Site icon Vistara News

Student death: ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು; ಶಿಕ್ಷಕರ ಸಸ್ಪೆಂಡ್

Student Death Deeksha

ಶಿರಾ (ತುಮಕೂರು) : ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ (Girl went to light the lamp in temple dead) ಸಂದರ್ಧದಲ್ಲಿ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. (Girl Burnt to death) ತುಮಕೂರು ಜಿಲ್ಲೆ (Tumkur News) ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ (First standard Student) ದೀಕ್ಷಾ ಮೃತಪಟ್ಟ ದುರ್ದೈವಿ ಬಾಲಕಿ (Student Death).

ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಆಕೆ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು. ‌ ಮಾರ್ಚ್‌ 13ರಂದು ಘಟನೆ ನಡೆದಿತ್ತು.

ಆ ಬಾಲಕಿಗೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದು ಗೊತ್ತಿತ್ತೇ ವಿನಃ ಬೆಂಕಿಯಿಂದ ಆಗಬಹುದಾದ ಅನಾಹುತಗಳ ಅರಿವು ಇರಲಿಲ್ಲ. ಆದರೆ, ದುರದೃಷ್ಟವಶಾತ್‌ ಅಲ್ಲಿ ದುರಂತ ಸಂಭವಿಸಿಯೇ ಬಿಟ್ಟಿತು.

ಗೆಳತಿಯರೊಂದಿಗೆ ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್‌ 19ರಂದು (ಮಂಗಳವಾರ) ಮೃತಪಟ್ಟಿದ್ದಾಳೆ.

ಇದನ್ನೂ ಓದಿ : Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

Student death : ಶಿಕ್ಷಕರ ಮೇಲೆ ಸಾರ್ವಜನಿಕರು, ಪೋಷಕರ ಆಕ್ರೋಶ

ಈ ಘಟನೆ ನಡೆಯುತ್ತಿದ್ದಂತೆಯೇ ಊರಿನವರು ಮತ್ತು ಪೋಷಕರ ಆಕ್ರೋಶ ಶಿಕ್ಷಕರ ಮೇಲೆ ತಿರುಗಿತ್ತು. ದೀಕ್ಷಾ ಮಧ್ಯಾಹ್ನ ಊಟದ ನಂತರ ಸಹಪಾಠಿಗಳನ್ನು ಕರೆದುಕೊಂಡು ಶಾಲೆಯಿಂದ ಸ್ವಲ್ಪ ದೂರದ ಕಾಟಮ್ಮ ದೇವಸ್ಥಾನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಮಕ್ಕಳು ಶಾಲೆಗೆ ಹೋದ ಮೇಲೆ ಶಾಲೆ ಬಿಡುವವರೆಗೆ ಶಿಕ್ಷಕರ ಜವಾಬ್ದಾರಿಯಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದರು.

ವಿಷಯ ತಿಳಿದ ನಂತರ ಬಿಇಒ ಕೃಷ್ಣಪ್ಪ ಅವರು ಶಾಲೆಗೆ ಭೇಟಿ ನೀಡಿ ಕೂಲಂಕಣ ಪರಿಶೀಲನೆ ನಡೆಸಿದ್ದರು. ನಾಲ್ಕು ಪುಟ್ಟ ಮಕ್ಕಳು ಮಧ್ಯಾಹ್ನದ ಹೊತ್ತು ಯಾರಿಗೂ ತಿಳಿಯದಂತೆ ಶಾಲೆಯಿಂದ ಹೊರಗೆ ಹೋಗಿರುವುದಕ್ಕೆ ಶಿಕ್ಷಕರ ಬೇಜವಾಬ್ದಾರಿಯೇ ಕಾರಣವೆಂದು ‌ ಅಭಿಪ್ರಾಯಪಟ್ಟರು.

ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವರೆಗೆ ಸುಮಾರು 75 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಂದರೆ ಒಂದು ಕ್ಲಾಸಿನಲ್ಲಿ ಸರಾಸರಿ 11 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇವರಿಗೆ ಪಾಠ ಮಾಡಲು ನಾಲ್ಕು ಜನ ಶಿಕ್ಷಕರಿದ್ದಾರೆ. ಅವರಲ್ಲಿ ಇಬ್ಬರು ಸರ್ಕಾರಿ ಸೇವೆ, ಇಬ್ಬರು ಗುತ್ತಿಗೆ ಆಧಾರದ ಶಿಕ್ಷಕರು. ‌ ಇಷ್ಟೆಲ್ಲ ಜನ ಇದ್ದರೂ ಮಕ್ಕಳ ಮೇಲೆ ನಿಗಾ ಇಡದೆ ಇರುವುದು ತಪ್ಪು ಎಂಬ ನೆಲೆಯಲ್ಲಿ ಎಲ್ಲ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Exit mobile version