ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ (Spider detection) ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದ ಜೇಡ ಪತ್ತೆಯಾಗಿತ್ತು. ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಪತ್ತೆಯಾಗಿತ್ತು. ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ಪತ್ತೆ ಹಚ್ಚಿತ್ತು. ಸಂಶೋದಕರು ಜೇಡಕ್ಕೆ ಸ್ಥಳೀಯ ಹೆಸರನ್ನೇ ನಾಮಕರಣ ಮಾಡಿದ್ದರು. “ತೆಂಕಣ ಜಯಮಂಗಲಿ” ಜೇಡ ಎಂಬ ಹೆಸರಿಟ್ಟಿದ್ದರು.
ಪ್ರಭೇದವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದಾಗಿದೆ. ದೇವರಾಯನ ದುರ್ಗ ಕೇವಲ ಪುಣ್ಯ ಕ್ಷೇತ್ರವಷ್ಟೆ ಅಲ್ಲದೆ ಜೀವವೈವಿದ್ಯತೆಯ ತಾಣ ಎಂದು ಸಂಶೋಧಕ ಲೋಹಿತ್ ತಿಳಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಪ್ ಬ್ರಿಟೀಷ್ ಕೊಲಾಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆದಿದೆ.
ತುಮಕೂರಿನ ದೇವರಾಯನದುರ್ಗದ ಹೊಸ ಜೇಡ ಪ್ರಬೇಧವನ್ನು ಜಯಮಂಗಲಿ ನದಿಯ ಹೆಸರಿನಲ್ಲಿ ಪರಿಚಯಿಸಲಾಗುತ್ತಿದೆ. ಚಿನ್ಮಯ್ ಸಿ ಮಳಿಯೆ, ಲೋಹಿತ್ ವೈ ಟಿ ಮತ್ತು ವೈಲ್ಡ್ ಲೈಫ್ ಅವವೇರ್ನೆಸ್ ನೇಚರ್ ಕ್ಲಬ್ಬಿನ ನಿಶಾ ಬಿ ಜಿ ಕಾಡಿನ ಹುಡುಕಾಟಗಳಲ್ಲಿ ಈ ಜೇಡವು ಸಿಕ್ಕಿದ್ದು ಮತ್ತು ಮೊದಲು ಕಂಡಿದ್ದು ದೇವರಾಯನದುರ್ಗದ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ, ಏಪ್ರಿಲ್ 2023 ರಲ್ಲಿ.
ಒಂದೂವರೆ ವರ್ಷಗಳ ಹಿಂದೆ ಶುರುವಾದ ಈ ಸಂಶೋಧನೆ, ಜೀನಸ್ ಕೂಡ ಹೊಸದಾದ ಕಾರಣ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಟೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆ ಮ್ಯಾಡಿಸನ್ ಕೈ ಜೋಡಿಸಿದರು. ಎನ್ ಸಿ ಬಿ ಎಸ್ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ಗಳೊಂದಿಗಿನ ಸಹಯೋಗದಲ್ಲಿ ಮೂಡಿಬಂತು.
ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲ ಜಾಗದಿಂದ ಜೇಡದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಂತರಾಷ್ಟ್ರೀಯ ನಿಯತಕಾಲಿಕೆ Zookeys ಈ ಸಂಶೋಧನ ಬರಹವನ್ನು 11 ಅಕ್ಟೋಬರ್ 2024 ರಂದು ಪ್ರಕಟಿಸಿದೆ.
ಪ್ರಬೇಧವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು, ಅದನ್ನು ತೆಂಕಣ ಎಂದು ಹೆಸರಿಸಿದ್ದೇವೆ. ಎಷ್ಟೋ ಕೀಟ ಜೇಡಗಳಂತ ಜೀವಿಗಳ ಹೆಸರು ಆಂಗ್ಲ/ ಲ್ಯಾಟಿನ್ ಮಯವಾಗಿದ್ದು ಹೇಳಲು ನೆನಪಿಡಲು ಕಷ್ಟ, ಆ ಕಾರಣ ಇದು ತೆಂಕಣ ಜಯಮಂಗಲಿ.
ದೇವರಾಯನದುರ್ಗ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿದೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಕಾಡಿನ ಕಣಜದಲ್ಲಿ ಇವೆ. ದೇವರಾಯನದುರ್ಗವನ್ನು ಕೇವಲ ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡಲು ಸಾಧ್ಯವಿಲ್ಲ, ಇದು ಜೀವವೈವಿಧ್ಯತೆಯ ತಾಣವೂ ಹೌದು.