Site icon Vistara News

ಮದ್ಯ ವ್ಯಸನಿ ಅಪ್ಪನನ್ನೇ ಕೊಂದ ಮಗ

ಮದ್ಯ ವ್ಯಸನಿ

ತುಮಕೂರು: ತಂದೆಯ ಮದ್ಯ ವ್ಯಸನಕ್ಕೆ ರೋಸಿ ಹೋದ ಮಗ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ತುಮಕೂರು ನಗರದ ಮರಳೂರು ದಿಣ್ಣೆಯ ಅಸೀಂವುಲ್ಲಾ (56) ಮೃತ ದುರ್ದೈವಿ.

ಅಸೀಂವುಲ್ಲಾ ನಿತ್ಯ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ತಾಯಿಗೆ ಹಿಂಸೆ ಕೊಡುತ್ತಿದ್ದುದನ್ನು ನೋಡಿ, ಅಸೀಂವುಲ್ಲಾ ಮಲಗಿದ್ದಾಗ ಮಗ ಇಮ್ರಾನ್‌ (24) ತಲೆದಿಂಬಿನಿಂದ ಆತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

ಇದನ್ನೂ ಓದಿ | ಹೆಣ್ಣಿನಂತೆ ಡ್ರೆಸ್‌ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್‌ ಡ್ರೆಸ್ಸರ್‌ ಕೊಲೆ, ರಿಕ್ಷಾ ಚಾಲಕನ ಕೃತ್ಯ

ಸ್ಥಳಕ್ಕೆ ತುಮಕೂರಿನ ಜಯನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಮ್ರಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | ತ್ರಿವಳಿ ಕೊಲೆ ತಾನೇ ಮಾಡಿದ್ದು ಎಂದಿದ್ದ ಆರೋಪಿ, ಖುಲಾಸೆಗೊಳಿಸಿದ ಹೈಕೋರ್ಟ್

Exit mobile version