Site icon Vistara News

Snake in bed : ಬೆಡ್‌ ಶೀಟ್‌ ಒಳಗೆ ನಾಗಪ್ಪ ಬುಸ್‌; ಮನೆಯವರು ಜಸ್ಟ್‌ ಮಿಸ್‌! video ಇದೆ!

Snake in Bed Sheet

ತುಮಕೂರು: ಆ ಮನೆಯಲ್ಲಿರುವ ಮಂಚದ ಮೇಲೆ ಒಂದು ಬೆಡ್‌ ಶೀಟ್‌ ಇತ್ತು. ಅದನ್ನು ಮೇಲೆತ್ತಿ ಮಡಚಿ ಇಡೋಣ ಎಂದು ಮೆಲ್ಲನೆ ಎತ್ತಿದರೆ ಎದೆ ಧಸಕ್ಕೆಂದಿತ್ತು. ಯಾಕೆಂದರೆ, ಬೆಡ್‌ ಶೀಟ್‌ ಒಳಗೆ ಇದ್ದಿದ್ದು ಬುಸ್‌ ಬುಸ್‌ ನಾಗಪ್ಪ! (Cobra inside Bed sheet) ಈ ಘಟನೆ ನಡೆದಿರುವುದು ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದಲ್ಲಿ (Tumkur News). ಇಲ್ಲಿನ ಮುನಿಯಪ್ಪ ಅವರ ಮನೆಯ ಮಂಚದ ಮೇಲೆ ಹಾವು‌ ಇತ್ತು (Snake in Bed). ಮೆಲ್ಲಗೆ ಬೆಡ್‌ ಶೀಟ್‌ ಎತ್ತಿದ್ದರಿಂದ ಹಾವುದು ಇರುವುದು ಗೊತ್ತಾಯಿತು. ಒಂದು ವೇಳೆ ಜೋರಾಗಿ ಎತ್ತಿ ಕೊಡವಿಬಿಟ್ಟಿದ್ದರೆ ಏನಾಗುತ್ತಿತ್ತೋ ಎಂದು ಭಯದಲ್ಲೇ ಆ ಮನೆ ನಡುಗಿಹೋಗಿತ್ತು. ಅಬ್ಬಾ ಅಪಾಯ ಜಸ್ಟ್‌ ಮಿಸ್‌ (Danger Just miss) ಆಯಿತು ಅಂತ ನೂರು ದೇವರನ್ನು ನೆನಪಿಸಿಕೊಂಡ ಅವರು ಕೂಡಲೇ ಉರಗ ತಜ್ಞ ದಿಲೀಪ್‌ಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ವಾರಂಗಲ್ ಫೌಂಡೇಷನ್ ವನ್ಯ ಜೀವಿ ಹಾಗೂ ಉರಗ ತಜ್ಞ ದಿಲೀಪ್ ಮತ್ತು ಕಿರಣ್ ಅವರು ಮೆಲ್ಲನೆ ಬೆಡ್‌ಶೀಟ್‌ ಮೇಲೆತ್ತಿದರು. ಅದುವರೆಗೆ ಏನೂ ಆಗಿಲ್ಲ ಎಂಬಂತೆ ಬೆಚ್ಚಗೆ ಮಲಗಿದ್ದ ಹಾವು ಇವರನ್ನು ನೋಡಿದ್ದೇ ತಡ ಬುಸುಗುಡಲು ಆರಂಭ ಮಾಡಿತು. ಹಿಡಿಯಲು ಹೋದಾಗ ಹೆದರಿಸಿ ಕಚ್ಚಲು ಬಂತು.

ಅಂತಿಮವಾಗಿ ಹೆಡೆ ಎತ್ತಿ ಬುಸುಗುಡುತ್ತಿದ್ದ ಸುಮಾರು ಐದು ಅಡಿ ಉದ್ದದ ನಾಗರ ಹಾವನ್ನು ಹೇಗೋ ರಕ್ಷಣೆ ಮಾಡಲಾಯಿತು. ಮನೆ ಮಂದಿ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಕೊನೆಗೆ ನಾಗರಹಾವನ್ನು ಸಮೀಪದ ಕಾಡಿಗೆ ಬಿಡಲಾಯಿತು.

ಹಾಸಿಗೆಯಲ್ಲಿ ಮಲಗಿದ್ದ ಹುಡುಗನ ಪಕ್ಕದಲ್ಲೇ ಹಾವು!

ಕೆಲವು ತಿಂಗಳ ಹಿಂದೆ ಮೈಸೂರಿನ (Mysore news) ಹೆಬ್ಬಾಳ ಎರಡನೇ ಹಂತದಲ್ಲಿರುವ ಚೆನ್ನಮ್ಮ ವೃತ್ತದ ಮನೆಯೊಂದರಲ್ಲಿ ಆ ಮನೆಯ ಹುಡುಗ ಪ್ರಜ್ವಲ್‌ನ ಪಕ್ಕದಲ್ಲೇ ಒಂದು ಹಾವು ಹೋಗಿ ಮಲಗಿತ್ತು.

