ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಬಾಯಿಸುವ ವೇಳೆಹೆ ಡಿ.ಕೆ. ಶಿವಕುಮಾರ್ ಹೆಣಗಾಡುತ್ತಿದ್ದಾರೆ ಎಂಬ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಟೈಂ ಎನ್ನುವುದು 24 ಗಂಟೆ ಮಾತ್ರ ಇರೋದು. ಇದರಲ್ಲಿ ಅನೇಕ ಚಾಲೆಂಜ್ ಇವೆ. ಡಬ್ಬಲ್ ಇಂಜಿನ್ ಸರ್ಕಾರ ಇದು. ಬೇಕಾದ ಎಲ್ಲಾ ವಿಭಾಗ ದುರ್ಬಳಕೆ ಮಾಡುತ್ತಾ ಇದ್ದಾರೆ. ಪೊಲೀಸ್ ಇಲಾಖೆಯನ್ನೂ ದುರ್ಬಳಕೆ ಮಾಡುತ್ತಾ ಇದ್ದಾರೆ. ರೌಡಿ ಮೋರ್ಚಾ ಕೂಡ ಮಾಡುತ್ತಾ ಇದ್ದಾರೆ. ಇದು ಪೊಲೀಸರಿಗೆ ಗೊತ್ತಾಗುತ್ತಾ ಇದೆ. ಪರಮೇಶ್ವರ್ ಅವರಿಗೆ ನನ್ನ ಮೇಲೆ ಅನುಕಂಪ ಇದೆ. ನಾವು ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಬೇಕಿದೆ ಎಂದಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ್ದ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಾನು ಸತತವಾಗಿ 8 ವರ್ಷಗಳ ಕಾಲ ಕುಳಿತು ನಿಭಾಯಿಸಿದ್ದೇನೆ. ಅದು ಅಷ್ಟು ಸುಲಭದ ಮಾತಲ್ಲ. ಕಾಂಗ್ರೆಸ್ ಪಕ್ಷವೇ ನನ್ನ ಮೇಲೆ ನಂಬಿಕೆಯಿಟ್ಟು, ಅಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿತ್ತು. ಆದರೆ ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಆ ಸ್ಥಾನವನ್ನು ನಿಭಾಯಿಸಲು ಒಮ್ಮೊಮ್ಮೆ ಗಾಬರಿಪಡುತ್ತಾರೆ. ಇಡೀ ರಾಜ್ಯದಲ್ಲಿ ಪಕ್ಷದ ಆಗುಹೋಗುಗಳನ್ನು ನಿಭಾಯಿಸಲು ಡಿ.ಕೆ. ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ. ನಾವೆಲ್ಲರೂ ಇದ್ದೇವೆ ಎಂದು ನಾನು ಧೈರ್ಯ ಕೊಡುತ್ತೇನೆ ಎಂದಿದ್ದರು.
ಪರಮೇಶ್ವರ್ ಈ ಮಾತನ್ನು, ಕೆಪಿಸಿಸಿ ಅಧ್ಯಕ್ಷರ ಕಾರ್ಯದ ಒತ್ತಡದ ಕುರಿತು ಹೇಳಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಅಧ್ಯಕ್ಷರ ಮೇಲೆ ಅನಗತ್ಯ ಒತ್ತಡವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣ ಹೇರುತ್ತಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆಯೇ ಎಂದು ಪಕ್ಷದ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಶಿವಕುಮಾರ್ ಎಲ್ಲವಕ್ಕೂ ತೆರೆ ಎಳೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ | DK Shivakumar | ದುಬೈನಲ್ಲಿ ಜಾಲಿ ಮೂಡ್‌ನಲ್ಲಿರುವ ಡಿ.ಕೆ ಶಿವಕುಮಾರ್, ಶಾಸಕ ಹ್ಯಾರಿಸ್ ನಲಪಾಡ್ ಸಾಥ್