ಬೆಂಗಳೂರು: ಚಿಕ್ಕಮಗಳೂರಿನಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಸಿದ್ದರಾಂಯ್ಯ ಬಗ್ಗೆ ಮಾತನಾಡಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಸಿ.ಟಿ. ರವಿ. ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ರಾಜೇಂದ್ರ, ಸಿ.ಟಿ ರವಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ನಾಲ್ಕು ಬಾರಿ ಶಾಸಕರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಗೌರವಯುತವಾಗಿ ಮಾತನಾಡಬೇಕು ಎಂದರು.
ಸಿ.ಟಿ ರವಿ ಹಿಟ್ ರನ್ ಕೇಸ್ ಗಿರಾಕಿ ಅಂತಾರೆ. ಲೂಟಿ ರವಿ ಅಂತಾ ಅವರ ಕ್ಷೇತ್ರದ ಜನರು ಹೇಳುತ್ತಾರೆ. ಬಿಜೆಪಿ ನಾಯಕರು ಹತಾಶರಾಗಿ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಐದು ವರ್ಷ ಉತ್ತಮ ಆಡಳಿತ ನೀಡಿದ ನಾಯಕ. ಮುಸಲ್ಮಾನರು ಬೇರೆ ದೇಶದಿಂದ ಬಂದಿದ್ದಾರ? ನಮ್ಮ ರಾಜ್ಯ, ದೇಶದ ಪ್ರಜೆಗಳೇ ಅಲ್ವ? ಕೋಮು ಸೌಹಾರ್ದ ಹಾಳುಗೆಡವಲು ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿಜೆಪಿ ನಡೆ ನುಡಿಯಲ್ಲಿ ವ್ಯತಾಸಗಳಿದೆ ಎಂದ ರಾಜೇಂದ್ರ, ಹಿಂದಿನ ಆರ್‌ಎಸ್‌ಎಸ್ ಈಗಿಲ್ಲ. ಆರ್‌ಎಸ್‌ಎಸ್ ಹೆಸರಿನಲ್ಲಿ ಶೋಕಿ ಮಾಡುತ್ತಿದ್ದಾರೆ. ಐಷಾರಾಮಿ ಕಾರ್‌ನಲ್ಲಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್. ಸಿದ್ದರಾಮಯ್ಯ ವಿರುದ್ಧ ಬೇಕಾಬಿಟ್ಟಿ ಮಾತನಾಡಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ | Janasankalpa Yatre | ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಿ.ಟಿ. ರವಿ: ಕೊಪ್ಪದಲ್ಲಿ ಉಗ್ರ ಭಾಷಣ