ಹೊದಿಕೆಯೊಳಗೆ ಹಾವು ಮತ್ತು ಒಳಚಿತ್ರದಲ್ಲಿ ಪ್ರಜ್ವಲ್‌

ಅವನು ಬೆಳಗ್ಗೆನೆ ಯಾರೋ ಕಣ್ಣೆಳೆಯುತ್ತಿದೆ ಎಂದು ಮಂಚದಲ್ಲಿ ಬಿದ್ದುಕೊಂಡಿದ್ದ. ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಯಾವುದೋ ಗೊರಕೆ ಸದ್ದು ಕೇಳಿದ ಹಾಗಾಯಿತು. ಎಚ್ಚರವಾಗಿ ಯಾರಪ್ಪಾ ಇದು ಗೊರಕೆ ಹೊಡೆಯೋರು ಎಂದು ನೋಡಿದರೆ ಪಕ್ಕದಲ್ಲೇ ಹಾವು ಬುಸುಗುಡುತ್ತಿತ್ತು. ಇಷ್ಟು ಹೊತ್ತು ನಾನು ಹಾವಿನ ಜತೆಗಾ ಎಂದು ಯೋಚಿಸುತ್ತಲೇ ಅವನ ಎದೆ ಧಸಕ್ಕೆಂದಿತು. ಕೂಡಲೇ ಹೊರಗೋಡಿ ಬಂದು ಎಲ್ಲರಿಗೂ ಹೇಳಿದ. ಕೊನೆಗೆ ಸ್ನೇಕ್‌ ಶ್ಯಾಂ ಅವರು ಬಂದು ಹಾವನ್ನು ಹಿಡಿದುಕೊಂಡು ಹೋಗಿದ್ದರು.

ಇದನ್ನೂ ಓದಿ : Viral Video: ಶೂ ಒಳಗೆ ಕಾಲಿಡುವ ಮುನ್ನ ಎಚ್ಚರ; ನಾಗರಹಾವು ಕುಳಿತಿರುತ್ತದೆ! ಇಲ್ಲಿದೆ ವಿಡಿಯೊ

ಗದ್ದೆ ಪಕ್ಕದ ಹಾಸುಮಂಚದಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿದ ಹಾವು

ಕಲಬುರಗಿ: ಜಮೀನು ಕೆಲಸ ಮಾಡಿದ್ದ ಮಹಿಳೆಯೊಬ್ಬರು ಆಯಾಸವಾಗಿದ್ದರಿಂದ ಅಲ್ಲೇ ನಿರ್ಮಿಸಿಕೊಂಡಿದ್ದ ಬೆತ್ತದ ಮಂಚವೊಂದರ ಮೇಲೆ ಹಾಯಾಗಿ ಮಲಗಿದ್ದಾರೆ. ಆಕೆಗೆ ಒಳ್ಳೇ ನಿದ್ದೆ ಕೂಡ ಹತ್ತಿದೆ. ಇದೇ ಸಮಯದಲ್ಲಿ ಮೈಮೇಲೆ ಏನೋ ಹರಿದಾಡಿದಂತಾಗಿದೆ, ಬುಸ್‌ ಬುಸ್‌ ಎಂದಿದೆ. ಏಳಲು ಭಯವಾಗಿದೆ. ಇದೇ ವೇಳೆ ದೂರದಲ್ಲಿದ್ದವರು “ಏಳಬೇಡ.. ಏಳಬೇಡ…” ಎಂದು ಕೂಗಿಕೊಂಡಿದ್ದಾರೆ. ಕಾರಣ, ಮೈಮೇಲೆ ಹಾವು (Snake News) ಇತ್ತು.

ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಇಂತಹ ವಿಚಿತ್ರ ಸನ್ನಿವೇಶವೊಂದು ಘಟಿಸಿದೆ. ಭಾಗಮ್ಮ ಬಡದಾಳ್ ಎಂಬುವರ ಮೈಮೇಲೆ ಹಾವು ಕುಳಿತಿತ್ತು. ಮೈಮೇಲೆ ಹಾವು ಬಂದು ಹೆಡೆ ಎತ್ತಿ ನಿಂತಿರುವುದನ್ನು ತಿಳಿದು ಮಹಿಳೆ ಭಯಗೊಂಡಿದ್ದಾರೆ. ಆದರೆ, ಸುಮ್ಮನೆ ಇರದೆ ವಿಧಿ ಇರಲಿಲ್ಲ. ಎದೆಬಡಿತ ಹೆಚ್ಚಾಗಿದೆ, ಭಯದಲ್ಲಿ ಮೈ ಪೂರಾ ತಣ್ಣಗಾಗಿದೆ. ಕೈ-ಕಾಲು ಅಲ್ಲಾಡಿಸುವ ಹಾಗಿಲ್ಲ, ಎದ್ದು ಓಡುವಂತೆಯೂ ಇಲ್ಲ. ಸ್ವಲ್ಪ ಯಾಮಾರಿದರೂ ಹಾವು ಕಚ್ಚಿಬಿಡುತ್ತದೆ. ಹೀಗಾಗಿ ಮಹಿಳೆ ಸಮಯಪ್ರಜ್ಞೆಯಿಂದ ಸ್ವಲ್ಪವೂ ಕದಲಲಿಲ್ಲ. ಆದರೂ ದಿಕ್ಕು ತೋಚದೆ ಕೊನೆಗೆ ಕೈ ಮುಗಿದು ದೇವರ ಮೊರೆ ಇಟ್ಟಿದ್ದಾರೆ.

“ಕಾಪಾಡು ಶ್ರೀಶೈಲ ಮಲ್ಲಯ್ಯ” ಎಂದು ಮಲಗಿದಲ್ಲಿಂದಲೇ ದೇವರಿಗೆ ಭಾಗಮ್ಮ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಜೀವ ಕೈಯಲ್ಲಿ ಹಿಡಿದು ಕೆಲಕಾಲ ಮಲಗಿದಲ್ಲೇ ಉಸಿರು ಬಿಗಿಹಿಡಿದು ಕಾದಿದ್ದಾರೆ. ಸ್ವಲ್ಪ ಸಮಯದಲ್ಲಿ ಹಾವು ಅವರ ಮೈಮೇಲಿಂದ ಇಳಿದು ಹೋಗಿದೆ.

Exit mobile version