-ಯತ್ನಾಳ್‌ ಗುಸುಗುಸು ಗುಟ್ಟೇನು?

ಕಾಂಗ್ರೆಸ್‌ನ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌ ಬಿಜೆಪಿ ಬಳಿ ಆಗಮಿಸಿ, ಸಭೆಗೆ ಬರುವಂತೆ ಮನವಿ ಮಾಡಿದರು. ಬೈರತಿ ಸುರೇಶ್‌ ಬಂದರೆ ಮಾತ್ರ ಬರುತ್ತೇವೆ ಎಂದು ಪಟ್ಟುಹಿಡಿದದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

Exit mobile version