ತುಮಕೂರು: ಪತ್ನಿಯ ಮೇಲೆ ಹಲ್ಲೆ ಮಾಡಿದನೆಂದು ವಿಚಾರಣೆಗಾಗಿ ಠಾಣೆಗೆ ಕರೆಸಲಾದ ವ್ಯಕ್ತಿಯ ಮೇಲೆ ಪೊಲೀಸ್ ಮುಖ್ಯ ಪೇದೆ ಮನಬಂದಂತೆ ಅಶ್ಲೀಲ ಪದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.
ಕೌಟುಂಬಿಕ ವಿಚಾರ ಸಂಬಂಧ ವ್ಯಕ್ತಿಯನ್ನು ಠಾಣೆಗೆ ಕರೆಸಲಾಗಿತ್ತು. ಹೊರಪುರ ಗೊಲ್ಲರಹಟ್ಟಿಯ ರವಿ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಈ ಕುರಿತು ಪತ್ನಿ ರತ್ನ ತನ್ನ ಗಂಡ ರವಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆಗಾಗಿ ರವಿಯನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು, ಈ ವೇಳೆ ʼಗೌರವ ನೀಡುವಂತೆʼ ರವಿ ಹೇಳಿದ್ದರಿಂದ ಕೆರಳಿದ ಠಾಣೆಯ ಮುಖ್ಯಪೇದೆ ಕೇಶವನಾಯ್ಕ್, ಹಲ್ಲೆ ನಡೆಸಿದ್ದಾರೆ. ಮಾತನಾಡಿದರೆ ಚಿತ್ರಹಿಂಸೆ ಕೊಡ್ತೀನಿ, ಇಲ್ಲಾಂದ್ರೆ ಸುಮ್ಮನೆ ಕೂರಿಸಿ ಕಳಿಸುತ್ತೇನೆ ಎನ್ನುತ್ತಾ ಕಪಾಳಮೋಕ್ಷ ಮಾಡಿದ್ದಾರೆ. ಬಾಯಿಗೆ ಬೂಟು ಇಡುತ್ತೇನೆ ಎಂದು ಅಶ್ಲೀಲ ಪದ ಬಳಸುತ್ತಾ ನಿಂದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ | Custodial death | ಬೆಳಗಾವಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಸಾವು