Site icon Vistara News

2023ಕ್ಕೆ ಜೆಡಿಎಸ್‌ ಪಾಲಿನ ಕೊನೆಯ ಚುನಾವಣೆ: ನಿಖಿಲ್‌ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ

Nikhil kumaraswamy jds

ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆ ಜೆಡಿಎಸ್‌ ಪಾಲಿಗೆ ಒಂದು ರೀತಿಯಲ್ಲಿ ಕೊನೆಯ ಚುನಾವಣೆ ಎಂದು ಜಾತ್ಯತೀತ ಜನತಾದಳ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರ ತಾಲೂಕು ಸಮಾವೇಶದಲ್ಲಿ ಮಾತನಾಡಿದ್ದಾರೆ.

ಕಳೆದ ಎರಡು ಮೂರು ತಿಂಗಳಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಷ್ಟಾಗಿ ಹೊರಗೆ ಕಾಣಿಸಿಕೊಳ್ಳಲಿಲ್ಲ. ಕಾರ್ಯಕರ್ತರಲ್ಲಿ ಇದರಿಂದಾಗಿ ಗೊಂದಲ ಮೂಡಿತ್ತು. ಎರಡು ತಿಂಗಳ ನಂತರ, ಗಣೇಶ ಹಬ್ಬದ ದಿನ ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಸನ್ಮಾನ್ಯ ದೇವೇಗೌಡರು ಇನ್ನೂ ನೂರಾರು ವರ್ಷ ನಮ್ಮ ಜತೆ ಬದುಕುತ್ತಾರೆ. ಆದರೆ 2023ರ ಚುನಾವಣೆ ನಮ್ಮ ಪಾಲಿಗೆ ಕೊನೆಯ ಚುನಾವಣೆ ಇದ್ದಂತೆ. ಇಲ್ಲಿಂದ ಜಾತ್ಯತೀತ ಜನತಾದಳದ ಹೊಸ ಅಧ್ಯಾಯ ಆರಂಭವಾಗಬೇಕು. ಮುಂದಿನ 25 ವರ್ಷ ಇದು ಮುಂದುವರಿಯಬೇಕು.

ತಂದೆಯವರನ್ನು (ಎಚ್‌.ಡಿ. ಕುಮಾರಸ್ವಾಮಿ) ದೇವರು ಉಳಿಸಿರುವುದು, ರೈತರ ಜೀವವನ್ನು ಉಳಿಸಲಿ ಎಂಬ ಕಾರಣಕ್ಕೆ. ಕುಮಾರಣ್ಣನಿಗೆ ಏನೂ ಆಗಬಾರದು ಎಂದು ಅದೆಷ್ಟೋ ಹೆಣ್ಣುಮಕ್ಕಳು ದೀಪ ಹಚ್ಚಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಅವರು ಇಂದು ಜೀವಂತವಾಗಿದ್ದಾರೆ. ನೂರಾರು ವರ್ಷಗಳ‌ ಕಾಲ ಅವರು ಬದುಕಬೇಕು, ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯನ್ನು ಜನರು ಇಟ್ಟುಕೊಂಡಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ | ವಿಜಯದಶಮಿ ಹೊತ್ತಿಗೆ BJPಗೆ ಪರ್ಯಾಯ ಶಕ್ತಿ: ದೇವೇಗೌಡರ ಜತೆ ತೆಲಂಗಾಣ ಸಿಎಂ ಮಾತುಕತೆ

Exit mobile version