Site icon Vistara News

Love Case : ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಮಾವತ್ತೂರು ಕೆರೆಯಲ್ಲಿ ಇಬ್ಬರು ಶವವಾಗಿ ಪತ್ತೆ

Love Case

ತುಮಕೂರು: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ (Love case) ನಾಪತ್ತೆ (Missing Case) ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಿಗಳಿಬ್ಬರ ಮೃತದೇಹಗಳು ಪತ್ತೆಯಾಗಿವೆ. ಅನನ್ಯ (19) ರಂಗಶಾಮಣ್ಣ‌(45) ಮೃತ ಪ್ರೇಮಿಗಳು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ದಡದಲ್ಲಿ ನಿನ್ನೆ ಶನಿವಾರ (ಜೂ.22) ಇಬ್ಬರ ಚಪ್ಪಲಿಗಳು ಪತ್ತೆಯಾಗಿದ್ದವು. ಜತೆಗೆ ಕೆರೆ ಬಳಿ ಕಾರು ನಿಲ್ಲಿಸಿ ಮೊಬೈಲ್‌ಗಳನ್ನು ಕಾರಿನೊಳಗೆ ಇಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೋಟ್ ಸಹಾಯದಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಭಾನುವಾರ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (45) ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದರು. ವಯಸ್ಸಿನ ಅಂತರ ಇದ್ದರೂ, ಇವರಿಬ್ಬರ ನಡುವೆ ಅದ್ಹೇಗೋ ಪ್ರೀತಿ ಚಿಗುರಿತ್ತು. ಕದ್ದುಮುಚ್ಚಿ ಇದ್ದ ಇವರಿಬ್ಬರ ಪ್ರೀತಿ ಕುಟುಂಬಸ್ಥರಿಗೆ ತಿಳಿದುಹೋಗಿತ್ತು. ಈ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ, ಇಬ್ಬರೂ ಏಕಾಏಕಿ ನಾಪತ್ತೆಯಾಗಿದ್ದರು.

ಕಳೆದ 3 ದಿನಗಳ ಹಿಂದೆ ಅನನ್ಯ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಮಾವತ್ತೂರು ಕೆರೆ ಬಳಿ ಆಕೆಯ ಚಪ್ಪಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್, ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಭಾನುವಾರ ಬೆಳಗ್ಗೆ ಇಬ್ಬರ ಶವ ಪತ್ತೆಯಾಗಿದೆ. ತಮ್ಮ ಪ್ರೀತಿಗೆ ಕುಟುಂಬದವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Pavithra Gowda: ದಚ್ಚುನ ಪ್ರೀತಿಯಿಂದ ʻಸುಬ್ಬʼ ಅಂತ ಕರೀತಾ ಇದ್ರಂತೆ ಪವಿತ್ರಾ!

ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!

ಗ್ಯಾಸ್ ಸಿಲಿಂಡರ್‌ಗಳು ತುಂಬಾ ಭಾರವಾಗಿರುತ್ತವೆ. ಗ್ಯಾಸ್ ತುಂಬಿರುವ ಸಿಲಿಂಡರ್ ಬಿಡಿ ಖಾಲಿ ಇರುವ ಸಿಲಿಂಡರ್ ಗಳನ್ನೇ ನಮ್ಮ ಕೈಯಲ್ಲಿ ಎತ್ತಲು ಆಗುವುದಿಲ್ಲ. ಅದರಲ್ಲೂ ಮಹಿಳೆಯರಿಗಂತೂ ಇದು ಅಸಾಧ್ಯವಾದ ಕೆಲಸ. ಅಂತಹದರಲ್ಲಿ ಹರಿಯಾಣದ ಮಹಿಳೆಯೊಬ್ಬಳು ತನ್ನ ತಲೆಯ ಮೇಲೆ ಎರಡು ಗ್ಯಾಸ್ ಸಿಲಿಂಡರ್ ಅನ್ನು ಬ್ಯಾಲೆನ್ಸ್ ಮಾಡುವ ಮೂಲಕ ನೋಡುಗರನ್ನು ಅಚ್ಚರಿಗೊಳಿಸಿದ್ದಾಳೆ. ಈ ವಿಡಿಯೊ ವೈರಲ್(Viral Video) ಆಗಿದೆ.

ನೀತು ಎಂಬ ಯುಟ್ಯೂಟ್ ಚಾನೆಲ್ ಹೊಂದಿರುವ ಮಹಿಳೆ ಈ ವಿಡಿಯೊವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ನೀತು ತಲೆಯ ಮೇಲೆ ಎರಡು ಗ್ಯಾಸ್ ಸಿಲಿಂಡರ್ ಅನ್ನು ಒಂದರ ಮೇಲೆ ಒಂದನ್ನು ಇಟ್ಟು ಅದರ ಮೇಲೆ ಒಂದು ತಾಮ್ರದ ಪಾತ್ರೆಯನ್ನು ಇಟ್ಟುಕೊಂಡು ಕೇವಲ ಬ್ಯಾಲೆನ್ಸ್ ಮಾಡಿದ್ದು ಮಾತ್ರವಲ್ಲ ಜನಪ್ರಿಯ ಪಂಜಾಬಿ ಹಾಡು ಸೌನ್ ದಿ ಝಾಡಿಗೆ ಆಕರ್ಷಕವಾಗಿ ನೃತ್ಯ ಮಾಡಿದ್ದಾಳೆ.

ನೀತು ತನ್ನ ತಲೆಯ ಮೇಲೆ ವಿವಿಧ ವಸ್ತುಗಳನ್ನು ಸಮತೋಲನಗೊಳಿಸಲು ಹೆಸರುವಾಸಿಯಾಗಿದ್ದಾಳೆ. ಹರಿಯಾಣದಲ್ಲಿ ‘ನಂಬರ್ ಒನ್’ ಎಂದು ಹೆಸರು ಕೂಡ ಗಿಟ್ಟಿಸಿಕೊಂಡಿದ್ದಾಳೆ. ಅಲ್ಲದೇ ಈಕೆಯ ಇನ್ ಸ್ಟಾಗ್ರಾಂ ಖಾತೆ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ತಲೆಯ ಮೇಲೆ ಅನೇಕ ವಸ್ತುಗಳನ್ನು ಅಂದರೆ ಸಿಲಿಂಡರ್ ಗಳು, ನೀರಿನ ಟ್ಯಾಂಕ್, ತಾಮ್ರದ ಮಡಿಕೆಗಳು ಮುಂತಾದವುಗಳನ್ನು ಸಮತೋಲನಗೊಳಿಸುವಂತಹ ವಿವಿಧ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ.

ಇದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ ಮತ್ತು ಇದಕ್ಕೆ 52,118 ಕ್ಕೂ ಹೆಚ್ಚು ಲೈಕ್ಸ್, 3.2 ಮಿಲಿಯನ್ ವೀವ್ಸ್ ಮತ್ತು ಅನೇಕ ಕಾಮೆಂಟ್ ಗಳು ಬಂದಿವೆ. ಅನೇಕರು ಈಕೆಯ ವಿಶಿಷ್ಟ ಸಾಮರ್ಥ್ಯವನ್ನು ಶ್ಲಾಘಿಸಿದರು. ಅದರಲ್ಲಿ ಒಬ್ಬ ಅದನ್ನು ಹೇಗೆ ಮಾಡುತ್ತೀರಿ ಎಂದು ಕುತೂಹಲದಿಂದ ಕೇಳಿದರೆ, ಇನ್ನೊಬ್ಬರು ಮಹಿಳೆ ಇಡೀ ಮನೆಯನ್ನು ತನ್ನ ತಲೆಯ ಮೇಲೆ ಎತ್ತಬಹುದು ಎಂಬುದಕ್ಕೆ ನೀವೇ ನಿರ್ದಶನ ಎಂಬಂತೆ ಬರೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version