Site icon Vistara News

ಅಂಬೇಡ್ಕರ್‌ ಪಠ್ಯ ಕೈಬಿಟ್ಟ ವಿವಿ: ರಾಜ್ಯದಲ್ಲಿ ಮತ್ತೊಂದು ಪಠ್ಯಪುಸ್ತಕ ಎಡವಟ್ಟು

ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ತುಮಕೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣದ ವಿವಾದ ಇನ್ನೂ ತಣ್ಣಗಾಗಿಲ್ಲ ಎನ್ನುವ ವೇಳೆಗೆ ಮತ್ತೊಂದು ಪಠ್ಯಪುಸ್ತಕ ವಿವಾದ ತಲೆದೋರಿದೆ. ಈ ಬಾರಿ ಶಾಲೆ, ಕಾಲೇಜಿನಲ್ಲಲ್ಲ, ವಿಶ್ವವಿದ್ಯಾಲಯ ಪಠ್ಯದಲ್ಲಿ ದೋಷ ಆರೋಪ ಕೇಳಿಬಂದಿದೆ. ತುಮಕೂರು ವಿಶ್ವವಿದ್ಯಾಲಯದ ಬಿ.ಎ, ಬಿ.ಎಸ್ಸಿ ಹಾಗೂ ಬಿಕಾಂ ಪದವಿಯ ಪಠ್ಯಪುಸ್ತಕದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರ ವಿಷಯ ಸೇರಿಸಲಿಲ್ಲ ಎಂದು ಪ್ರತಿಭಟನೆ ನಡೆದಿದೆ.

ಪಠ್ಯ ಪರಿಷ್ಕರಣೆ ಸಮಿತಿ ಬೇಕಂತಲೇ ಅಂಬೇಡ್ಕರ್ ಪಠ್ಯವನ್ನು ಕೈ ಬಿಟ್ಟಿದೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ತುಮಕೂರು ವಿವಿಯ ಕುಲಪತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದೆ. ಅಂಬೇಡ್ಕರ್ ಅವರ ದಿ ಅನಿಹಿಲೇಷನ್ ಆಫ್ ಕಾಸ್ಟ್ ಎಂಬ ಗದ್ಯ ಕೈಬಿಟ್ಟಿದ್ದು Constituent Assembly Debate And Article 17, Abolition Of Untouchability (ಅಸ್ಪೃಶ್ಯತೆ ನಿವಾರಣೆಗೆ, ಸಂವಿಧಾನ ಸಭೆಯ ಚರ್ಚೆ ಮತ್ತು ವಿಧಿ 17) ಎಂಬ ಗದ್ಯವನ್ನು ಸೇರಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಎರಡನೇ ಸೆಮಿಸ್ಟರ್ ಇಂಗ್ಲಿಷ್ ಪುಸ್ತಕದಲ್ಲಿ ಬದಲಾವಣೆ ತರಲಾಗಿದೆ. ಸದ್ಯ ಹೊಸದಾಗಿ ಸೇರಿಸಿರುವ ಗದ್ಯದಲ್ಲಿ ಎಲ್ಲಿಯೂ ಅಂಬೇಡ್ಕರ್ ಹೆಸರು ಉಲ್ಲೇಖವಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕೂಡಲೇ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಆಗಿರುವ ತಪ್ಪನ್ನು ಸರಿಪಡಿಸಿ ನಂತರ ಸಮಿತಿಯ ಸದಸ್ಯರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ವಿಚಾರ ಸಮಿತಿಯ ಸದಸ್ಯರು ಒತ್ತಾಯ ಮಾಡಿದರು.

ಪ್ರತಿಭಟನೆ ಬೆನ್ನಲ್ಲೆ ಒತ್ತಾಯಕ್ಕೆ ಉಪಕುಲಪತಿ ಡಾ. ಕೇಶವ ಅವರು ಪಠ್ಯ ಪರಿಷ್ಕರಣೆ ಸಮಿತಿ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಒಂದು ತಿಂಗಳ ಕಾಲಾವಕಾಶ ಪಡೆದಿದ್ದಾರೆ.

ಇದನ್ನೂ ಓದಿ: ರೋಹಿತ್‌ ಚಕ್ರತೀರ್ಥ ಸಮಿತಿ ಒಳ್ಳೆಯ ಕೆಲಸ ಮಾಡಿದೆ, ಸಮಿತಿಯನ್ನು ವಿಸರ್ಜಿಸಲಾಗಿದೆ !: CM ಆದೇಶ

Exit mobile version