Site icon Vistara News

Road Accident : ಆಟೋ, ಮಾರುತಿ ಕಾರು ಮಧ್ಯೆ ಅಪಘಾತ ; ವ್ಯಾಪಾರಕ್ಕೆ ತೆರಳುತ್ತಿದ್ದ ದಂಪತಿ ದಾರುಣ ಸಾವು

Road accident near Gubbi

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಸಮೀಪದ ಹರಿವೇಸಂದ್ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ದಂಪತಿ ದಾರುಣವಾಗಿ ಮೃತಪಟ್ಟಿದ್ದಾರೆ (Couple death). ಗೂಡ್ಸ್‌ ಆಟೋ (Goods Auto) ಮತ್ತು ಮಾರುತಿ ಕಾರಿನ (Maruti car) ನಡುವೆ ಈ ಅಪಘಾತ ಸಂಭವಿಸಿದ್ದು, ಆಟೋದಲ್ಲಿದ್ದ ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ. ಕಲ್ಲೂರು ನಾಗರಾಜ್ (60) ಮತ್ತು ಅವರ ಪತ್ನಿ ಮೃತರು.

ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಗೂಡ್ಸ್‌ ಆಟೋ

ಕೆಜಿ ಟೆಂಪಲ್‌ನ ವಾರದ ಸಂತೆಗೆ ಸರಕುಗಳನ್ನು ಹೊತ್ತು ಗೂಡ್ಸ್‌ ಟೆಂಪೊದಲ್ಲಿ ಕಲ್ಲೂರು ನಾಗರಾಜ್‌ ದಂಪತಿ ಸಾಗುತ್ತಿದ್ದರು. ಈ ವೇಳೆ ಹರಿವೇಸಂದ್ರದಲ್ಲಿ ಆಟೊ ಮತ್ತು ಮಾರುತಿ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಅವರಿಬ್ಬರೂ ರಸ್ತೆಗೆ ಉರುಳಿಬಿದ್ದರು. ನಾಗರಾಜ್‌ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಗಾಯಾಳು ಪತ್ನಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

accident near gubbi kills two

ನಾಗರಾಜ್‌ ಮತ್ತು ದಂಪತಿ ಸಂತೆಯಲ್ಲಿ ವ್ಯಾಪಾರ ಮಾಡುವ ವೃತ್ತಿ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿ ಸಾಮಗ್ರಿಗಳು, ನೀರು ಮತ್ತಿತರ ವಸ್ತುಗಳನ್ನು ಅವರು ಗೂಡ್ಸ್‌ ಟೆಂಪೊದ ಹಿಂಬದಿಯಲ್ಲಿ ಇಟ್ಟು ಇವರಿಬ್ಬರೂ ಎದುರಿನಲ್ಲಿ ಕುಳಿತು ಸಾಗುತ್ತಿದ್ದರು. ಅಪಘಾತದ ರಭಸಕ್ಕೆ ಇವರಿಬ್ಬರೂ ಆಟೋದಿಂದ ಕೆಳಗೆ ಬಿದ್ದಿದ್ದಾರೆ. ಈ ಮಧ್ಯೆ ಆಟೋ ರಿಕ್ಷಾ ನಿಯಂತ್ರಣ ಕಳೆದುಕೊಂಡು ಸಮೀಪದ ಗದ್ದೆಗೆ ಉರುಳಿದೆ.

ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.

ಇದನ್ನೂ ಓದಿ : Road Accident: ಟಯರ್‌ ಸ್ಫೋಟಗೊಂಡು ಕಾರು ಪಲ್ಟಿ, ಕಾನ್‌ಸ್ಟೇಬಲ್‌ ಸಾವು; ಮರಕ್ಕೆ ಡಿಕ್ಕಿಯಾಗಿ ಬೈಕ್‌ ಸವಾರ ಸಾವು

ಯಮ ಸ್ವರೂಪಿಯಾಗಿ ಬಂದ ಕಾರು; ಇಬ್ಬರು ಪಾದಚಾರಿಗಳು ಸಾವು

ಹಾವೇರಿ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾ. ನೀರಲಗಿ ಬಳಿ ಘಟನೆ ನಡೆದಿದೆ. ಪಾದಚಾರಿಗಳು ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದೂರಕ್ಕೆ ಹಾರಿ ಬಿದ್ದ ಪಾದಚಾರಿಗಳು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಚಿದಾನಂದ ಶೆರೆವಾಡ ಮತ್ತು ವಿರೋಪಾಕ್ಷಪ್ಪ ಕಲೆ ಮೃತ ದುರ್ದೈವಿಗಳು. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ದುರ್ದೈವಿಗಳು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಪಾದಚಾರಿಗಳ ಮೇಲೆ ಹರಿದ ಕಾರು ಹರಿಸಿದ ಚಾಲಕನ ಬಂಧನವಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version