ತುಮಕೂರು: ಅವನು ಒಂದು ಶಾಲೆಯ ಶಿಕ್ಷಕ, ಇವಳೂ ಅದೇ ಶಾಲೆಯಲ್ಲಿ ಸಹಶಿಕ್ಷಕಿ. ಮಕ್ಕಳಿಗೆ ಒಳಿತಿನ ಪಾಠ ಮಾಡಬೇಕಾದ ಇವರಿಬ್ಬರು ತಾವಿಬ್ಬರೇ ಕೋಣೆಯಲ್ಲಿ ಕುಳಿತು ಕಾಮದಾಟ ಆಡಲು ಶುರು (Teachers Love story) ಮಾಡಿದ್ದರು. ಆದರೆ, ಕದ್ದು ಮುಚ್ಚಿ ನಡೆಯೋ ಈ ವ್ಯವಹಾರಗಳೆಲ್ಲ (Love Case) ಎಷ್ಟು ದಿನಾಂತ ನಡೀತದೆ.. ಒಂದು ಒಳ್ಳೆಯ ದಿನ ಶಿಕ್ಷಕನ ಹೆಂಡತಿ ರೆಡ್ ಹ್ಯಾಂಡ್ ಆಗಿ, ಬೆತ್ತಲೆಯಾಗಿಯೇ ಇಬ್ಬರನ್ನು ಹಿಡಿದು ಬಿಟ್ಟಿದ್ದಾರೆ! (Illicit Relationship)
ಘಟನೆ ನಡೆದಿರುವುದು ತುಮಕೂರು ಜಿಲ್ಲೆ (Tumkur News) ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಗ್ರಾಮದಲ್ಲಿ. ಹೆಂಡ್ತಿ ಕೈಲಿ ಸಿಕ್ಕಾಕಿಕೊಂಡ ಶಿಕ್ಷಕನ ಹೆಸರು ರಂಗನಾಥ್, ಅವನ ಜತೆ ಲವ್ವಿ ಡವ್ವಿ ಆಟದಲ್ಲಿ ತೊಡಗಿದ್ದವಳು ಶಿಕ್ಷಕಿ ಲಾವಣ್ಯ.
ರಂಗನಾಥ ಅದ್ಯಾವಾಗ ಲಾವಣ್ಯಳ ಲಾವಣ್ಯಕ್ಕೆ ಮರುಳಾಗಿ ಕೈ ಹಿಡಿದನೋ ಗೊತ್ತಿಲ್ಲ. ಕೆಲವು ಸಮಯದಿಂದ ಅವರಿಬ್ಬರೂ ಕದ್ದು ಮುಚ್ಚಿ ಕುಚಿಕು ನಡೆಸುತ್ತಿದ್ದರು. ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಇವರು ಒಂದೇ ಮನೆಯಲ್ಲಿರುವಂತೆ ವರ್ತಿಸುತ್ತಿದ್ದರು!
ಅದೊಂದು ದಿನ ಹೆಂಡತಿ ಚಂದ್ರಮ್ಮ ಬಳಿ ಊರಿಗೆ ಹೋಗುತ್ತೇನೆ ಎಂದು ಹೇಳಿದ್ದ ರಂಗನಾಥ. ಚಂದ್ರಮ್ಮನೂ ಓಕೆ ಅಂದಿದ್ದಳು. ರಂಗನಾಥ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಸಂತೋಷಪಟ್ಟಿದ್ದ. ಹಾಗೆ ಊರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಮಾತ್ರ ಸಹಶಿಕ್ಷಕಿ ಲಾವಣ್ಯಳ ಮನೆಗೆ. ಆದರೆ, ಚಂದ್ರಮ್ಮನಿಗೆ ಮೊದಲೇ ಈ ವಾಸನೆ ಬಡಿದಿತ್ತು. ಅವರಿಬ್ಬರನ್ನು ಒಂದೇ ಕೋಣೆಯೊಳಗೆ ಹಿಡಿಯಬೇಕು ಎಂಬ ಕಾರಣಕ್ಕಾಗಿಯೇ ಆಕೆ ಓಕೆ ಅಂದಿದ್ದಳು. ಮಧ್ಯರಾತ್ರಿ ಆಗುತ್ತಿದ್ದಂತೆಯೇ ಚಂದ್ರಮ್ಮ ಲಾವಣ್ಯಳ ಮನೆಗೆ ಹೋಗಿ ಬಾಗಿಲು ಬಡಿದಿದ್ದಾಳೆ. ಬಾಗಿಲು ತೆರೆದದ್ದು ರಂಗನಾಥ.!
ಅವರಿಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದ ಚಂದ್ರಮ್ಮ ಗಂಡನಿಗೆ ಚೆನ್ನಾಗಿ ಬಾರಿಸಿದ್ದಾಳೆ. ಆದರೆ, ಲಾವಣ್ಯ ಆವತ್ತು ಹೊರಗೆ ಬಂದಿಲ್ಲ. ಆಕೆ ಒಬ್ಬಳೇ ಈ ಮನೆಗೆ ನುಗ್ಗಿದ್ದಲ್ಲ. ಘಟನೆಯ ವಿಡಿಯೋ ಚಿತ್ರೀಕರಣಕ್ಕೆ ಬೇರೆಯವರನ್ನು ಕರೆದುಕೊಂಡು ಕೂಡಾ ಹೋಗಿದ್ದಳು. ಮರುದಿನವೂ ಹೋಗಿ ಮನೆಯಲ್ಲಿ ಗಲಾಟೆ ಮಾಡಿದ್ದಾಳೆ.
