ತುಮಕೂರು: ರಾಜ್ಯದ ವಿವಿಧೆಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗಿರುವ ಜತೆಗೆ ಮಳೆ ನೀರು ಹರಿಯುವ ಮಾರ್ಗವನ್ನು ಮುಚ್ಚಿರುವುದರಿಂದ ನವರಸನಾಯಕ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಮನೆಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಜಗ್ಗೇಶ್ ಅವರ ಮನೆಯೊಳಗ್ಗೆ ನೀರು ನುಗ್ಗಿದೆ. ಈ ಕುರಿತು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ. ನೀರು ಹರಿಯುವ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ, ನೀರು ಹರಿಯುವ ಹೊಂಡಗಳನ್ನು ಮುಚ್ಚಿದ್ದಾರೆ. ಮಾಯಸಂದ್ರದ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನೀರು ನುಗ್ಗುತ್ತದೆ. ದಯವಿಟ್ಟು ನೀರಾವರಿ ನಿಗಮ ಗಮನಹರಿಸಬೇಕು ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ | Heavy Rain | ತುಮಕೂರಿನಲ್ಲಿ ಮಳೆ ಅನಾಹುತ: ಮುಳುಗಿದ ಸೇತುವೆ, ದಾಟಲು ಹೋಗಿ ಟ್ರ್ಯಾಕ್ಟರ್ ಪಲ್ಟಿ, ಮನೆಗೂ ನೀರು