ತುಮಕೂರು: ಜಮೀನು ವಿವಾದ ಹಿನ್ನೆಲೆಯಲ್ಲಿ (Assault Case) ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆಮಾರ್ಗೋನಹಳ್ಳಿಯಲ್ಲಿ ಘಟನೆ ನಡೆದಿದೆ. ಶಶಿಕುಮಾರ್, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಾಗೇಗೌಡನಪಾಳ್ಯದ ಮಂಜುನಾಥ್ ಎಂಬಾತನ ತಾಯಿ, ಪತ್ನಿ ಹಾಗೂ ಗಂಗಮ್ಮ, ನಾಗಯ್ಯ ಎಂಬುವವರು ಹಲ್ಲೆ ನಡೆಸಿದ್ದಾರೆ.
ಲಕ್ಷ್ಮಣಯ್ಯಗೆ ಸೇರಿದ ಸರ್ವೇ ನಂ.26ರ ಜಮೀನಿನ ವಿಚಾರಕ್ಕೆ ಗಲಾಟೆ ನಡೆದಿದೆ. 1 ಎಕರೆ 10 ಗುಂಟೆಗೆ ಪಹಣಿ ಇದ್ದು, ಸರ್ವೆ ನಂ.26 ರಲ್ಲಿ ಇರುವ 15 ಗುಂಟೆ ಕರಾಬಿನ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಈಗಾಗಲೇ 15 ಗುಂಟೆ ಕರಾಬು ಜಾಗದಲ್ಲಿ ಲಕ್ಷ್ಮಣಯ್ಯ ಉಳುಮೆ ಮಾಡಿಕೊಂಡಿದ್ದಾರೆ.
15 ಗುಂಟೆ ಕರಾಬು ನಮಗೆ ಸೇರಬೇಕೆಂದು ಪಕ್ಕದ ಜಮೀನಿನ ಮಂಜುನಾಥ ಕುಟುಂಬಸ್ಥರಿಂದ ಲಕ್ಷ್ಮಣಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಗಳಕ್ಕೆ ಬಂದ ಮಂಜುನಾಥ್ ಕುಟುಂಬಸ್ಥರು, ಲಕ್ಷ್ಮಣಯ್ಯನನ್ನು ಹಿಡಿದು ನೀರಿನಲ್ಲಿ ಮುಳುಗಿಸಿ, ಕುಡುಗೋಲು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಲಕ್ಷ್ಮಣಯ್ಯಗೆ ಗಂಭೀರ ಗಾಯಗೊಂಡಿದ್ದು, ತುರುವೇಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!
ದೇವನಹಳ್ಳಿಯ ಶಾಲೆ ಹಿಂಭಾಗ ಶವ ಪತ್ತೆ
ರಾಜಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಂದಿನಿ ಶಾಲೆ ಹಿಂಭಾಗ ಘಟನೆ ನಡೆದಿದೆ. ರಾಜಕಾಲುವೆಯಲ್ಲಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬುದರ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ತಂದೆಯನ್ನು ಹುಡುಕಿಕೊಡುವಂತೆ ಮಗನ ಅಳಲು
ತಂದೆಯನ್ನು ಹುಡುಕಿಕೊಡುವಂತೆ ಮಗನೊಬ್ಬ ಎಸ್‌ಪಿ ಕಚೇರಿಗೆ ಆಗಮಿಸಿದ್ದಾನೆ. ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದ ದ್ಯಾಮಪ್ಪ ಹಡಪದ ಕಳೆದ ಮೇ 19ರಂದು ಏಕಾಏಕಿ ಕಾಣೆಯಾಗಿದ್ದರಿ. ಕಳೆದ 50 ದಿನಗಳಿಂದ ತಂದೆ ಕಾಣುತ್ತಿಲ್ಲ ಎಂದು ಮಗ ಪ್ರವೀಣ್ ಅಳಲು ತೊಡಿಕೊಂಡಿದ್ದಾರೆ. ಧಾರವಾಡ ಎಸ್‌ಪಿ ಕಚೇರಿಗೆ ಆಗಮಿಸಿ ತಂದೆಯನ್ನು ಹುಡುಕಿಕೊಡುವಂತೆ ಪ್ರವೀಣ್ ಮನವಿ ಮಾಡಿದ್ದಾರೆ. ನಮ್ಮ ತಂದೆಗೆ ಏನಾಗಿದೆ ಅಂತಲೇ ಗೊತ್ತಿಲ್ಲ, ಅವರನ್ನ ಹುಡುಕಿಕೊಡಿ ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