ತುಮಕೂರು: ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ನನ್ನನ್ನು ಪಲ್ಟಿ ಹೊಡೆಸದೇ ಇದ್ದಿದ್ದರೆ ಈ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ನೋವು ತೋಡಿಕೊಂಡಿದ್ದಾರೆ.
ಕೊರಟಗೆರೆಯ ತೋವಿನಕೆರೆಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಈ ಕ್ಷೇತ್ರದ ಜನತೆ ನನ್ನನ್ನ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈಂ ನಲ್ಲಿ ಪಲ್ಟಿ ಹೊಡೆಸಿದ್ದಾರೆ. 2013ರಲ್ಲಿ ಒಂದೇ ಒಂದು ಓಟ್‌ನಲ್ಲಿ ಗೆದ್ದಿದ್ದರೆ ಈ ರಾಜ್ಯದ ಮುಖ್ಯಮಂತ್ರಿ ಆಗೋ ಅವಕಾಶ ಇತ್ತು. ನನ್ನದು ಹಣೆಬರಹ ಇರಬೇಕಲ್ಲಾ? ಕೇವಲ ನಿಮ್ಮನ್ನೇ ದೂರಿದರೆ ಹೇಗೆ?
ಹಣೆ ಬರಹ ಬಹುಷಃ ನನಗಿರಲಿಲ್ಲ ಅಂತಾ ಕಾಣಿಸುತ್ತದೆ. ಹಾಗಾಗಿ ಇವತ್ತು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಮುಂದಿನ ಸಿಎಂ ಪರಮೇಶ್ವರ್ ಘೋಷಣೆ, ಬೆಂಬಲಿಗನಿಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ ಪರಮ್