Site icon Vistara News

Vijay Sankalpa Yatre: ಗುಬ್ಬಿ ಭಿನ್ನಮತಕ್ಕೆ ಹೆದರಿ ಬಿಜೆಪಿ ನಾಯಕರು ಬರಲೇ ಇಲ್ಲ; ನಾಲ್ವರು ಆಕಾಂಕ್ಷಿಗಳದ್ದೇ ರ‍್ಯಾಲಿ !

Gubbi ticket aspirants participated in vijay sankalpa yatre

#image_title

ತುಮಕೂರು: ಬಿಜೆಪಿ ವತಯಿಂದ ರಾಜ್ಯದ ವಿವಿಧೆಡೆ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯ ತುಮಕೂರಿನ ರ‍್ಯಾಲಿಗೆ ನಾಯಕರುಗಳ್ಯಾರೂ ಬಾರದೆ ನಾಲ್ವರು ಆಕಾಂಕ್ಷಿಗಳೇ ರೋಡ್‌ ಶೋ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿಎಸ್ ವೈ, ಸಚಿವ ಆರ್.ಅಶೋಕ್ ಆಗಮಿಸಬೇಕಿತ್ತು.

ಆದರೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪರಸ್ಪರರ ನಡುವೆ ಕಿತ್ತಾಟ ಮನಗಂಡು ಗುಬ್ಬಿ ರೋಡ್ ಶೋಗೆ ಮೂವರೂ ನಾಯಕರು ಹಿಂದೇಟು ಹಾಕಿದ್ದಾರೆ. ತಮ್ಮ ಬದಲಿಗೆ ಸಂಸದ ಪಿ.ಸಿ ಮೋಹನ್, ತುಮಕೂರು ಜಿಲ್ಲೆ ಸಂಸದ ಜಿ‌.ಎಸ್. ಬಸವರಾಜು ಅವರನ್ನು ಹೋಗಲು ತಿಳಿಸಿದ್ದಾರೆ.

ಆದರೆ ಯಾವುದೇ ನಾಯಕರು ಆಗಮಿಸದ ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾದ ಎನ್. ಬೆಟ್ಟಸ್ವಾಮಿ, ಎಸ್.ಡಿ. ದಿಲೀಪ್ ಕುಮಾರ್, ಎನ್.ಸಿ. ಪ್ರಕಾಶ್, ಚಂದ್ರಶೇಖರ್ ಬಾಬು(ಗ್ಯಾಸ್ ಬಾಬು) ರಥದಲ್ಲಿ ಸಾಗಿ ರ‍್ಯಾಲಿ ನಡೆಸಿದ್ದಾರೆ.

ಇದನ್ನೂ ಓದಿ: Vijay Sankalpa Yatre: ಮಾ.25ರಂದು ದಾವಣಗೆರೆಯಲ್ಲಿ ಮೋದಿ ಹವಾ; 10 ಲಕ್ಷ ಜನರ ನಿರೀಕ್ಷೆ

ಬೆಟ್ಟಸ್ವಾಮಿ ಹೊರತುಪಡಿಸಿದರೆ ಉಳಿದ ಮೂರು ಆಕಾಂಕ್ಷಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅತಿ ಹೆಚ್ಚು ಲಿಂಗಾಯತ ಮತಗಳಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರ ಮುಂದೆ ಶಕ್ತಿ ಪ್ರದರ್ಶನಕ್ಕೆ ಆಕಾಂಕ್ಷಿಗಳು ನಿರ್ಧರಿಸಿದ್ದರು.

ಫ್ಲೆಕ್ಸ್ ವಿಚಾರದಲ್ಲಿಯೂ ಆಕಾಂಕ್ಷಿಗಳು ಗಲಾಟೆ ಮಾಡಿಕೊಂಡಿದ್ದರು. ಎಲ್ಲಾ ವಿಚಾರಗಳನ್ನೂ ಮನಗಂಡು ಗುಬ್ಬಿ ಕಾರ್ಯಕ್ರಮವನ್ನೇ ಬಿಜೆಪಿ ನಾಯಕರು ರದ್ದು ಮಾಡಿದ್ದರು.

Exit mobile version