Site icon Vistara News

Bear Attack | ಕರಡಿಯ ಭೀಕರ ದಾಳಿಗೆ ರೈತ ಬಲಿ

Bear Attack in belagavi district

Bear Attack in belagavi district

ತುಮಕೂರು: ಜಮೀನಿನಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿ ದಾಳಿ ಮಾಡಿದ(Bear Attack) ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಎಲೆಕಡಕಲು ಗ್ರಾಮದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.

ರಾಜು(33) ಮೃತಪಟ್ಟ ರೈತ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಬುಧವಾರ ರೈತನ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದೆ. ರೈತನ ದೇಹದಿಂದ ಕರುಳಿನ ಭಾಗವೇ ಹೊರಕ್ಕೆ ಬರುವಷ್ಟು ಭೀಕರವಾಗಿ ಕರಡಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರೈತನನ್ನು ತಕ್ಷಣ ಕುಣಿಗಲ್ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿಯ ಬಿ.ಜಿ.ಎಸ್.ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ರೈತ ಕೊನೆಯುಸಿರೆಳೆದಿದ್ದಾರೆ.

ರೈತನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕರಡಿ ದಾಳಿಯಿಂದ ಎಲೆಕಡಕಲು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ ಹೊಲ ಗದ್ದೆಗಳ ಕಡೆಗೆ ಹೋಗಲು ಭಯಪಡುತ್ತಿದ್ದಾರೆ. ಹುಲಿಯೂರುದುರ್ಗ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್‌ ತಂತಿ ತುಂಡಾಗಿ ಬಿದ್ದು ರೈತ ಸಾವು
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಯುವ ರೈತ ಮೃತಪಟ್ಟಿರುವುದು ನಡೆದಿದೆ. ಮೂಲಿಮನಿ ಎರ‍್ರಿಸ್ವಾಮಿ (‌21) ಮೃತ. ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ ಎಂದು ಆರೋಪಿಸಿ, ರೈತನ ಮೃತದೇಹದೊಂದಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೃತ ರೈತ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Animal attack | ಚಿರತೆ ಆಯ್ತು, ಆನೆ ಹೋಯ್ತು.. ಈಗ ಕರಡಿ ಸರದಿ: ಮನೆ ಪಕ್ಕವೇ ಓಡಾಟ ಕಂಡು ಬೆಚ್ಚಿಬಿದ್ದ ಜನ!

Exit mobile version