Site icon Vistara News

Tumkur News: ಶಿರಾದ ಬಳಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ; ಆರೋಪಿ ಬಂಧನ

An accused arrested in Bukkapattana of Shira taluk

ಶಿರಾ: ತಾಲೂಕಿನ ಬುಕ್ಕಾಪಟ್ಟಣ ವಲಯ ವ್ಯಾಪ್ತಿಯ ಚಿಂಕಾರ ಗುಂಗುರಪೇಟೆ ವನ್ಯಜೀವಿಧಾಮ ಪ್ರದೇಶದಲ್ಲಿ ಬಂದೂಕಿನೊಂದಿಗೆ ಬೇಟೆಯಾಡುವ ಉದ್ದೇಶದಿಂದ ಬಂದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ (Tumkur News) ಜರುಗಿದೆ.

ಗಾಣದ ಹುಣಸೆ ಗ್ರಾಮದ ರಮೇಶ್ ಜಿ. ಎಂಬುವವನೇ ಬಂಧಿತ ಆರೋಪಿ. ಬಂಧಿತನಿಂದ ಎಸ್‌ಬಿಬಿಎಲ್ ಬಂದೂಕು, ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಾದ ಕೋರ ಗ್ರಾಮದ ಚಿನ್ನಿ ಅಲಿಯಾಸ್ ಮೋಹನ್ ಕುಮಾರ್, ಗುಬ್ಬಿ ತಾಲೂಕಿನ ಕಾಟನಹಳ್ಳಿ ಗ್ರಾಮದ ಮಧು ಕೆ.ಎನ್.‌ ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Electoral Bond : ಆಯೋಗಕ್ಕೆ ಚುನಾವಣಾ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ

ಬುಕ್ಕಾಪಟ್ಟಣ ಅರಣ್ಯ ವಲಯ ಅಧಿಕಾರಿ ಸಿದ್ದರಾಜು ಎಸ್.ಎಸ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಕಿರಣ್ ಟಿ., ಗಸ್ತು ಅರಣ್ಯ ಪಾಲಕರಾದ ಶಶಿಕುಮಾರ್ ಬಿ.ಪಿ., ರೇವಣ್ಣ, ಸಿದ್ದಪ್ಪ ಕಾಳಗಿ ಹಾಗೂ ಪುಟ್ಟಸ್ವಾಮಿ ಮತ್ತು ನಾಗರಾಜ ನಾಯಕ ಪಾಲ್ಗೊಂಡಿದ್ದರು.

Exit mobile version