ಗಂಡ ರಂಗನಾಥ ನೀನು ಅವಳನ್ನೇನೂ ಕೇಳಬೇಡ, ನಾನೇ ಉತ್ತರ ಕೊಡುತ್ತೇನೆ ಅನ್ನುತ್ತಿದ್ದಾನೆ. ನಾನೇ ಆಕೆಯ ಜತೆ ಸಂಬಂಧ ಮಾಡಿದ್ದು, ಸಂಬಂಧ ಇರುವುದು ನಿಜ ಎಂದು ಹೇಳಿದ್ದಾನೆ. ಏನು ಮಾಡ್ತಿಯೋ ಮಾಡು ಎಂದು ಸವಾಲು ಬೇರೆ ಹಾಕಿದ್ದಾನೆ. ರಂಗನಾಥ ಮತ್ತು ಲಾವಣ್ಯ ಗುಟ್ಟಾಗಿ ಸೇರುವುದು ಮಾತ್ರವಲ್ಲ ಮದುವೆಯೇ ಆಗಿದ್ದಾರೆ ಎಂಬ ಆರೋಪ ಮಾಡಿದ್ದಾಳೆ ಚಂದ್ರಮ್ಮ. ಅಕ್ರಮ ಸಂಬಂಧಕ್ಕೆ ಸಂಬಂಧಿಸಿ ಶಿಕ್ಷಕ ರಂಗನಾಥ್ ಮತ್ತು ಲಾವಣ್ಯ ಇರುದ್ಧ ವಿರುದ್ಧ ಪತ್ನಿ ಹುಳಿಯಾರು ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಶಿಕ್ಷಕಿ ಲಾವಣ್ಯಳನ್ನು ಬೇರಡೆಗೆ ವರ್ಗಾವಣೆ ಮಾಡುವಂತೆ ಇಲಾಖೆಗೂ ಒತ್ತಾಯಿಸಿದ್ದಾಳೆ.
ಇದನ್ನೂ ಓದಿ: Love Jihad: ಅಪ್ರಾಪ್ತೆ ಜತೆಗೆ ಲವ್; ಮುಸ್ಲಿಂ ಯುವಕನ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಹಿಂದೂ ಕಾರ್ಯಕರ್ತರು
ಎಂಥಾ ಕಾಲ ಬಂತು: ಎಚ್‌ಓಡಿಗೇ ಲೈಂಗಿಕ ಕಿರುಕುಳ ನೀಡ್ತಿದ್ದಾನಂತೆ ಈ ಜೂ. ಡಾಕ್ಟರ್!
ಬೆಂಗಳೂರು: ಸಾಮಾನ್ಯವಾಗಿ ಸೀನಿಯರ್ ಅಧಿಕಾರಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಹೆಣ್ಮಕ್ಕಳನ್ನು ಪುಸಲಾಯಿಸುವುದು, ಬಳಸಿಕೊಳ್ಳಲು ಯತ್ನಿಸುವುದು, ಲೈಂಗಿಕ ಕಿರುಕುಳ ನೀಡುವುದರ ಬಗ್ಗೆ ದೂರುಗಳು ದಾಖಲಾಗುತ್ತವೆ. ಆದರೆ, ಇನ್ನೊಬ್ಬ ಜೂನಿಯರ್ ಸಿಬ್ಬಂದಿ (Junior Doctor Harass Senior) ತನ್ನ ವಿಭಾಗದ ಮುಖ್ಯಸ್ಥರಾಗಿರುವ ಮಹಿಳೆಗೇ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನಂತೆ.
ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜು (Kempegowda Institute of Medical sciences-KIMS) ನಲ್ಲಿ ಇಂಥ ಘಟನೆಯೊಂದು ನಡೆದಿರುವ ಗಂಭೀರ ಆಪಾದನೆ ಕೇಳಿಬಂದಿದೆ. ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ಡಾಕ್ಟರ್‌ಗೆ (Woman Doctor) ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಾಗಿದೆ.
ನನ್ನ ಜೂನಿಯರ್ ಆಗಿರುವ ಡಾ. ರಾಜು ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿಕೊಂಡು ಬರುತ್ತಿದ್ದಾನೆ. ನನ್ನನ್ನು ಫಾಲೋ ಮಾಡ್ತಾನೆ, ಮೈಕೈ ಮುಟ್ಟಿ ಕಿರುಕುಳ ನೀಡುತ್ತಾನೆ ಎಂದು ಕಿಮ್ಸ್ ವೈದ್ಯೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಬ್ಬ ಜೂನಿಯರ್ ಡಾಕ್ಟರ್ ನಿಜಕ್ಕೂ ಹಿರಿಯ ಮಹಿಳಾ ವೈದ್ಯೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನುವುದು ಭಯಾನಕ ವಿಚಾರವಾಗಿದೆ. ಇಂಥ ಪವರ್ ಫುಲ್ ಹುದ್ದೆಗಳಲ್ಲಿ ಇರುವ ಮಹಿಳೆಯರೇ ಈ ರೀತಿ ಹಿಂಸೆಗೆ ಒಳಗಾದರೆ ಉಳಿದವರ ಪಾಡೇನು ಎಂಬ ಪ್ರಶ್ನೆ ಇದೆ. ಅದೇ ಹೊತ್ತಿಗೆ ಇದು ನಿಜವಾದ ಪ್ರಕರಣವೋ ಅಥವಾ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ನೀಡಿದ ದೂರಾಗಿರಬಹುದಾ ಎಂಬ ಸಂಶಯವೂ ಇದೆ. ಹೀಗಾಗಿ ಪೊಲೀಸರು ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.