Site icon Vistara News

Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

tumkur Murder

ತುಮಕೂರು: ತುಮಕೂರು (Tumkur Murder) ಜಿಲ್ಲೆಯ ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಗೇಟ್ ಬಳಿ ನಡೆದಿದ್ದ ಬೈಕ್ ಆ್ಯಕ್ಸಿಡೆಂಟ್ (Bike Accident) ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಳೆ ವೈಷಮ್ಯಕ್ಕೆ ಯುವಕನೊಬ್ಬ ಕೊಲೆಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಕೊಲೆಯಾದವನು.

ಪ್ರಕರಣ ಸಂಬಂಧ ಕುಣಿಗಲ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34), ಉಮೇಶ (32), ಚನ್ನಪ್ಪಗೌಡನಪಾಳ್ಯ ಗುರುರಾಜ್ (40), ಬಿದನಗೆರೆ ಗ್ರಾಮದ ಶಿವರಾಮ್ (38) ಹಾಗೂ ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಬಂಧಿತ ಆರೋಪಿಗಳಾಗಿದ್ದಾರೆ.

ಕೊಲೆಯಾದ ರಾಮಚಂದ್ರ

ಕಳೆದ ಎರಡು ವರ್ಷಗಳ ಹಿಂದೆ ರಾಮಚಂದ್ರ ಆರೋಪಿ ಶ್ರೀನಿವಾಸ್‌ಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದಾದ ಬಳಿಕ ರಾಮಚಂದ್ರ ಹಾಗೂ ಶ್ರೀನಿವಾಸ್ ಯಾವುದೇ ಗಲಾಟೆಗೆ ಹೋಗದೆ ಸುಮ್ಮನಿದ್ದರು. ಆದರೆ ಕೆಲ ದಿನಗಳ ಹಿಂದೆ ರಾಮಚಂದ್ರ ಮತ್ತೆ ಶ್ರೀನಿವಾಸನನ್ನು ಕೊಲೆ ಮಾಡುವುದಾಗಿ ಸ್ನೇಹಿತರು ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಈ ವಿಚಾರ ತಿಳಿದ ಶ್ರೀನಿವಾಸ್ ಇವನನ್ನು ಹೀಗೆ ಮಾಡಿಬಿಟ್ಟರೆ ನಮ್ಮನ್ನೇ ಮುಗಿಸ್ತಾನೆ ಎಂದು ರಾಮಚಂದ್ರನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಅದರಂತೆ ಶ್ರೀನಿವಾಸ್‌ ತನ್ನ ನಾಲ್ವರು ಸ್ನೇಹಿತರ ಜತೆ ಸೇರಿಕೊಂಡು ಕಳೆದ ಜೂನ್ 10 ರಂದು ಬೈಕ್‌ನಲ್ಲಿ ಹೋಗುತ್ತಿದ್ದ ರಾಮಚಂದ್ರಗೆ ಕಾರಿನಿಂದ ಡಿಕ್ಕಿ ಹೊಡೆದು ಕೊಂದಿದ್ದರು. ಬಳಿಕ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ರಸ್ತೆ ಅಪಘಾತ ಎಂದು ಬಿಂಬಿಸಿ ಶ್ರೀನಿವಾಸ್‌ ಗ್ಯಾಂಗ್‌ ಎಸ್ಕೇಪ್ ಆಗಿತ್ತು.

ಮೊದಮೊದಲು ಪೊಲೀಸರು ಇದು ಅಪಘಾತ ಎಂದೇ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ತನಿಖೆಗಿಳಿದು ಪರಿಶೀಲನೆ ನಡೆಸಿದಾಗಲೇ ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ತಿಳಿದುಬಂದಿತ್ತು. ಸದ್ಯ ಕುಣಿಗಲ್ ಪೊಲೀಸರು ಕೊಲೆಗೈದಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯು ಮುಂದುವರಿದಿದೆ.

