Site icon Vistara News

Operation Hasta : JDS ಬಿಗ್‌ ಶಾಕ್‌; ತುಮಕೂರಿನ ಪ್ರಭಾವಿ ಮುಖಂಡ ನಾಳೆ ಕಾಂಗ್ರೆಸ್‌ ಸೇರ್ಪಡೆ

DC Gowrishankar Tumkur JDS leader

ತುಮಕೂರು: ಬಿಜೆಪಿ-ಜೆಡಿಎಸ್‌ ಮೈತ್ರಿಯಾದ (BJP-JDS Coalition) ಬಳಿಕ ಜೆಡಿಎಸ್‌ ನಾಯಕರು ಪಕ್ಷ ಬಿಡುತ್ತಿರುವ ವೇಗ ಹೆಚ್ಚಾಗಿದೆ. ಇದೀಗ ಲೋಕಸಭಾ ಚುನಾವಣೆಯ (Parliament Election 2024) ಸಿದ್ಧತೆ ಹೊತ್ತಲ್ಲಿ ತುಮಕೂರಿನಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌ ಎದುರಾಗಿದೆ. ತುಮಕೂರು ಜಿಲ್ಲೆಯ ಜೆಡಿಎಸ್‌ನ ಪ್ರಭಾವಿ ನಾಯಕ, ತುಮಕೂರು ಗ್ರಾಮಾಂತರದ (Tumkur Rural Ex MLA) ಮಾಜಿ ಶಾಸಕ ಡಿ.ಸಿ ಗೌರಿಶಂಕರ್‌ (Former MLA DC Gowrishankar) ಅವರು ತೆನೆ ಇಳಿಸಿ ಕೈ ಹಿಡಿಯಲು (JDS Leader to Join Congress) ಮುಂದಾಗಿದ್ದಾರೆ (Opearation Hasta).

ಬುಧವಾರ (ನವೆಂಬರ್‌ 15) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿ.ಸಿ ಗೌರಿಶಂಕರ್‌ ಅವರು ಕಾಂಗ್ರೆಸ್‌ ಪಕ್ಷ ಸೇರುವ ಮುಹೂರ್ತ ಫಿಕ್ಸ್‌ ಆಗಿದೆ. ಸುಮಾರು ಎರಡು ಸಾವಿರ ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.

ಡಿ.ಸಿ. ಗೌರಿಶಂಕರ್‌ ಅವರು ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆ ದೀರ್ಘ ಕಾಲದಿಂದ ಚರ್ಚೆ ನಡೆಯುತ್ತಿತ್ತು. ಆದರೆ, ಜೆಡಿಎಸ್‌ ನಾಯಕರು ಕೂಡಾ ಅವರನ್ನು ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದೀಗ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೂ ಮಣಿಯದೆ ಗೌರಿಶಂಕರ್‌ ಅವರು ಕಾಂಗ್ರೆಸ್‌ ಕಡೆಗೆ ಹೊರಟಿದ್ದಾರೆ.

ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಅಸಮಾಧಾನ

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಗೌರಿ‌ಶಂಕರ್ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಎರಡು‌- ಮೂರು ದಿನಗಳ ಹಿಂದೆ ಜೆ‌ಡಿಎಸ್‌ ನಡೆಸಿದ ಬರ ಅಧ್ಯಯನ ತಂಡದಿಂದ ಗೌರಿಶಂಕರ್‌ ಅವರು ಅಂತರ ಕಾಯ್ದು ಕೊಂಡಿದ್ದರು.

ಡಿ.ಕೆ. ಶಿವಕುಮಾರ್‌- ಡಾ. ರಂಗನಾಥ್‌ ಜಂಟಿ ಕಾರ್ಯಾಚರಣೆ

ಡಿ.ಸಿ. ಗೌರಿಶಂಕರ್‌ ಅವರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಇವರಿಗೆ ಗೃಹ ಸಚಿವ ಪರಮೇಶ್ವರ್‌ ಅವರ ಬೆಂಬಲವೂ ಇತ್ತು. ಆದರೆ, ಸಹಕಾರ ಸಚಿವರಾಗಿರುವ ಕೆ.ಎನ್‌. ರಾಜಣ್ಣ ಅವರು ಡಿ.ಸಿ. ಗೌರಿಶಂಕರ್‌ ಅವರ ಪಕ್ಷ ಸೇರ್ಪಡೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದರು.

ಇದನ್ನೂ ಓದಿ : Operation Hasta : ದೀಪಾವಳಿ ಬಳಿಕ ಮತ್ತೆ ಆಪರೇಷನ್‌‌ ಹಸ್ತ; ಡಿಕೆಶಿ ಸಂಪರ್ಕದಲ್ಲಿ BJP, JDS ನಾಯಕರು

ಜೆಡಿಎಸ್‌ನ ಪ್ರಭಾವಿ ನಾಯಕ ಡಿ.ಸಿ. ಗೌರಿಶಂಕರ್‌

ಡಿ.ಸಿ. ಗೌರಿಶಂಕರ್‌ ಅವರು‌ ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದಾರೆ. 2008ರಲ್ಲಿ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಅವರು 2013ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಶಿಫ್ಟ್‌ ಆಗಿದ್ದರು. ಅಂದು ಬಿಜೆಪಿ ಅಭ್ಯರ್ಥಿ ಸುರೇಶ್‌ ಗೌಡ ವಿರುದ್ಧ 1500 ಮತಗಳಿಂದ ಸೋತಿದ್ದ ಅವರು 2018ರಲ್ಲಿ ಈ ಸೋಲಿಗೆ ಸೇಡು ತೀರಿಸಿಕೊಂಡು 5640 ಮತಗಳಿಂದ ಗೆದ್ದಿದ್ದರು. 2023ರ ಹೊತ್ತಿಗೆ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಲಾಗಿತ್ತು. ಅವರು 2018ರ ಚುನಾವಣೆ ಪ್ರಚಾರದಲ್ಲಿ ಅಕ್ರಮವೆಸಗಿದ್ದರು ಎಂಬ ಆರೋಪಕ್ಕಾಗಿ ಈ ಶಿಕ್ಷೆಯನ್ನು ಕೋರ್ಟ್‌ ವಿಧಿಸಿತ್ತು. ಆದರೆ, ಚುನಾವಣೆ ಸ್ಪರ್ಧೆಯಿಂದ ನಿಷೇಧಿಸಿರಲಿಲ್ಲ. ಹೀಗಾಗಿ ಅವರು ಮತ್ತೆ ಕಣಕ್ಕೆ ಇಳಿದಿದ್ದರು. ಆದರೆ, ಬಾರಿ ಬಿಜೆಪಿಯ ಸುರೇಶ್‌ ಗೌಡ ಎದುರು ಸೋಲು ಕಂಡರು.

2022ರಲ್ಲಿ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯೂ ಹರಡಿತ್ತು. ಆದರೆ, ಅವರು ತಂದೆ, ತಾಯಿ ಮಕ್ಕಳ ಆಣೆಯಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು.

Exit mobile version