ತುಮಕೂರು : ಕಾಂಗ್ರೆಸ್‌ನ NSUI ಕಾರ್ಯಕರ್ತರು ಸಚಿವ ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ನಾಗೇಶ್ ಮನೆಗೆ NSUI ರಾಜ್ಯಾಧ್ಯಕ್ಷ ಕೀರ್ತೀ ಗಣೇಶ್ ನೇತೃತ್ವದಲ್ಲಿ ಬುಧವಾರ ಹಲವರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಈಗಾಗಲೇ 15 ಜನರು ಹಾಗೂ ಎರಡು ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ: ಆರಗ ಜ್ಞಾನೇಂದ್ರ
ಘಟನೆಯ ಬೆನ್ನಲ್ಲೆ ಗೃಹ ಸಚಿವ ಆರಗ ಜ್ಞಾನೇಂದ್ರ ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ರೀತಿಯಾದ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲು ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಾಸನದಿಂದ ಒಬ್ಬರು, ತುಮಕೂರಿನಿಂದ ಒಬ್ಬರು NSUI ಮುಖಂಡರು ಬಂದಿದ್ದಾರೆ. ಪ್ರೀಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಇವರೆಲ್ಲಾ ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಈಶ್ವರಪ್ಪ ರಾಜೀನಾಮೆ ಬಿಜೆಪಿ ನಿರ್ಧಾರವಲ್ಲ; ಅವರ ವೈಯಕ್ತಿಕ ನಿರ್ಧಾರ: ಆರಗ ಜ್ಞಾನೇಂದ್ರ