ತುಮಕೂರು: ಲೋಕಸಭಾ ಚುನಾವಣೆಯ (Lok Sabha Election 2024) ಫಲಿತಾಂಶಕ್ಕೂ ರಾಜ್ಯದ ಮುಖ್ಯಮಂತ್ರಿ (Cheif Minister Post) ಹುದ್ದೆಗೂ ಸಂಬಂಧವಿದೆ. ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಪಡೆಯದೆ ಹೋದರೆ ಮುಖ್ಯಮಂತ್ರಿ ಬದಲಾವಣೆ (Chief Minister Change) ಖಚಿತ ಎಂಬ ಗುಸುಗುಸು ಸುದ್ದಿಗೆ ಈ ಕಾಂಗ್ರೆಸ್ ಶಾಸಕರೊಬ್ಬರು (Congress Politics) ಬೆಂಕಿ ಹಚ್ಚಿದ್ದಾರೆ.
ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಲಿಲ್ಲ ಎಂದರೆ ಸಿಎಂ ಸಿದ್ದರಾಮಯ್ಯ () ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸ್ವತಃ ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ. ತಿಟಟೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಪರ ಪ್ರಚಾರದ ಭಾಷಣದ ವೇಳೆ ಸಿ.ಎಂ ರಾಜೀನಾಮೆ ವಿಷಯ ಪ್ರಸ್ತಾಪ ಮಾಡಿದ ಅವರು, ರಾಜ್ಯದಲ್ಲಿ ಇವತ್ತು ನಮ್ಮ ಸರ್ಕಾರ ಇದೆ. ಆದರೆ, ಹೆಚ್ಚು ಸ್ಥಾನ ಗೆಲ್ಲದೆ ಹೋದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ʻʻಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯ ಅವರನ್ನು ಉಳಿಸುವ ಕೆಲಸ ನಾವೆಲ್ಲ ಮಾಡಬೇಕು. ಎಲ್ಲಾ ಕಾರ್ಯಕರ್ತರು ಸೇರಿ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕುʼʼ ಎಂದ ಎಸ್ ಆರ್.ಶ್ರಿನಿವಾಸ್ ಮನವಿ ಮಾಡಿದರು.
ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರದ ಸಭೆಯಲ್ಲಿ ಹೇಳಿಕೆ ನೀಡಿರುವ ಎಸ್. ಆರ್ ಶ್ರೀನಿವಾಸ್ (ಗುಬ್ಬಿ ವಾಸು) ಗುಬ್ಬಿ ವಾಸು) ಹೇಳಿಕೆ ಬೆನ್ನಲ್ಲೇ ರಾಜಕೀಯ ಪಡಸಾಲೆಯಲ್ಲಿ ಬೇರೆ ಬೇರೆ ರೀತಿಯ ವಿಶ್ಲೇಷಣೆ ನಡೆಯುತ್ತಿದೆ.
ಇದು ಎಸ್. ಆರ್ ಶ್ರೀನಿವಾಸ್ ಅವರ ವೈಯುಕ್ತಿಕ ಹೇಳಿಕೆಯೇ ಅಥವಾ ಹೇಳಿಕೆ ಹಿಂದೆ ರಾಜಕೀಯ ದಾಳ ಇದೆಯೇ? ಇದು ಎಚ್ಚರಿಕೆಯೋ ಅಥವಾ ಅಹಿಂದ ಮತ ಬ್ಯಾಂಕ್ ಭದ್ರಪಡಿಸುವ ಲೆಕ್ಕಾಚಾರವೋ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : Lok Sabha Election 2024: ಕೋಲಾರ ಸೇರಿ 3 ಕ್ಷೇತ್ರ ಜೆಡಿಎಸ್‌ಗೆ; ಬಿಜೆಪಿ ಅಧಿಕೃತ ಪ್ರಕಟಣೆ
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗದ ಮಾಸ್ ಲೀಡರ್. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರಂಟಿಗಳ ಯಶಸ್ವಿಯಾಗಿ ಜಾರಿ ಮಾಡಿದ್ದಾರೆ. ಒಂದು ವೇಳೆ ಸರ್ಕಾರದ ಪರವಾಗಿ ಜನಮತ ಬರಲಿಲ್ಲ ಎಂದರೆ ಸಿಎಂ ಬದಲಾವಣೆ ಆಗಬಹುದು ಎಂಬ ಸುದ್ದಿಯನ್ನು ಈ ಮೂಲಕ ಹರಿಬಿಡಲಾಗುತ್ತಿದೆಯೇ?
ಸಿಎಂ ಬದಲಾವಣೆಯ ಆತಂಕ ಸೃಷ್ಟಿಸಿ ಅಹಿಂದ ವರ್ಗಗಳನ್ನು ಮತ ಭದ್ರಪಡಿಸಿಕೊಳ್ಳುವ ತಂತ್ರಗಾರಿಕೆ ಇದಾಗಿರಬಹುದೆ ಎಂಬ ಪ್ರಶ್ನೆ ಎದ್ದು ನಿಂತಿದೆ. ಇದಕ್ಕೆ ಪೂರಕವೆಂಬಂತೆ ಹೆಚ್ಚು ಸ್ಥಾನ ಬರಲಿಲ್ಲ ಎಂದರೆ ಸರ್ಕಾರ ನಡೆಸಲು ಯಾವ ನೈತಿಕಕತೆಯಿದೆ ಎಂಬ ಹೇಳಿಕೆ ನೀಡಿದ್ದರು ಸಹಕಾರ ಸಚಿವ ಕೆ.ಎನ್ ರಾಜಣ್ಣ.. ಹೀಗಾಗಿ ಲೋಕಸಭೆಯಲ್ಲಿ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕೈ ನಾಯಕರಿಂದ ಸಿಎಂ ಬದಲಾವಣೆ ಕೂಗಿನ ತಂತ್ರಗಾರಿಕೆ ನಡೆಯುತ್ತಿರುವ ಸಾಧ್ಯತೆಗಳಿವೆ.
ಇದರ ಜತೆಗೇ ಎರಡಂಕಿ ಸ್ಥಾನ ಬರದೆ ಹೋದರೆ ಕಾಂಗ್ರೆಸ್‌ಗೆ ಹಿನ್ನಡೆ ಎಂಬ ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಪ್ರಯತ್ನ ನಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ.