Site icon Vistara News

Domestic Violence : ಹೆಂಡತಿ ಕಾಟ ತಾಳಲಾಗದೆ Metro ಎಂಜಿನಿಯರ್‌ ಆತ್ಮಹತ್ಯೆ ; ನೀನೊಬ್ಬ ಹಳ್ಳಿ ಗುಗ್ಗು ಅಂತಿದ್ಲಂತೆ!

Manjunath priyanka

ತುಮಕೂರು: ಇದೊಂದು ಡಿಫರೆಂಟ್‌ ಘಟನೆ. ಸಾಮಾನ್ಯವಾಗಿ ಗಂಡನ ಕಿರಿಕಿರಿ ತಾಳಲು ಸಾಧ್ಯವಾಗದೆ (Domestic violence) ಪತ್ನಿಯರು ಅಸಹಾಯಕರಾಗಿ ಪ್ರಾಣ ಕಳೆದುಕೊಳ್ಳುವ ವಿದ್ಯಮಾನಗಳು ನಡೆಯುತ್ತಿರುತ್ತವೆ. ಇಂಥ ಕ್ರೂರ ಗಂಡಸರ ಬಗ್ಗೆ ಸಮಾಜವೂ ಅತ್ಯಂತ ಅಸಹ್ಯದಿಂದ ನೋಡುತ್ತದೆ. ಆದರೆ, ಈಗ ತುಮಕೂರಿನಲ್ಲಿ ನಡೆದಿರುವ ಈ ಘಟನೆಯಲ್ಲಿ ಪಾಪ ಗಂಡನೇ ಅಸಹಾಯಕ (Husband ends life). ಸದಾ ಹೀಗಳೆಯುವ ಹೆಂಡತಿಯ ಜತೆ ಬಾಳಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ (Self Harming) ಎಂದು ವಾಯ್ಸ್‌ ಮೆಸೇಜ್‌ ಮಾಡಿಯೇ ನೇಣಿಗೆ ಶರಣಾಗಿದ್ದಾನೆ (Self Harming).

ಹಾಗಂತ ಹೀಗೆ ಆತ್ಮಹತ್ಯೆ ಮಾಡಿಕೊಂಡವನು ಸಾಮಾನ್ಯ ವ್ಯಕ್ತಿಯೇನಲ್ಲ. ವೃತ್ತಿಯಲ್ಲಿ ಎಂಜಿನಿಯರ್‌ (Engineer at Metro) ಬೆಂಗಳೂರಿನ ಮೆಟ್ರೋದಲ್ಲಿ ಕೆಲಸ. ಇದೇನು ಮದುವೆಯೂ ಹೊಸದಲ್ಲ. 10 ವರ್ಷದ ಹಿಂದೆಯೇ ಮದುವೆಯಾಗಿದ್ದು, ಇಲ್ಲಿವರೆಗೆ ಸಹಿಸಿಕೊಂಡೆ, ಇನ್ನು ಸಾಧ್ಯವಿಲ್ಲ ಎಂದು ಮೆಸೇಜ್‌ ಕಳುಹಿಸಿ ನೇಣು ಹಾಕಿಕೊಂಡಿದ್ದಾನೆ.

ಈ ರೀತಿ ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯೇ ಮಂಜುನಾಥ್ (38). ಅವರು ತುಮಕೂರು ಜಿಲ್ಲೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.

ಮಂಜುನಾಥ್‌ ಅವರಿಗೆ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕ ಅವರ ಜತೆ ಮದುವೆಯಾಗಿತ್ತು. ಮಂಜುನಾಥ್‌ ಬೆಂಗಳೂರಿನ ನಮ್ಮ ಮೆಟ್ರೋ (ಬಿಎಂಆರ್ ಸಿಎಲ್)ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಹೀಗಾಗಿ ದಂಪತಿ ಬೆಂಗಳೂರಿನಲ್ಲೇ ವಾಸವಾಗಿದ್ದರು.

ಮಂಜುನಾಥ್‌ಗೆ ಒಳ್ಳೆಯ ಕೆಲಸ ಇತ್ತು. ಚೆನ್ನಾಗಿ ಸಂಬಳವಿತ್ತು. ಮನಸು ಮಾಡಿದ್ದರೆ ಒಳ್ಳೆಯ ಬದುಕು ಬಾಳಬಹುದಿತ್ತು. ಆದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೇ ಸಂಸಾರದ ಸರಿಗಮ ತಪ್ಪಿತ್ತು. ಅವರಿಬ್ಬರ ಪದೇ ಪದೇ ಗಲಾಟೆ ಆಗ್ತಿತ್ತು ಎನ್ನಲಾಗಿದೆ.

ಮದುವೆಯಾದ ಬಳಿಕ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಮಂಜುನಾಥ್‌ ಆರೋಪ. ʻʻನೀನು ಹಳ್ಳಿ ಗುಗ್ಗು, ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲʼʼ ಎಂದು ಪದೇಪದೆ ಕಿಚಾಯಿಸುತ್ತಿದ್ದಳಂತೆ ಪ್ರಿಯಾಂಕ. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇಪದೆ ಗಲಾಟೆ ಆಗುತ್ತಿತ್ತು ಎನ್ನುವುದು ದೂರು.

ಪತ್ನಿಯ ಕಿರುಕುಳಕ್ಕೆ ಮನ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಸಿಕ್ಕಿರುವ ದಾಖಲೆ ಎಂದರೆ ಮಂಜುನಾಥ್‌ ಅವರು ಆತ್ಮಹತ್ಯೆಯ ಮುನ್ನ ತನ್ನ ಸಹೋದರನಿಗೆ ಕಳುಹಿಸಿರುವ ಆಡಿಯೊ ಮೆಸೇಜ್‌.

ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ. ಆ ಮನೆ ಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೇಸೆಜ್ ಮಾಡಿದ್ದಾರೆ. ಇದೆಲ್ಲದರ ಆಧಾರದ ಮೇಲೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ : Self Harming : ಶಾಲೆ ಪಕ್ಕದಲ್ಲಿತ್ತು ಆಟೋ ಚಾಲಕನ ಡೆಡ್‌ಬಾಡಿ; ಇದು ಕೊಲೆಯೋ? ಆತ್ಮಹತ್ಯೆಯೋ?

ಇದು ಮಂಜುನಾಥ್‌ ವರ್ಷನ್‌. ನಿಜಕ್ಕೂ ಪ್ರಿಯಾಂಕಾ ಈ ರೀತಿಯಾಗಿ ವರ್ತಿಸುತ್ತಿದ್ದರಾ? ಯಾಕೆ ಪದೇಪದೆ ಜಗಳವಾಗುತ್ತಿತ್ತು? ಮದುವೆಯಾಗಿ 10 ವರ್ಷ ಆದ ನಂತರ ನಿಮ್ಮನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದರೆ ಏನರ್ಥ? ಒಬ್ಬ ಎಂಜಿನಿಯರ್‌ ಆಗಿರುವ ವ್ಯಕ್ತಿ ಹಳ್ಳಿಗುಗ್ಗು ಆಗಿರುವುದು ಹೇಗೆ ಎಂಬಿತ್ಯಾದಿ ಹಲವು ಪ್ರಶ್ನೆಗಳು ಎದ್ದುನಿಂತಿವೆ. ಅವುಗಳಿಗೆ ಪ್ರಿಯಾಂಕಾ ಮತ್ತು ಪೊಲೀಸರ ತನಿಖೆಯೇ ಉತ್ತರ ಕೊಡಬೇಕಾಗಿದೆ.

Exit mobile version