Site icon Vistara News

ಅಮಾಯಕ ವ್ಯಾಪಾರಿಯ ಕೈ ಮುರಿದರಾ ಪೊಲೀಸರು?

ತುಮಕೂರು: ಲಂಚ ಕೇಳುತ್ತಿದ್ದಾಗ ವಿಡಿಯೋ ಮಾಡಲು ಮುಂದಾದ ವ್ಯಾಪಾರಿಯ ಕೈಯನ್ನು ಪೊಲೀಸರು ಮುರಿದಿದ್ದಾರೆ. ಹೌದು. ಸಾಮಾನ್ಯವಾಗಿ ರೌಡಿಗಳು, ಅಥವಾ ಇತರೆ ಜಗಳಗಳಲ್ಲಿ ಕೈ ಮುರಿದರು ಎಂದು ಕೇಳಿರುತ್ತೇವೆ. ಇಲ್ಲಿ, ಕಾನೂನು ಪಾಲಿಸಬೇಕಾದ ಪೊಲೀಸರೇ ಕಾನೂನು ಮೀರಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಮಾಯಕ ವ್ಯಾಪಾರಿಯ ಮೇಲೆ ಪೊಲೀಸರು ದೌರ್ಜ್ಯನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವ್ಯಾಪಾರಿಯನ್ನು ಮೋಹನ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಮೋಹನ್‌ ಕುಮಾರ್‌ ಬಳಿ ಪೊಲೀಸರು ಲಂಚ ಕೇಳಿದ್ದಾರೆ. ಈ ಘಟನೆಯನ್ನು ಮೋಹನ್‌ ಕುಮಾರ್ ವಿಡಿಯೋ ಮಾಡಿದ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಲಾರಿ-ಖಾಸಗಿ ಬಸ್‌ ಡಿಕ್ಕಿಯಾಗಿ 8 ಮಂದಿ ಸಾವು

ಗೂಡ್ಸ್ ಆಟೋದಲ್ಲಿ ಹೋಗುತ್ತಿದ್ದಾಗ ಮೋಹನ್‌ ಕುಮಾರ್‌ ಅವರನ್ನು ಪೊಲೀಸರು ತಡೆದಿದ್ದರು. ವಾಹನಕ್ಕೆ ಸಂಬಂಧಿಸಿದ ದಾಖಲೆಯನ್ನು ಕೇಳಿದ್ದರು. ಪೊಲೀಸರ ಬೇಡಿಕೆಯಂತೆ ವ್ಯಾಪಾರಿ ದಾಖಲಾತಿಯನ್ನು ಪ್ರಸ್ತುತ ಪಡಿಸಿದ್ದಾರೆ. ಆದರೆ, ಇಷ್ಟಕ್ಕೇ ಸುಮ್ಮನಾಗದ ಪೊಲೀಸರು ವ್ಯಾಪಾರಿಯ ಬಳಿ ಲಂಚ ಕೇಳಿದ್ದಾರೆ. ಈ ವೇಳೆ ಮೋಹನ್‌ ಕುಮಾರ್ ತಮ್ಮ ಸಂಬಂಧಿಕರಿಂದ ಹಣವನ್ನು ತರಿಸಿಕೊಂಡು ಪೊಲೀಸರಿಗೆ ನೀಡಿದ್ದಾರೆ.

ಈ ದೃಶ್ಯವನ್ನು ಮೋಹನ್‌ ಕುಮಾರ್‌ ತಮ್ಮ ಫೋನ್‌ನಲ್ಲಿ ವಿಡಿಯೋ ಮಾಡಲು ಮುಂದಾದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮೋಹನ್‌ ಕುಮಾರ್‌ ಅವರ ಕೈಯ್ಯಿಗೆ ಹಾಗೂ ಮರ್ಮಾಂಗಕ್ಕೆ ಒದೆಯುವ ಮೂಲಕ ಹಲ್ಲೆ ಮಾಡಿದ್ದಾರೆ. ಹಾಗೂ ಸಂಬಂಧಿಕರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ವ್ಯಾಪಾರಿಯ ಕೈ ಮುರಿದದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Video| ಕೆನಡಾ ಸಂಸತ್ತಿನಲ್ಲಿ ಕನ್ನಡ; ಮಾತೃಭಾಷೆಯಲ್ಲೇ ಮಾತನಾಡಿದ ತುಮಕೂರು ಮೂಲದ ಸಂಸದ

Exit mobile version