ಇದನ್ನೂ ಓದಿ: Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ

ಕೃಷಿ ಇಲಾಖೆ ರಾಯಭಾರಿ ಹುದ್ದೆಯಿಂದ ಕೊಲೆ ಆರೋಪಿ ದರ್ಶನ್‌ ವಜಾ!

ಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿ ಪಾಲಾಗಿರುವ ನಟ ದರ್ಶನ್  (Actor Darshan) ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದರು. ದರ್ಶನ್‌ 2021ರ ಫೆಬ್ರವರಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ದರ್ಶನ್‌ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು. ಇದೀಗ ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ. ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ (Darshan) ಅವರು ಕೃಷಿ ಇಲಾಖೆಯ ರಾಯಭಾರಿ ಹುದ್ದೆಯಿಂದ ವಜಾ ಮಾಡುವುದು ಖಚಿತವಾಗಿದೆ. ದರ್ಶನ್‌ ಇನ್ನು ಕೃಷಿ ರಾಯಭಾರಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಎಂ.ಬಿ ಪಾಟೀಲ್ ಮಾತನಾಡಿ ʻʻದರ್ಶನ್‌ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ. ಈ ರೀತಿಯ ಘಟನೆ ಆದ ಬಳಿಕ ರಾಯಭಾರಿಯಾಗಿ ಮುಂದುವರಿಸಲು ಆಗುವುದಿಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿತ್ತು. ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ ಬಳಕೆ, ಅರಣ್ಯ ಸಿಬ್ಬಂದಿ ಜತೆ ‌ಬಾಡೂಟ, ಎಣ್ಣೆ ಪಾರ್ಟಿ ಮಾಡುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನಲಾಗಿತ್ತು. ನಟ ದರ್ಶನ್ ಅವರು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದು, ಜಿಲ್ಲೆಯ ಮುತ್ತೋಡಿ, ಭದ್ರ ವನ್ಯಜೀವಿ ತಾಣದಲ್ಲಿ ಖಾಸಗಿ ವಾಹನ ಬಳಕೆ ಮಾಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಜತೆ ‌ಬಾಡೂಟ, ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿತ್ತು. ವನ್ಯಜೀವಿ ಧಾಮಗಳಿಗೆ ದರ್ಶನ್ ಭೇಟಿ ನೀಡಿದ ಫೋಟೋಗಳು‌ ಸದ್ಯ ವೈರಲ್ ಆಗಿದ್ದವು.

ಇದನ್ನೂ ಓದಿ: Actor Darshan: ಎಷ್ಟೇ ದಿನ ಆದರೂ ಚಂದ್ರಣ್ಣನ ಶವ ಎತ್ತಲ್ಲ; ಅನು ತಂದೆ ನಿಧನಕ್ಕೆ ಸಂಬಂಧಿಕರ ಕಣ್ಣೀರು

ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ಕಾರುಗಳ ಬಳಕೆ ನಿಷಿದ್ಧ. ಆದರೂ ದರ್ಶನ್‌ ಅವರಿಗೆ ಖಾಸಗಿ ವಾಹನ ಬಳಸಲು ಅನುಮತಿ ನೀಡಲಾಗಿದೆ ಎಂದು ಚಿಕ್ಕಮಗಳೂರಿನ ಅರಣ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದರು. ಸಾಮಾನ್ಯ ಜನರಿಗೆ ಮಾತ್ರ ಕಠಿಣ ನಿಯಮಗಳು, ಸೆಲೆಬ್ರಿಟಿಗಳಿಗಾದರೆ ನಿಯಮ ಅನ್ವಯಿಸಲ್ಲವೇ ಎಂದು ಜನರು ಪ್ರಶ್ನಿಸಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಎಫ್‌ಐಆರ್‌

ಮೈಸೂರಿನ ಟಿ. ನರಸೀಪುರದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ನಾಲ್ಕು ಬಾರ್‌ ಹೆಡೆಡ್‌ ಗೂಸ್‌ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ಸಾಕಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಐದು ನೋಟಿಸ್‌ ನೀಡಿದ್ದು, ಇದುವರೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version