Site icon Vistara News

Road Accident : ಡಿಕ್ಕಿ ಹೊಡೆದು ಪರಾರಿಯಾದ ವಾಹನ; ಬೈಕ್‌ ಸವಾರರು ಸ್ಥಳದಲ್ಲೇ ಸಾವು

Accident near Tumkur

accident

ತುಮಕೂರು : ಅಪರಿಚಿತ ವಾಹನ ಡಿಕ್ಕಿಯಾಗಿ (Road Accident) ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ (Two bike riders dead) ದಾರುಣ ಘಟನೆ ತುಮಕೂರು ಜಿಲ್ಲೆ (Tumkur News), ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯ ಕೃಷ್ಣಪ್ಪನ ಕೊಪ್ಪಲು ಬಳಿ ನಡೆದಿದೆ.

ಚನ್ನಪಟ್ಟಣ ಮೂಲದ ಅಮಾನುಲ್ಲಾ ಖಾನ್(60) ಮುನಾವರ್(50) ಮೃತ ದುರ್ದೈವಿಗಳು. ಅವರು ಮುಂಜಾನೆ ಹೊತ್ತು ಚನ್ನಪಟ್ಟಣದಿಂದ ಬರುತ್ತಿದ್ದಾಗ ಕೃಷ್ಣಪ್ಪನ ಕೊಪ್ಪಲು ಬಳಿ ಅವರ ಬೈಕ್‌ಗೆ ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆದಿದೆ.

ಡಿಕ್ಕಿ ಏಟಿಗೆ ಬೈಕ್‌ ಸಹಿತ ಇಬ್ಬರು ರಸ್ತೆಗೆ ಉರುಳಿಬಿದ್ದಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಮಾಡಿದ ವಾಹನ ನಿಲ್ಲಿಸದೆ ಪರಾತಿಯಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾದ ವಾಹನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಚಿಕ್ಕಬಳ್ಳಾಪುರ, ಕೋಲಾರ: ಬೆಳಗ್ಗೆ ಬೆಳಗ್ಗೆ ಕಾಂಗ್ರೆಸ್‌ ಶಾಸಕನಿಗೆ ಐಟಿ ಶಾಕ್‌

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಬೆಳ್ಳಂಬೆಳ್ಳಗ್ಗೆ ಭ್ರಷ್ಟರಿಗೆ ಜಾರಿ ನಿರ್ದೇಶನಾಲಯ (Enforcement directorate ED) ದೊಡ್ಡ ಮಟ್ಟದ ದಾಳಿ ನಡೆಸಿದೆ.

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ ಎಂ.ಸಿ ಸುಧಾಕರ್ ಕಟ್ಟಾ ಬೆಂಬಲಿಗನ ಮೇಲೆ ಇಡಿ ದಾಳಿ ನಡೆಸಿದೆ. ಕೋಚಿಮುಲ್ ನಿರ್ದೇಶಕ ಅಶ್ವತ್ ನಾರಾಯಣ (ಊಲವಾಡಿ ಬಾಬು) ನಿವಾಸದ ಮೇಲೆ ದಾಳಿ ನಡೆದಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆಧಾರದ ಹಿನ್ನೆಲೆಯಲ್ಲಿ ಇ.ಡಿ‌ ದಾಳಿ ನಡೆಸಿದೆ ಎಂದು ಹೇಳಲಾಗಿದ್ದು, ಊಲವಾಡಿ ಬಾಬು ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಚಿಂತಾಮಣಿ ನಗರದ ಪ್ರಭಾಕರ್ ಲೇಔಟ್ ನಲ್ಲಿರುವ ಊಲವಾಡಿ ಬಾಬು ನಿವಾಸಕ್ಕೆ ಬೆಳಗ್ಗೆ ಹಲವಾರು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಕೋಚುಮುಲ್‌ ಅಧ್ಯಕ್ಷ, ಶಾಸಕರ ಮನೆಗೆ ಲಗ್ಗೆ

ಕೋಲಾರದಲ್ಲಿ ಕೋಚುಮುಲ್ ಅಧ್ಯಕ್ಷ ಹಾಗೂ ಶಾಸಕ ಮತ್ತು ಆಪ್ತರ ಮನೆ ಮೇಲೆ ಇ.ಡಿ ದಾಳಿ ನಡೆದಿದೆ. ಕೋಚುಮುಲ್ ಡೈರಿ ಅಧ್ಯಕ್ಷ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರ ಕಚೇರಿ ಮತ್ತು ಮನೆ ಮೇಲೆ ಇಡಿ ದಾಳಿ ನಡೆಸಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಕೋಮ್ಮನಹಳ್ಳಿ ಗ್ರಾಮದಲ್ಲಿ ನ ಶಾಸಕರ ನಿವಾಸಕ್ಕೆ ಬೆಳಗ್ಗೆ 6 ಗಂಟೆಗೆ ಇ.ಡಿ ತಂಡ ಲಗ್ಗೆ ಇಟ್ಟಿದೆ. ಮನೆಯಲ್ಲಿರುವ ಮಹತ್ವ ದಾಖಲೆ ಪರಿಶೀಲನೆ ನಡೆಸುತ್ತಿದೆ.

ಮನೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ, ಯಾರಿಗೂ ಒಳಗೆ ಹೋಗಲು, ಯಾರಿಗೂ ಒಳಗೆ ಬರಲು ಅವಕಾಶ ನೀಡಲಾಗುತ್ತಿಲ್ಲ.

ಈ ನಡುವೆ, ಶಾಸಕ ನಂಜೇಗೌಡ ಮನೆ ಮಾತ್ರವಲ್ಲದೆ, ಅವರ ಆಪ್ತ ಅಬ್ಬೇನಹಳ್ಳಿ ಗೋಪಾಲ್‌ ನಿವಾಸ, ಶಾಸಕರ ಪಿಎ ಹರೀಶ್ ದೊಡ್ಡ ಮಲ್ಲೆ ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ. ಶಾಸಕರ ಮಗನ ಹೆಸರಿನಲ್ಲಿ ಇರುವ ನಂಜುಂಡೇಶ್ವರ ಸ್ಟೋನ್ ಜಲ್ಲಿ ಕ್ರಷರ್ ಮೇಲೆ ದಾಳಿ ಮಾಡಲಾಗಿದೆ.

Exit mobile version