Site icon Vistara News

Tumkur Tragedy : ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!

Tumkur tragedy

ತುಮಕೂರು: ತುಮಕೂರು ತಾಲೂಕಿನ (Tumkur News) ಕುಚ್ಚಂಗಿ ಕೆರೆಯಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ (Burnt Car found). ಅದರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳಿವೆ (Three dead bodies found in the Car). ಇದೊಂದು ಭಯಾನಕ ಕೊಲೆ ಪ್ರಕರಣ (Murder Case) ಎಂದು ಹೇಳಲಾಗುತ್ತಿದೆ.

ಕೆಎ 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ಸೋ ಕಾರು ಇದಾಗಿದ್ದು, ಕಾರಿನಲ್ಲಿ ಮೂವರು ಮೃತದೇಹಗಳು ಸುಟ್ಟ ರೀತಿಯಲ್ಲಿ (Tumkur Tragedy) ಪತ್ತೆಯಾಗಿವೆ. ಮೃತರ ಗುರುತು ಪತ್ತೆಯಾಗಿಲ್ಲ.

ತಡರಾತ್ರಿ ಕಾರನ್ನು ಈ ನೀರಿಲ್ಲದ ಕೆರೆಗೆ ಇಳಿಸಿ ಬೆಂಕಿ ಹಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ಬೆಂಕಿ ಹಚ್ಚಿ ಕೆಳಗೆ ತಳ್ಳಿರುವ ಸಾಧ್ಯತೆಯೂ ಇದೆ.

ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಆದರೆ, ಕಾರಿನಲ್ಲಿ ಇದ್ದ ಮೂವರು ಯಾರು? ಅವರನ್ನು ಬೆಂಕಿ ಹಚ್ಚಿ ಕೊಲ್ಲಲಾಯಿತೇ? ಕಾರು ಬೆಂಕಿ ಹತ್ತಿಕೊಂಡು ಹೊರಗೆ ಬರಲಾಗದೆ ಸುಟ್ಟು ಹೋದರೇ? ಹೀಗೆ ಹಲವು ಸಂಶಯಗಳಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Murder Case : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಿದಳು ಹೆಂಡತಿ

ನಾಗಮಂಗಲದಲ್ಲಿ ಅಜ್ಜಿ ಮತ್ತು ಮೊಮ್ಮಗಳನ್ನು ಮೂಟೆ ಕಟ್ಟಿ ಎಸೆದ ದುರುಳರು

ಮಂಡ್ಯ : ಭೀಕರ ಜೋಡಿ ಕೊಲೆಗೆ (Double Murder Case) ಮಂಡ್ಯ ಜಿಲ್ಲೆ (Mandya News) ಬೆಚ್ಚಿ ಬಿದ್ದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಗಿರಿ ಬಳಿ ಅಜ್ಜಿ ಮತ್ತು ಮೊಮ್ಮಗಳನ್ನು (Woman and Grand child Killed) ಕೊಂದು ಮೂಟೆ ಕಟ್ಟಿ ಹೊಂಡಕ್ಕೆ ಎಸೆದ ಭೀಕರ ಘಟನೆ (Crime News) ನಡೆದಿದೆ. ಅಜ್ಜಿ ಮತ್ತು ಮೊಮ್ಮಗಳ ಜೋಡಿ ಶವ ಹೊಂಡದಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರು ಹೌಹಾರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ಜಯಮ್ಮ(45) ಮತ್ತು ರಿಷಿಕ (3) ಎಂಬವರೇ ಕೊಲೆಯಾದ ದುರ್ದೈವಿಗಳು. ದುಷ್ಕರ್ಮಿಗಳು ಇವರಿಬ್ಬರನ್ನು ಕೊಂದು ಮೂಟೆಯಲ್ಲಿ ಕಟ್ಟಿ ಹೊಂಡಕ್ಕೆ ಎಸೆದಿದ್ದಾರೆ. ಮೂರು ದಿನಗಳ ಹಿಂದೆ ಈ ಕೊಲೆ ಮಾಡಲಾಗಿದ್ದು, ಮೂರು ದಿನಗಳ ಬಳಿಕ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಕಳೇಬರ ಪತ್ತೆಯಾಗಿದೆ. ಇವರು ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಇತ್ತೀಚೆಗಷ್ಟೇ ಚುಂಚನಗಿರಿ ಸಮೀಪದ ಪಾಳ್ಯ ಗ್ರಾಮಕ್ಕೆ ಬಂದು ನೆಲೆಸಿದ್ದರು.

ಚುಂಚನಗಿರಿ ಬಳಿ ಹೊಂಡದಲ್ಲಿ ಮೂಟೆ ತೇಲುತ್ತಿರುವ ಬಗ್ಗೆ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಟೆ ಹೊರ ತೆಗೆದು ಪರಿಶೀಲನೆ ನಡೆಸಿದರು. ಮೂಟೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಶವ ಕಂಡು ಪೊಲೀಸರೇ ಹೌಹಾರಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮೃತರ ಗುರುತು ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಸಾಗುತ್ತಿದೆ.

Exit mobile version