Site icon Vistara News

Cow Smugglers: ಕಂಟೇನರ್‌ ವಾಹನದಲ್ಲಿ ಅಕ್ರಮ ಗೋ ಸಾಗಣೆ; ಕಟುಕರ ಪಾಲಾಗುತ್ತಿದ್ದ ಗೋವುಗಳ ರಕ್ಷಣೆ

Cow Smugglers in Tumkur

ತುಮಕೂರು: ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರು ಅಕ್ರಮ ಗೋವು ಸಾಗಾಣೆ (Cow Smugglers) ನಡೆಯುತ್ತಲೆ ಇದೆ. ಸದ್ಯ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.

ಕಂಟೇನರ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಟೋಲ್‌ ಬಳಿ ದಾಳಿ ಮಾಡಿದಾಗ ವಾಹನದಲ್ಲಿ 20 ಗೋವುಗಳು ಇರುವುದು ಪತ್ತೆಯಾಗಿದೆ.

ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಣೆ ಮಾಡಲಾಗುತ್ತಿತ್ತು. ಕಂಟೇನರ್ ವಾಹನದಲ್ಲಿದ್ದ 20 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು. ಸದ್ಯ ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ 2020ರ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: 2nd PUC Result: ಏ.10ರ ಹೊತ್ತಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

ಹಾಸನದಲ್ಲಿ ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

ಹಾಸನ: ಗೋವುಗಳ ಅಕ್ರಮ ಸಾಗಣೆ (Cow Smuggling), ಅಕ್ರಮವಾಗಿ ಗೋಮಾಂಸ ಮಾರಾಟ ನಿಯಂತ್ರಣಕ್ಕೆ ಎಷ್ಟೇ ಕಾನೂನು ಜಾರಿಯಲ್ಲಿದ್ದರೂ ಕೆಲವೆಡೆ ಯಥೇಚ್ಛವಾಗಿ ಗೋಮಾಂಸ ಮಾರಾಟ ದಂಧೆ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ, ಹಾಸನದಲ್ಲಿ (Hassan) ಗೋಮಾಂಸದ ಅಕ್ರಮ ಮಾರಾಟದ ಜಾಲವೊಂದು ಬಯಲಾಗಿದೆ. ಮಾಂಸ ಮಾರಾಟಕ್ಕಾಗಿ ದುರುಳರು ಸುಮಾರು 60ಕ್ಕೂ ಅಧಿಕ ಗೋವುಗಳನ್ನು ವಧೆ (Cow Slaughter) ಮಾಡಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಸುಮಾರು 60 ಗೋವುಗಳನ್ನು ಕೊಂದಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಐದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಇನ್ನು 60 ಗೋವುಗಳನ್ನು ಕೊಂದ ದುಷ್ಕರ್ಮಿಗಳು, ಅವುಗಳನ್ನು ನೇತು ಹಾಕಿದ್ದಾರೆ. ಪೊಲೀಸರು ಸುಮಾರು 10 ಸಾವಿರ ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಮೊಹಮ್ಮದ್‌ ಅಬ್ದುಲ್‌ ಹಕ್‌ ವಿರುದ್ಧ ಆರೋಪ

ಮೊಹಮ್ಮದ್‌ ಅಬ್ದುಲ್‌ ಹಕ್‌ ಎಂಬುವವರು ಗೋವುಗಳ ಮಾಂಸವನ್ನು ಅಕ್ರಮ ಮಾರಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಗೋವುಗಳನ್ನು ವಧೆ ಮಾಡುವಾಗಲೇ ಪೊಲೀಸರು ದಾಳಿ ನಡೆಸಿದ್ದು, ದುಷ್ಕರ್ಮಿಗಳು ಕೂಡಲೇ ಪರಾರಿಯಾಗಿದ್ದಾರೆ. ಗೋವುಗಳನ್ನು ಸಂಹರಿಸಿ, ಅವುಗಳ ರಕ್ತವನ್ನು ಕೆರೆ ಬಿಡುತ್ತಿದ್ದರು ಎಂಬ ಕುರಿತು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಮಾಂಸವನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಿಂಧಿ ಕರುಗಳ ರಕ್ಷಣೆ

ಚನ್ನರಾಯಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಿಂಧಿ ಕರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಬೆಳಗಿನ ಜಾವ 4.30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ ಪೊಲೀಸರು 26 ಸಿಂಧಿ ಕರುಗಳನ್ನು ರಕ್ಷಿಸಿದ್ದಾರೆ. ಇದರೊಂದಿಗೆ ಒಂದೇ ದಿನ ಎರಡು ಕಡೆ ಪೊಲೀಸರು ದಾಳಿ ನಡೆಸಿದ್ದು, ಕರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪೊಲೀಸರನ್ನು ಕಾಣುತ್ತಲೇ ವಾಹನ ಚಾಲಕ ಸೇರಿ ಹಲವು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಎರಡು ಹಸುಗಳಿಗೆ ಗುಂಡಿಕ್ಕಿ ಕೊಂದ ಘಟನೆ ಹಾಸನದ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ವಸಂತ್‌‌ಕುಮಾರ್, ಶಿವಮ್ಮ ಎಂಬುವವರಿಗೆ ಸೇರಿದ ಹಸುಗಳು ಕಾಣೆಯಾಗಿದ್ದವು. ವಸಂತ್‌ಕುಮಾರ್, ಶಿವಮ್ಮ ಸೇರಿ ಗೋವುಗಳಿಗಾಗಿ ಹುಡುಕಾಡಿದ್ದರು. ಎರಡು ದಿನಗಳ ಐಬಿಸಿ ಎಸ್ಟೇಟ್‌ನಲ್ಲಿ ಗೋವುಗಳ ಮೃತದೇಹ ಪತ್ತೆಯಾಗಿದ್ದವು. ಕಿರಾಕತರು ಎರಡು ಗಬ್ಬದ ಹಸುಗಳನ್ನು ಗುಂಡು ಹಾರಿಸಿ ಕೊಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version